ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಕಿವಿ ಕಣ್ಣು ಚುರುಕಿರಬೇಕು

Rashmi Kasaragodu
Updated On : 22 May 2013, 3:17 am

ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಸುಳಿವು ಪತ್ತೆ ಮಾಡುವುದು, ಬಾಂಬ್ ಅಥವಾ ಸ್ಫೋಟಕ ವಸ್ತುಗಳು ಕಂಡುಬಂದಲ್ಲಿ ಅದನ್ನು ಪತ್ತೆ ಮಾಡಿ ತನ್ನ ಹ್ಯಾಂಡ್ಲರ್‌ಗೆ ತಿಳಿಸುವುದು ಪೊಲೀಸ್ ಶ್ವಾನಗಳ ಪ್ರಮುಖ ಕೆಲಸ.  ಅಷ್ಟೇ ಅಲ್ಲ ಸ್ಮಗ್ಲಿಂಗ್, ಮಾದಕ ವಸ್ತುಗಳ ಸಾಗಣೆ ಮೊದಲಾದ ಪ್ರಕರಣಗಳಲ್ಲಿ ಶಂಕಿತ ಸ್ಫೋಟಕ, ಮಾದಕ ವಸ್ತುಗಳ ಪತ್ತೆ ಮಾಡುವಲ್ಲೂ ಪ್ರಮುಖ ಪಾತ್ರ ವಹಿಸುತ್ತವೆ. ಏರ್‌ಪೋರ್ಟ್‌ಗಳಲ್ಲಿ, ರೇಲ್ವೆ ಹಾಗೂ ಬಸ್ ನಿಲ್ದಾಣಗಳಲ್ಲಿ, ಗಣ್ಯರ ಮನೆ ಬಳಿ, ಪ್ರಮುಖ ರಾಜಕೀಯ ಮುಖಂಡರು, ಗಣ್ಯರು ಯಾವುದೇ ಕಾರ್ಯಕ್ರಮಗಳಿಗೆ ಆಗಮಿಸುವ ವೇಳೆ ಅವರು ಕೂರುವ ಸ್ಥಳ, ಕಾರ್ಯಕ್ರಮ ನಡೆಯುವ ಸ್ಥಳವನ್ನು ಕಡ್ಡಾಯವಾಗಿ ಶ್ವಾನಗಳಿಂದ ಪರಿಶೀಲಿಸಲಾಗುತ್ತದೆ. ತಪಾಸಣೆ ಮಾಡದ ಹೊರತು ಗಣ್ಯರು ಅಲ್ಲಿಗೆ ಬರುವುದನ್ನು ಮುಂದೂಡಲಾಗುತ್ತದೆ. ರಾಜ್ಯದ ರಾಜ್ಯಪಾಲರು ಮುಂಜಾನೆ, ಸಂಜೆ ವಾಯುವಿಹಾರಕ್ಕೆ ಹೋಗುವ ಮುನ್ನ ಅವರು ನಡೆದಾಡುವ ಸ್ಥಳವನ್ನೂ ಶ್ವಾನಗಳಿಂದ ತಪಾಸಣೆ ನಡೆಸಲಾಗುತ್ತದೆ. ಇದು ಅವುಗಳ ಪ್ರತಿನಿತ್ಯದ ಕೆಲಸ.  ಹಾಗಾಗಿ ಅವುಗಳ ಆರೋಗ್ಯ ಅತಿಮುಖ್ಯ. ಅವುಗಳ ಜವಾಬ್ದಾರಿ ಹೆಚ್ಚಿರುವುದರಿಂದ ಕಣ್ಣು, ಕಿವಿ ಹಾಗೂ ವಾಸನೆ ಗುರುತು ಪತ್ತೆ ಮಾಡುವ ಗುಣ ಅವುಗಳಲ್ಲಿ ಚುರುಕಾಗಿರಬೇಕು. ಹಾಗಾದಲ್ಲಿ ಮಾತ್ರ ಆಗಬಹುದಾದ ಅನಾಹುತ ತಪ್ಪಿಸಬಹುದು. ಆದ್ದರಿಂದ ಶ್ವಾನಗಳಿಗೆ ಪ್ರತಿ ವಾರಕ್ಕೊಮ್ಮೆ ವೈದ್ಯಕೀಯ ತಪಾಸಣೆ ಮಾಡಿಸಲಾಗುತ್ತದೆ. ಅವುಗಳ ಆರೋಗ್ಯದ ಬಗ್ಗೆ ಗಮನಹರಿಸುವ ಕೆಲಸವನ್ನು ಆಯಾ ಶ್ವಾನದ ಹ್ಯಾಂಡ್ಲರ್‌ಗೆ ವಹಿಸಲಾಗಿರುತ್ತದೆ.


-  ಶಾಂತ ತಮ್ಮಯ್ಯ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement