ಕರಣ್ ಜೋಹರ್ ಜನುಮ ದಿನ
- 1972.
- ಚಿತ್ರ ನಿರ್ಮಾಪಕ, ನಿರ್ದೇಶಕ, ಸಾಹಿತಿ, ವಸ್ತ್ರ ವಿನ್ಯಾಸಕ.
- ಡಿಡಿಎಲ್ಜೆ ಮೂಲಕ ನಟನಾಗಿ ಬಾಲಿವುಡ್ ಪ್ರವೇಶ.
- ಕುಚ್ಕುಚ್ ಹೋತಾ ಹೈ, ಕಭಿ ಖುಷಿ ಕಭಿ ಘಮ್, ಕಭಿ ಅಲ್ವಿದಾ ನಾ ಕೆಹನಾ, ಮೈ ನೇಮ್ ಈಸ್ ಖಾನ್ ಅವರ ಕೆಲವು ಹಿಟ್ ಸಿನಿಮಾಗಳು.
ದಿಲೀಪ್ ಪುಣ್ಯತಿಥಿ
- 1955-2012.
- ತಮಿಳು ನಟ. ಮೂಲತಃ ಮೈಸೂರಿನವರು.
- ಕಮಲ್ಹಾಸನ್ ಮತ್ತು ರಜನಿಕಾಂತ್ ಜತೆಗೂ ನಟಿಸಿದ್ದರು.
- ಹೃದಯಾಘಾತದಿಂದ ಸಾವು.
ದಿನಚರಿತೆ
- 1895- ಪುರುಷನೊಬ್ಬನೊಂದಿಗೆ ಅಸಭ್ಯ ವರ್ತನೆಯಲ್ಲಿ ತೊಡಗಿದ್ದ ಐರಿಷ್ ಸಾಹಿತಿ ಆಸ್ಕರ್ ವೈಲ್ಡ್ಗೆ ಎರಡು ವರ್ಷ ಜೈಲು ಶಿಕ್ಷೆ.
- 1953- ನೆವಡಾದಲ್ಲಿ ಮೊದಲ ಅಣ್ವಸ್ತ್ರ ಕ್ಷಿಪಣಿ ಪರೀಕ್ಷೆ ನಡೆಸಿದ ಅಮೆರಿಕ.
- 1955- ಜಗತ್ತಿನ 3ನೇ ಅತಿಎತ್ತರದ ಪರ್ವತ ಕಾಂಚನಜುಂಗಾ ಏರಿದ ಬ್ರಿಟಿಷ್ ಪರ್ವತಾರೋಹಿಗಳು- ಜೊ ಬ್ರೌನ್ ಮತ್ತು ಜಾರ್ಜ್ ಬ್ಯಾಂಡ್.
ಟ್ವೀಟ್ಸ್ಟಾಲ್
ಜಂಕ್ಫುಡ್ ಮೋಹ ಕಳಚಿಕೊಂಡರೆ ನಮ್ಮ ಬದುಕಿನ ಪಯಣ ಇನ್ನಷ್ಟು ದೀರ್ಘವಾಗಿರುತ್ತದೆ ಹಾಗೂ ನಾವು ಮತ್ತಷ್ಟು ಆರೋಗ್ಯವಂತರಾಗಿ ಬಾಳಬಹುದು.
-ಎರಿಕ್ ಎಂ. ಮೆಂಡಾ