ಆಶಾಕಿರಣ ಕಾಣುವುದೇ?
ಪಿಯುಸಿ ಫೇಲಾಗಿ ಬ್ಯುಟಿಶಿಯನ್, ಫ್ಯಾಷನ್ ಡಿಸೈನಿಂಗ್, ಟೆಕ್ಸ್ಟೈಲ್ ಡಿಸೈನಿಂಗ್ ಕೋರ್ಸ್ ಮಾಡಿದ್ದೇನೆ. 5 ವರ್ಷ ಹಿಂದೆ ಸುಳ್ಳು ಹೇಳಿ ಮದುವೆ ಮಾಡಿದರು. ಇಬ್ಬರು ಮಕ್ಕಳಿದ್ದಾರೆ. ಗಂಡ ಪರಮಸ್ವಾರ್ಥಿ ಮತ್ತು ದುಶ್ಟಟಗಳ ದಾಸ. ಆತ ಮತ್ತು ಮನೆಯವರ ಕಿರಿಕಿರಿ ಸಾಕಾಗಿದೆ. ಸ್ವಂತ ಉದ್ಯೋಗ ಮಾಡಿ ಎಂದರೆ ಮೂರು ಸಲ ಪ್ರಯತ್ನಿಸಿ ವಿಫಲನಾದೆ. ಮುಂದಿನ ದಾರಿ ಕಾಣುತ್ತಿಲ್ಲ.
- ಸೀಮಾ
ಸುದೀರ್ಘ ಪತ್ರ ಓದಿದೆ. ಆಯಾ ಸಂದರ್ಭಗಳಿಂದ ಸ್ವಂತ ಉದ್ಯಮ ನಡೆಸುವಾಗ ಸೋಲು ಕಂಡಿದ್ದೀರಿ. ನಿಮ್ಮಲ್ಲಿ ಯಶಸ್ವಿ ಉದ್ಯಮಿಯಾಗುವ ಎಲ್ಲ ಲಕ್ಷಣಗಳಿವೆ. ಧೈರ್ಯಗೆಡದೆ ಮತ್ತೊಮ್ಮೆ ಪ್ರಯತ್ನಿಸಿ. ಇನ್ನು ಗಂಡನೊಂದಿಗೆ ಬಾಳ್ವೆ ಸಾಧ್ಯವೇ ಇಲ್ಲ ಅಂತಾದರೆ ವಿಚ್ಛೇದನ ಪಡೆಯಬಹುದು. ಆದರೆ ಅದು ಕೊನೆಯ ಆಯ್ಕೆ ಆಗಿರಲಿ.
-ಡಾ. ಸ್ಯಾಟಲೈಟ್
anekaby2@gmail.com
ನಿಮ್ಮ ಏನೇ ಪ್ರಶ್ನೆಗೆ ಸ್ಯಾಟಲೈಟ್ ಉತ್ತರಿಸುತ್ತದೆ. ಇಲ್ಲಿ ಎಲ್ಲವೂ ನೇರಾನೇರ. ನಿಮ್ಮ ಸಮಸ್ಯೆಗಳನ್ನು ನಮಗೆ ಈಮೇಲ್ ಮಾಡಿ...