ವಿವೇಕ ವಿಚಾರ
ಜಗತ್ತಿನಲ್ಲಿ ಎರಡು ಬಗೆಯ ಜನರನ್ನು ಕಾಣುತ್ತೇವೆ. ಒಂದು ಪ್ರವಾಹದ ಜತೆ ಕೊಚ್ಚಿಹೋಗುವವರು, ಇನ್ನೊಂದು, ಪ್ರವಾಹದ ವಿರುದ್ಧ ಈಜುವವರು. ಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೊಂಡು ಮುಂದೆ ಸಾಗುವವರು ಮೊದಲ ಗುಂಪಿನವರು, ಸನ್ನಿವೇಶದ ವಿರುದ್ಧ ನಿಂತು ಆ ಸನ್ನಿವೇಶವನ್ನೇ ಬದಲಾಯಿಸುವ ಸ್ವಭಾವದವರು ಎರಡನೆ. ವರ್ಗದವರು. ಹೊಂದಾಣಿಕೆಗಿಂತ ಬದಲಾವಣೆ ಇವರ ಮುಖ್ಯ ಗುಣ. ಈ ಎರಡನೆಯ ಗುಂಪಿಗೆ ಸೇರಿದವರು ಸ್ವಾಮಿ ವಿವೇಕಾನಂದರು. ಈ ಗುಣವನ್ನು ಅವರು ಬಾಲ್ಯದಲ್ಲಿದ್ದಾಗಲೇ ಎದುರಿಸಿದ ಸನ್ನಿವೇಶಗಳಲ್ಲಿ ಕಾಣುತ್ತೇವೆ.
ನರೇಂದ್ರ ಬಾಲಕನಾಗಿದ್ದಾಗ ಈಶ್ವರಚಂದ್ರ ವಿದ್ಯಾಸಾಗರರಿಂದ ಸ್ಥಾಪಿತವಾದ ಮೆಟ್ರೋಪಾಲಿಟನ್ ಶಾಲೆಗೆ ಸೇರಿಸಲಾಯಿತು. ಆಟ-ಪಾಠಗಳಲ್ಲಿ ಮುಂದಿದ್ದ ನರೇಂದ್ರ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದ. ಆದರೆ ಅವನ ತುಂಟತನ ಮಾತ್ರ ನಿಂತಿರಲಿಲ್ಲ. ನರೇಂದ್ರ ಬಾಲ್ಯದಲ್ಲಿಯೇ ತನ್ನ ದಿಟ್ಟತನವನ್ನು, ಸತ್ಯನಿಷ್ಠೆಯನ್ನು ತೋರುತ್ತಿದ್ದ. ಯಾರು ಏನೇ ಹೇಳಿದರೂ ತನಗೆ ಸತ್ಯವೆಂದು ತಿಳಿದುದನ್ನಲ್ಲದೆ ಬೇರೆ ಯಾವುದನ್ನೂ ಸ್ವೀಕರಿಸಲು ಸಿದ್ಧನಿರುತ್ತಿರಲಿಲ್ಲ; ಆ ಸನ್ನಿವೇಶ ತನಗೆ ಎದುರಾದರೂ ಪರವಾಗಿಲ್ಲ, ಸತ್ಯವನ್ನು ಕೈಬಿಟ್ಟು ಹೊಂದಾಣಿಕೆ ಮಾಡಿಕೊಳ್ಳುವ ಜಾಯಮಾನ ನರೇಂದ್ರನದಾಗಿರಲಿಲ್ಲ.
ನರೇಂದ್ರನ ತಾಯಿ ಕೂಡ ಮಗನ ಸತ್ಯನಿಷ್ಠೆಯನ್ನು ಪ್ರೋತ್ಸಾಹಿಸುತ್ತಿದ್ದಳು.
-ಆನಂದ ಎಸ್.ಎನ್.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.