ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಬೆಳೆಯುವ ಸಿರಿ ಮೊಳಕೆಯಲ್ಲಿ

Vishwanath S
Updated On : 19 May 2013, 4:23 am

ಸ್ವಾಮಿ ವಿವೇಕಾನಂದರು ಬಾಲ್ಯದಲ್ಲಿದ್ದಾಗಲೇ ಅವರಲ್ಲಿದ್ದ ಸಾಧುತ್ವಗುಣ ಅಭಿವ್ಯಕ್ತಿಗೊಳ್ಳುತ್ತಿದ್ದುದನ್ನು ಕಾಣುತ್ತೇವೆ. ಸಾಧುಸಂತರನ್ನು ಕಂಡರೆ ನರೇಂದ್ರನಿಗೆ ಅತೀವ ಪ್ರೀತಿ. ಮನೆಗೆ ಬಂದ ಸಾಧುವಿಗೆ ಕೈಗೆ ಸಿಕ್ಕಿದ್ದನ್ನು, ಸಾಧು ಬೇಡಿದ್ದನ್ನು ನೀಡುತ್ತಿದ್ದ. ದಾನದಲ್ಲೂ ಎತ್ತಿದ ಕೈ. ಯಾರುಏನು ಕೇಳಿದರೂ ಇಲ್ಲ ಎನ್ನುವುದು ಅವರ ಬಾಯಲ್ಲಿ ಬರುತ್ತಿರಲಿಲ್ಲ. ಒಮ್ಮೆ ಹೊಸದಾದ ಬೆಲೆಬಾಳುವ ಧೋತಿಯನ್ನು ಉಟ್ಟಿದ್ದ. ಮನೆಗೆ ಭಿಕ್ಷೆಗೆ ಬಂದ ಸಾಧು ಮಗುವಿನ ಧೋತಿ ನೋಡಿ ಇಷ್ಟಪಟ್ಟಿದ್ದನ್ನು ಕಂಡು ಬಾಲಕ ನರೇಂದ್ರ ತಾಯಿಗೂ ಹೇಳದೇ ಆ ಕ್ಷಣವೇ ಬಿಚ್ಚಿ ಕೊಟ್ಟುಬಿಟ್ಟ.
ವಿಶ್ವನಾಥದತ್ತರ ಮನೆಗೆ ಎಷ್ಟೋ ಜನ ಸಾಧುಗಳು ಬರುತ್ತಿದ್ದರು. ಯಾರನ್ನೂ ಬರಿಗೈಯಲ್ಲಿ ಕಳುಹಿಸುವುದಿಲ್ಲ ಎಂಬುದು ಅವರಿಗೆಲ್ಲ ಗೊತ್ತಿತ್ತು. ಈ ಸದ್ಗುಣ ಮಗ ನರೇಂದ್ರನಲ್ಲಿಯೂ ಬಂದಿತ್ತು. ಬಾಲಕ ನರೇಂದ್ರನ ಮುಕ್ತ ದಾನವನ್ನು ಕಂಡು ಆಶ್ಚರ್ಯಗೊಂಡ ತಾಯಿ, ಯಾರಾದರೂ ಸಾಧುಗಳು ಭಿಕ್ಷೆಗಾಗಿ ಬಂದರೆ ಆ ಕ್ಷಣವೇ ನರೇಂದ್ರನನ್ನು ಒಂದು ಕೋಣೆಯಲ್ಲಿ ಕೂಡಿಟ್ಟು, ನಂತರ ಸಾಧುವಿಗೆ ಭಿಕ್ಷೆ ನೀಡಬೇಕಾಗುತ್ತಿತ್ತು.
ಹುಟ್ಟುಗುಣವಾಗಿ ಬಂದ ಈ ಸದ್ಗುಣ ಮುಂದೆ ಬೆಟ್ಟವಾಗಿ ಬೆಳೆದು ಸೇವಾಸಂಸ್ಥೆಯ ರೂಪ ತಳೆಯಿತು. ತಮ್ಮದು ಎಂಬುದು ಏನೂ ಇಲ್ಲದೆ ಎಲ್ಲವನ್ನೂ ರಾಮಕೃಷ್ಣ ಆಶ್ರಮ ಹಾಗೂ ರಾಮಕೃಷ್ಣ ಮಠಕ್ಕೆ ಅರ್ಪಿಸಿ ನಿಸ್ವಾರ್ಥಭಾವದಿಂದ ವಿವೇಕಾನಂದರು ವಿಶಾಲವಾದರು.

-ಆನಂದ ಎಸ್.ಎನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement