ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಟೀಕೆಗೆ ಜಗ್ಗದಿರಿ

ಜೀವನ ಎಂದಮೇಲೆ ಟೀಕೆಗಳು ಇರಲೇಬೇಕು. ಎಷ್ಟೋ ಸಂಜರ್ಭಗಳಲ್ಲಿ ಅವೇ ನಿಮ್ಮ ನಿಜವಾದ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತವೆ...

Rashmi Kasaragodu
Updated On : 20 May 2013, 1:36 am

ಜೀವನ ಎಂದಮೇಲೆ ಟೀಕೆಗಳು ಇರಲೇಬೇಕು. ಎಷ್ಟೋ ಸಂಜರ್ಭಗಳಲ್ಲಿ ಅವೇ ನಿಮ್ಮ ನಿಜವಾದ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತವೆ. ಟೀಕೆಗಳಿಲ್ಲದಿದ್ದರೆ ನೀವು  ಮಾಡಿದ್ದೇ ಸರಿ ಎನ್ನುವ ಅಂಹಂಕಾರ ನಿಮ್ಮ ತಲೆಯಲ್ಲಿ ತುಂಬಿಕೊಂಡುಬಿಡುತ್ತದೆ.  ಬೇರೆಯವರು ನಿಮ್ಮನ್ನು ಟೀಕಿಸದಿದ್ದರೆ, ನಿಮ್ಮ ಕೆಲಸದ ಬಗ್ಗೆ ಮಾತಾಡಿಕೊಳ್ಳದಿದ್ದರೆ ನೀವು ಟೀಕೆಗೂ ಅರ್ಹರಲ್ಲ ಅಥವಾ ನಿಮ್ಮನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದೇ ಭಾವಿಸಿಕೊಳ್ಳಬೇಕು.  
ನಾವು ಎಡವುವುದೇ ಇಲ್ಲಿ. ಇದನ್ನು ಹಿಂದುಮುಂದಾಗಿ ತಿಳಿಯುತ್ತೇವೆ. ನಮ್ಮ ಕೆಲಸ ಚೆನ್ನಾಗಿದೆ ಎಂದು ಹೇಳಿದ ತಕ್ಷಣ  ಉಬ್ಬಿ ಹೋಗುತ್ತೇವೆ. ಮುಂದಿನದನ್ನು ಕೇಳುವ ಗೋಜಿಗೇ ಹೋಗುವುದಿಲ್ಲ. ದಾಕ್ಷಿಣ್ಯಕ್ಕೆ ಚೆನ್ನಾಗಿದೆ ಅಂಥ ಹೇಳಿರುತ್ತಾರೆ. ನಿಮ್ಮ ಕೆಲಸವನ್ನು ಅವರು ಗಮನಿಸಿಯೇ ಇರದ ಸಾಧ್ಯತೆಯೂ ಇರುತ್ತದೆ.  ಕೇಳಿದ್ದಕ್ಕೆ ಏನೋ ಹೇಳಿ ಕೈ ತೊಳೆದುಕೊಂಡಿರುತ್ತಾರೆ. ಈ 'ಚೆನ್ನಾಗಿದೆ' ಎಂಬ ಒಂದೇ ಪದ ನಿಮ್ಮ ಅಥವಾ ನಿಮ್ಮ ಕೆಲಸದ ಮೌಲ್ಯಮಾಪನವೆಂದುಕೊಂಡಿರೋ ಖಂಡಿತಾ ನೀವು ಯಾವುದರಲ್ಲೂ ಯಶಸ್ವಿಯಾಗಲು ಸಾಧ್ಯವೇ ಇಲ್ಲ. ತೇಲಿಬಿಡುವ ಒಂದು ಪದದ ಹೊಗಳಿಕೆ, ಪ್ರಾಮಾಣಿಕ ಶ್ಲಾಘನೆ ಆಗಲಿಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ ಇದನ್ನು ಎಂದಿಗೂ ಗಂಭೀರವಾಗಿ ಪರಿಗಣಿಸಲೇಬಾರದು. ನಮ್ಮಲ್ಲೊಂದು ಮಾತಿದೆ. ಬೈಯ್ದು ಹೇಳುವವನು ಒಳ್ಳೆಯದಕ್ಕೆ ಹೇಳುತ್ತಾರೆ ಅಂತ. ಅವರು ನಿಮ್ಮನ್ನು  ಕಟುವಾಗಿ ಟೀಕಿಸುತ್ತಾರೆ. ಏಕೆಂದರೆ ಅವರು ನಿಮ್ಮ ಹಿತ ಬಯಸುವವರಾಗಿರುತ್ತಾರೆ. ನಿಮ್ಮಲ್ಲಿ ಸಣ್ಣ ದೋಷವೂ ಇರಬಾರದು ಎಂಬ ಕಾಳಜಿ ಅವರದ್ದು. ಆ ಎಚ್ಚರಿಕೆಯಿಂದಿದ್ದರೆ ಗುಣಮಟ್ಟವನ್ನು ಸದಾ ಕಾಯ್ದುಕೊಳ್ಳಲು ಸಾಧ್ಯ. ಇಲ್ಲದಿದ್ದರೆ ನನಗಿನ್ನಾರು ಸಾಟಿ, ನಾನು ಹೇಗಿದ್ದರೂ ಕಳೆದೀತು ಎಂಬ ಅಹಮಿಕೆಯೊಂದಿಗೆ ಮೌಲ್ಯ ಕಳಕೊಳ್ಳುವ ಅಪಾಯವಿದೆ. ನಿಮ್ಮ ಕೆಲಸದ ಬಗ್ಗೆ ನಿಮಗೆ ಸಾಕಷ್ಟು ತೃಪ್ತಿ ಇದ್ದಾಗಲೂ ಬರುವ ಟೀಕೆ ಸಹಜವಾಗಿ ನೋವು ತರುತ್ತದೆ. ಆದರೆ ನೋಯುವ, ನಿರಾಶರಾಗುವ ಅಗತ್ಯವಿಲ್ಲ. ನಿಮ್ಮ ಯಶಸ್ಸನ್ನು ಸಹಿಸಿಕೊಳ್ಳಲಾಗದೇ ಅವರು ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ. ಅದನ್ನು ಟೀಕೆಗಳ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.
  ಟೀಕೆಗಳ ಬಗ್ಗೆ ಹೀಗೆ ಯೋಚಿಸುವುದನ್ನು ರೂಢಿಸಿಕೊಳ್ಳಿ. ಆಗ ಟೀಕೆ ಬಂದಷ್ಟು ಖುಷಿಪಡಲಾರಂಭಿಸುತ್ತೀರಿ.

-ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement