ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಜ್ಞಾನದ ಆರಂಭ

Rashmi Kasaragodu
Updated On : 24 May 2013, 3:25 am

ಶಾಸ್ತ್ರಗಳಲ್ಲಿ ಇರುವುದಕ್ಕಿಂತಲೂ ಹೆಚ್ಚಿನದಾದ ಜ್ಞಾನವನ್ನು ತಾನು ನೀಡುವೆನೆಂದು ಒಬ್ಬ ಗುರು ತನ್ನ ಶಿಷ್ಯಂದಿರಿಗೆ ಭರವಸೆಯನ್ನಿತ್ತ.
ಒಬ್ಬ ಶಿಷ್ಯ ತನಗೆ ಆ ಜ್ಞಾನವನ್ನು ನೀಡಬೇಕೆಂದು ತುಂಬ ಕುತೂಹಲದಿಂದ ಗುರುವನ್ನು ಕೇಳಿಕೊಂಡ. ಅದಕ್ಕೆ ಗುರು ಹೇಳಿದ- 'ಸುರಿಯುತ್ತಿರುವ ಮಳೆಯಲ್ಲಿ ನಿನ್ನ ತಲೆ ಮತ್ತು ತೋಳುಗಳನ್ನು ಆಗಸದತ್ತ ಎತ್ತಿ ನಿಲ್ಲು. ಅದು ನಿನ್ನಲ್ಲಿ ಪ್ರಥಮ ಅರಿವನ್ನು ಮೂಡಿಸುತ್ತದೆ.'
ಮರುದಿನ ಶಿಷ್ಯ ಬಂದು ವರದಿ ಒಪ್ಪಿಸಿದ -'ನಾನು ನಿಮ್ಮ ಸಲಹೆಯನ್ನು ಅನುಸರಿಸಿದೆ. ನೀರಿನಿಂದ ತೊಯ್ದು ತೊಪ್ಪೆಯಾದೆ ಮತ್ತು ನನಗೆ ನಾನೇ ಒಬ್ಬ ಶತಮೂರ್ಖನಂತೆ ಭಾಸವಾಯಿತು.'
'ಸರಿ', ಗುರು ಹೇಳಿದ, 'ಪ್ರಥಮ ದಿನಕ್ಕೆ ಅದು ಸಾಕಷ್ಟು ಜ್ಞಾನೋದಯವಲ್ಲವೆ?'
ಪ್ರೀತಿಯ ಅಳತೆ

ಒಬ್ಬ ಡಾಕ್ಟರೇಟ್ ಪದವಿಯನ್ನು ಪಡೆಯಲು ತುಂಬಾ ಗಂಭೀರವಾದ ಅಧ್ಯಯನದಲ್ಲಿ ತೊಡಗಿದ್ದ. ಒಂದು ದಿನ ಅವನ ಪತ್ನಿ ಅವನನ್ನು ಕೇಳಿದಳು- 'ನೀನೇಕೆ ನನ್ನನ್ನು ಇಷ್ಟೊಂದು ಪ್ರೀತಿಸುತ್ತಿದ್ದೀ?'
ಕೂಡಲೇ ಅವನಿಂದ ಪ್ರತ್ಯುತ್ತರ ಬಂತು, 'ನೀನು 'ಇಷ್ಟೊಂದು' ಎಂದು ಹೇಳುವಾಗ ಪ್ರೀತಿಯ ಯಾವ ಆಯಾಮವನ್ನು ಉದ್ದೇಶಿಸಿ ಹೇಳಿದೆ? ತೀವ್ರತೆಯನ್ನೇ? ಆಳವನ್ನೇ? ಆವರ್ತನವನ್ನೇ? ಗುಣಮಟ್ಟವನ್ನೇ ಅಥವಾ ಅವಧಿಯನ್ನೇ?'
ನೀತಿ: ಗುಲಾಬಿಯ ಪಕಳೆಗಳನ್ನು ಸೀಳಿ ನೋಡುವುದರಿಂದ ಅದರ ಒಟ್ಟಂದವನ್ನು ಯಾರೂ ಕಾಣಲಾರರು.



-  ನಂದಿನಿ ಡಿ. ಕಾಮತ್

-  ಮೂಲ: ಅಂತೋನಿ ಡಿಮೆಲ್ಲೊ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments