ದೊಡ್ಡದಾಗಲು ಮದ್ದಿದೆಯಾ?
ಮದುವೆ ನಿಶ್ಚಯವಾಗಿದೆ. ಆದರೆ ಒಂದು ಸಮಸ್ಯೆ ಕಾಡುತ್ತಿದೆ. ನನ್ನದು ತುಂಬಾ ಚಿಕ್ಕದಾಗಿದೆ. ಆಗಾಗ ಹಸ್ತಮೈಥುನ ಮಾಡಿಕೊಳ್ಳುವ ಅಭ್ಯಾಸವಿದೆ. ಇದು ಮದುವೆಯಾದ ಮೇಲೆ ತೊಂದರೆಯಾಗಬಹುದಾ? ದೊಡ್ಡದಾಗಲು ಏನಾದರೂ ಔಷಧವಿದೆಯಾ?
- ಹೆಸರು ಬೇಡ, ಊರು ಬೇಡ
ಗಾತ್ರಕ್ಕೂ, ತೃಪ್ತಿಗೂ ಸಂಬಂಧವಿಲ್ಲ. ಜಾಹೀರಾತುಗಳನ್ನು ನಂಬಿ ಮೋಸ ಹೋದೀರಿ ಮತ್ತೆ, ಏಕೆಂದರೆ ದೊಡ್ಡದು ಮಾಡಲು ಔಷಧವೂ ಇಲ್ಲ. ಹಸ್ತಮೈಥುನದಿಂದ ಯಾವ ಅಪಾಯವೂ ಅಲ್ಲ. ಹಸ್ತಮೈಥುನ ಮಾಡಿಕೊಳ್ಳುತ್ತಿದ್ದೀರಿ ಎಂದಮೇಲೆ ಲೈಂಗಿಕವಾಗಿ ನೀವು ಸಮರ್ಥರಿದ್ದೀರಿ ಅಂತಾಯಿತು. ನಿಮ್ಮನ್ನು ಕಾಡುತ್ತಿರುವ ಸಂದೇಹಗಳು ಸಾಂಸಾರಿಕ ಜೀವನದ ಮೇಲೆ ಯಾವುದೇ ಪರಿಣಾಮ ಬೀರವು. ನಿಶ್ಚಿಂತೆಯಿಂದ, ನಿರ್ಭೀತಿಯಿಂದ ಮುಂದುವರಿಯಬಹುದು. ವೈವಾಹಿಕ ಜೀವನ ಸುಖಮಯವಾಗಿರಲಿ.
ಡಾ. ಸ್ಯಾಟಲೈಟ್
anekaby2@gmail.com
ನಿಮ್ಮ ಏನೇ ಪ್ರಶ್ನೆಗೆ ಸ್ಯಾಟಲೈಟ್ ಉತ್ತರಿಸುತ್ತದೆ. ಇಲ್ಲಿ ಎಲ್ಲವೂ ನೇರಾನೇರ. ನಿಮ್ಮ ಸಮಸ್ಯೆಗಳನ್ನು ನಮಗೆ ಈಮೇಲ್ ಮಾಡಿ...