ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಓಡುತ್ತಿರುವ ಕಮೋಡಗಳೇ

'ಬದುಕಿರುವಾಗಲೇ ನಿತ್ಯ ಸ್ವರ್ಗ ತೋರ್ಸು' ಅಂತ ಭಕ್ತ, ಭಗವಂತಲ್ಲಿ ಡಿಮ್ಯಾಂಡಿಟ್ಟ. ದೇವರು ಕೂಡಲೇ ಆತನಿಗೆ 'ಟಾಯ್ಲೆಟ್‌'...

Rashmi Kasaragodu
Updated On : 25 May 2013, 11:55 am

'ಬದುಕಿರುವಾಗಲೇ ನಿತ್ಯ ಸ್ವರ್ಗ ತೋರ್ಸು' ಅಂತ ಭಕ್ತ, ಭಗವಂತಲ್ಲಿ ಡಿಮ್ಯಾಂಡಿಟ್ಟ. ದೇವರು ಕೂಡಲೇ ಆತನಿಗೆ 'ಟಾಯ್ಲೆಟ್‌' ಅನ್ನು ಸ್ಯಾಂಕ್ಷನ್ ಮಾಡಿದನಂತೆ! ಶೌಚಾಲಯ ಸದ್ಯಕ್ಕೆ 3್ಢ5 ಅಡಿಯ, ಭೂಲೋಕದ ಸ್ವರ್ಗ.
ಆದರೆ, ಆ ಸ್ವರ್ಗದ ಖದರ್ ಈಗ ಬದಲಾಗಿದೆ. ಕುಂತಲ್ಲಿ ಕೂರಲ್ಲ. ನಿಂತಲ್ಲಿ ನಿಲ್ಲಲ್ಲ. ನೀವೆಷ್ಟೇ ತಿಣುಕಿ, ಗ್ರಿಪ್ ಹಿಡಿದು ಕೂತರೂ ಅದರ ವೇಗ ನಿಮ್ಮ 'ಮಲವಿಸರ್ಜನೆ' ಸ್ಪೀಡಿಗಿಂತ ಹೆಚ್ಚು. ಹಿತ್ತಲಕಡೆಯಲ್ಲಿದ್ದ ಟಾಯ್ಲೆಟ್ ಈಗ ಕರೆದಲ್ಲಿಗೆ ಬರುತ್ತೆ. ಬೇಕಾದ ಕಡೆಗೆ ನುಗ್ಗುತ್ತೆ!
ಇಂಗ್ಲೆಂಡಿನ ಲಿಂಕನ್‌ಶೈರ್‌ನಲ್ಲೊಬ್ಬ ನಲ್ಲಿ ರಿಪೇರಿ ಮಾಡುವವ 'ಜಗತ್ತಿನ ವೇಗದ ಟಾಯ್ಲೆಟ್‌' ನಿರ್ಮಿಸಿ, ಸ್ವರ್ಗದ ಸುಖವನ್ನು ಇನ್ನೂ ನಾಲ್ಕು ಗ್ರಾಂ. ಹೆಚ್ಚಿಸಿದ್ದಾನೆ. ಇಲ್ಲಿ ಕಾಲುಬಿಟ್ಟುಕೊಂಡು, ಆರಾಮಾಗಿ ಕೂತು ನಿಮ್ಮ 'ಸಂಕಟ'ವನ್ನು ಹೊರಹಾಕಬಹುದು. ಆದರೆ, ಮನೆ ಟಾಯ್ಲೆಟಿನಲ್ಲಿನ ಹಾಗೆ ನಿದ್ದೆ ಮಾಡುವ ಹಾಗಿಲ್ಲ. ಏಕೆಂದರೆ, ಇಲ್ಲಿದನ್ನು ನೀವೇ ಡ್ರೈವ್ ಮಾಡಬೇಕು.
ಈ ವೇಗದ ಟಾಯ್ಲೆಟಿಗೆ 140 ಸಿಸಿ ಎಂಜಿನ್ ಇದೆ. ನಾಲ್ಕು ಗೇರ್ ಇದೆ. ಬೈಕಿನ ಸೀಟಿಗಿಂತ ಸ್ವೀಟಾಗಿ ಇಲ್ಲಿ ಕಮೋಡನ್ನು ರೆಡಿಮಾಡಲಾಗಿದೆ. ಬ್ರೇಕ್ ಹಿಡಿದ ಹಾಗೆ ಕ್ಲಚ್ ಅಮುಕಿದರೆ, ಫ್ಲಶ್ ಆಗುತ್ತೆ. ಪೆಟ್ರೋಲ್ ಚಾಲಿತ ಟಾಯ್ಲೆಟ್ ಇದು. ಲೀಟರ್ ಪೆಟ್ರೋಲ್‌ಗೆ 33 ಕಿಲೋಮೀಟರ್ ಮೈಲೇಜ್. ಗಂಟೆಗೆ ವೇಗ 88.51 ಕಿಲೋಮೀಟರ್. ಕೊಳಾಯಿಗಾರ ಕ್ರಿಸ್ ಫರ್ಝ್ ಬೆಳ್ಳಂಬೆಳಗ್ಗೆ ಹತ್ತು ಕಿ.ಮೀ. ಸಾಗಿ, ನಿತ್ಯಕರ್ಮ ಮುಗಿಸುತ್ತಾನಂತೆ.
ಭಾರತದಲ್ಲಿ ಟಾಯ್ಲೆಟ್‌ಗಿಂತ ಹೆಚ್ಚಾಗಿ ಬೈಕುಗಳಿವೆ. ಪ್ರತೀ ಬೈಕನ್ನು ಹೀಗೆ ಟಾಯ್ಲೆಟ್ ಆಗಿ ಪರಿವರ್ತಿಸಿಕೊಂಡರೂ 'ಮಲಕ್ರಾಂತಿ' ಆದೀತು!

-ಮಿಲೀ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement