ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಸಮಸ್ಯೆಯೋ? ಅವಕಾಶವೋ?

Rashmi Kasaragodu
Updated On : 20 May 2013, 1:36 am

ಒಂದು ಧಾರ್ಮಿಕ ಸಂಘ ತಮ್ಮ ಎಲ್ಲ ಸಮ್ಮೇಳನಗಳನ್ನು ಒಂದು ಹೋಟೆಲಿನಲ್ಲಿ ನಡೆಸುತ್ತಿತ್ತು. ಆ ಹೋಟೆಲಿನ ಪ್ರವೇಶಾಂಗಣದಲ್ಲಿ ಹೋಟೆಲ್‌ನ ಧ್ಯೇಯವಾಕ್ಯವನ್ನು ದೊಡ್ಡ ಅಕ್ಷರಗಳಲ್ಲಿ ಹೀಗೆಂದು ಬರೆದು ತೂಗುಹಾಕಲಾಗಿತ್ತು: 'ಸಮಸ್ಯೆಗಳೇ ಇಲ್ಲ; ಇರುವುದು ಕೇವಲ ಅವಕಾಶಗಳು'. ಒಮ್ಮೆ ಆ ಧಾರ್ಮಿಕ ಸಂಘದ ಕಾರ್ಯಕ್ರಮ ಆ ಹೋಟೆಲಿನಲ್ಲಿ ನಡೆಯುತ್ತಿರುವಾಗ, ಒಬ್ಬ ಪ್ರತಿನಿಧಿ ಹೋಟೆಲಿನ ಸ್ವಾಗತ ಕೌಂಟರಿಗೆ ಬಂದು ಅಲ್ಲಿದ್ದ ಸಿಬ್ಬಂದಿಗೆ ಹೇಳಿದ- 'ಕ್ಷಮಿಸಿ, ನನಗೆ ಒಂದು ಸಮಸ್ಯೆ ಇದೆ.'
ಅಲ್ಲಿದ್ದ ಗುಮಾಸ್ತ ನಗುತ್ತ ಹೇಳಿದ - 'ನಮಗೆ ಇಲ್ಲಿ ಸಮಸ್ಯೆಗಳೇ ಇಲ್ಲ, ಸರ್. ಇರುವುದು ಕೇವಲ ಅವಕಾಶಗಳು.'
'ನಿಮಗೆ ಹೇಗೆ ಬೇಕೋ ಹಾಗೆ ಕರೆಯಿರಿ' ಆ ಪ್ರತಿನಿಧಿ ಅಸಹನೆಯಿಂದ ಹೇಳಿದ- 'ನನಗೆಂದು ನಿಗದಿಪಡಿಸಿದ ಕೋಣೆಯಲ್ಲಿ ಒಬ್ಬ ಮಹಿಳೆ ಇದ್ದಾಳೆ.'

ಮೊಜಾರ್ಟನ ಸಲಹೆ
ಒಮ್ಮೆ ಒಬ್ಬ ತರುಣ ಸಂಗೀತಗಾರ ತನ್ನ ಪ್ರತಿಭೆಯನ್ನು ಹೇಗೆ ಇನ್ನೂ ಉತ್ತಮಗೊಳಿಸಬಹುದೆಂದು ಸಲಹೆ ಕೇಳಲು ಮೊಜಾರ್ಟನ ಬಳಿಗೆ ಹೋದ. 'ಮೊದಲು ಸರಳವಾದವುಗಳಿಂದ ಆರಂಭಿಸುವುದು ಒಳಿತೆಂದು ನನ್ನ ಭಾವನೆ'. ಮೊಜಾರ್ಟ್ ಹೇಳಿದ, 'ಉದಾಹರಣೆಗೆ, ಹಾಡುಗಳು.'
'ಆದರೆ ನೀವು ಮಗುವಿದ್ದಾಗಲೇ ಸಂಗೀತ ಕೃತಿಯನ್ನು ರಚಿಸುತ್ತಿದ್ದೀರಿ' ಆತ ವಿರೋಧಿಸಿದ. 'ಅದೇನೋ ಹೌದು. ಆದರೆ ನನ್ನ ಪ್ರತಿಭೆಯನ್ನು ಹೇಗೆ ವೃದ್ಧಿಸಬೇಕೆಂದು ಯಾರ ಬಳಿಯಾದರೂ ಸಲಹೆ ಕೇಳಲು ಹೋಗುವ ಅಗತ್ಯ ನನಗಿರಲಿಲ್ಲ' ಎಂದ ಮೊಜಾರ್ಟ್.

- ನವೀನ್ ಮಧುಗಿರಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement