ನೆನಪೇ ಇರುವುದಿಲ್ಲ...
ನನಗೆ ನೆನಪಿನ ಶಕ್ತಿ ತುಂಬಾ ಕಡಿಮೆ. ಯಾರಾದರೂ ಏನಾದರೂ ಹೇಳಿದರೆ, ಓದಿದ್ದು ಹೆಚ್ಚು ಹೊತ್ತು ನೆನಪಿರುವುದೇ ಇಲ್ಲ. ಎಲ್ಲರೂ ನನ್ನನ್ನು 'ಮರೆಗುಳಿ' ಎಂದು ಹೀಯಾಳಿಸುತ್ತಾರೆ. ಜ್ಞಾಪಕ ಶಕ್ತಿ ಹೆಚ್ಚಿಸಿಕೊಳ್ಳುವುದು ಹೇಗೆ?
- ಮಹಾಂತೇಶ ಎಸ್.,ಧಾರವಾಡ
ನೆನಪಿನ ಶಕ್ತಿ ಕಡಿಮೆ ಇರಲು ನಿಮ್ಮಲ್ಲಿನ ಏಕಾಗ್ರತೆಯ ಕೊರತೆಯೂ ಕಾರಣವಾಗಿರಬಹುದು. ಏಕಾಗ್ರತೆ ಬೆಳೆಸಿಕೊಳ್ಳುವತ್ತ ಗಮನ ಕೊಡಿ. ನಿತ್ಯವೂ ತಪ್ಪಿಸದೆ ಅರ್ಧ ಗಂಟೆಯಾದರೂ ಧ್ಯಾನ ಮಾಡಿ. ಅದು ಖಂಡಿತ ನಿಮ್ಮ ಏಕಾಗ್ರತೆ, ನೆನಪಿನ ಶಕ್ತಿ ಎರಡನ್ನೂ ಹೆಚ್ಚಿಸಬಲ್ಲದು.
ಡಾ. ಸ್ಯಾಟಲೈಟ್
anekaby2@gmail.com