ಬಿ.ಎಸ್.ಯಡಿಯೂರಪ್ಪ, ಕೆಜೆಪಿ ಮುಖಂಡ
1. 'ಬಿಜೆಪಿ'ಯಿಂದ 'ಕೆಜೆಪಿ'ಗೆ ಬರದವರ ಬಗ್ಗೆ 'ಕಾಮಿಡಿ ಟೈಮ್ ಗಣೇಶ್' ಸ್ಟೈಲ್ನಲ್ಲಿ ನೀವೇನೋ ಹಾಡು ಗುನುಗಿದ್ರಂತಲ್ಲ, ಯಾವ್ದದು?
- 'ಹೋಳಾದ್ ಹೋಳಾದ್ ಪಾರ್ಟಿಲಿ ಹೋದೋರ್ ಹೋದೋರ್ ಹೋಗಲಿ'
2. ನೀವು ಬಿಜೆಪಿ ಬಿಟ್ಟಿದ್ದರೂ 'ಮುದುಡಿದ ತಾವರೆ' ಮತ್ತೆ ಅರಳಬೇಕಾದರೆ ನೀಡುವ ಪರೋಕ್ಷ ಸಲಹೆ ಏನು?
- 'ಕೈ' ಕೆಸರಾದರೆ ಬಾಯಿ ಮೊಸರು.
3. ಅದ್ಸರಿ, 'ತೆಂಗಿನಕಾಯಿ' ಚಿಹ್ನೆ ಇಟ್ಕೊಂಡು ಬಿಜೆಪಿಗೆ ತಂದಿಟ್ಟ ಪರಿಸ್ಥಿತಿಗೆ ಏನಂತೀರಿ?
- 'ಹಣ್ಣುಗಾಯಿ-ನೀರುಗಾಯಿ'
(ಕಾಲ್ಪನಿಕ)
-ರವಿಕಾಂತ ಕುಂದಾಪುರ
ravikantha27@gmail.com