ಏನ್ ಮಾಡ್ಲಿ?
ಅವನೆಂದರೆ ನನಗೆ ಇಷ್ಟವೊ ಇಲ್ಲವೊ ಗೊತ್ತಿಲ್ಲ. ಅವನನ್ನು ಬಿಟ್ಟಿರೋಕೆ ಆಗಲ್ಲ. ನಾನು ಏನು ಹೇಳಿದರೂ ಅವನು ಸೀರಿಯಸ್ ಆಗಿ ತಗೊಳ್ಳಲ್ಲ ಅನ್ನೋದು ಬೇಜಾರು. ಬೇಗ ಸಿಟ್ಟಾಗ್ತಾನೆ. ಜಗಳ ಮಾಡಿ ಮಾತು ಬಿಟ್ಟಾಗ ನೋವಾಗುತ್ತೆ. ಮಾತಾಡಿದ್ರೆ ಜಗಳ, ಅದಕ್ಕೆ ಮಾತಾಡೋದೇ ಬೇಡ ಅಂದ್ಕೋತಿನಿ. ಆಗ್ತಿಲ್ಲ. ಏನ್ಮಾಡ್ಲಿ?
- ವಿ.ಶಾಲಿನಿ
ಅತಿಯಾದ ಪ್ರೀತಿ ಇದ್ದಲ್ಲಿ ಹೀಗಾಗುತ್ತದೆ. ಅದನ್ನೇ ನಾವು ಪೊಸೆಸಿವ್ನೆಸ್ ಅನ್ನೋದು. ಕೆಲವು ಗಂಡಸರು ಮೊದಮೊದಲು ಬೇಜವಾಬ್ದಾರಿ ತೋರುತ್ತಾರೆ. ಮದುವೆ ನಂತರ ತೀರಾ ಗಂಭೀರವಾಗುತ್ತಾರೆ. ಹೀಗಾಗಿ ತಲೆಬಿಸಿ ಮಾಡಿಕೊಳ್ಳಬೇಡಿ. ನಿಮ್ಮನ್ನು ಗಾಢವಾಗಿ ಪ್ರೀತಿಸ್ತಾರೊ ಇಲ್ಲವೊ? ಮದುವೆಯಾದ ಮೇಲೆ ಚೆನ್ನಾಗಿ ನೋಡಿಕೊಳ್ಳಬಹುದಾ ಇಲ್ಲವಾ? ಅದನ್ನು ನೀವೇ ನಿರ್ಧರಿಸಿಕೊಂಡು ಮುಂದುವರಿಯಿರಿ.
-ಡಾ. ಸ್ಯಾಟಲೈಟ್
anekaby2@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.