ಬೈಟುಕಾಫಿ

ಕುಣಿಗಲ್ ಕುದುರೆ

ಕಿಂಬರ್ಲಿ, ಆಡ್ಲರ್ ಎಂದಾಕ್ಷಣ ರೇಸ್‌ಪ್ರಿಯರಿಗೆ ನೆನಪಾಗೋದು ಕುಣಿಗಲ್ ನ ಸ್ಟಡ್ ಫಾರಂ.

ಕಿಂಬರ್ಲಿ, ಆಡ್ಲರ್ ಎಂದಾಕ್ಷಣ ರೇಸ್‌ಪ್ರಿಯರಿಗೆ ನೆನಪಾಗೋದು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಸ್ಟಡ್ ಫಾರಂ. ಇಲ್ಲಿನ ಕುದುರೆಗಳು ವಿಶ್ವವಿಖ್ಯಾತ. ದೇಶದ 40 ಸ್ಟಡ್ ಫಾರಂಗಳ ಪೈಕಿ ಇದಕ್ಕೆ ಮೂರನೇ ಸ್ಥಾನ. ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದ ಈ ಸ್ಟಡ್ ಫಾರಂ, ಕುಣಿಗಲ್‌ನ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೊಯ್ದಿದೆ. ಇಲ್ಲಿ ರೇಸಿಂಗ್ ಕುದುರೆಗಳ ಸಂತಾನೋತ್ಪತ್ತಿ ಮಾಡಲಾಗುತ್ತದೆ. ಮುಂಬೈ, ದೆಹಲಿ, ಕೋಲ್ಕತ್ತಾ, ಚೆನ್ನೆ ೈ, ಹೈದರಾಬಾದ್, ಗುಜರಾತ್‌ಗಳಲ್ಲಿ ನಡೆಯುವ ರೇಸ್‌ಗಳಲ್ಲಿ ಇಲ್ಲಿನ ಕುದುರೆಗಳದ್ದೇ ಮಿಂಚಿನ ಓಟ.
ಇಲ್ಲಿನ ಕುದುರೆಗಳು 18ನೇ ಶತಮಾನಕ್ಕೂ ಹಿಂದಿನ 'ಥೆರೋಬ್ರೆಡ್‌' ತಳಿಯವು. ಬೈರ್ಲಿ ಟಕರ್, ಡೇರ್ಲಿ ಅರೇಬಿಯನ್ ಹಾಗೂ ಗಡಾಲ್ಫಿನ್ ಅರೇಬಿಯನ್ ಗಂಡು ಕುದುರೆಗಳನ್ನು ಹೆಣ್ಣು ಕುದುರೆಗಳೊಂದಿಗೆ ಕೂಡಿಸಿ ಥೆರೋಬ್ರೆಡ್ ತಳಿ ಸಂವರ್ಧನೆ ಮಾಡಲಾಗುತ್ತಿದೆ. ಗಂಡು ಕುದುರೆಗಳನ್ನು 'ಸ್ಟ್ಯಾಲಿನ್‌' ಮತ್ತು ಹೆಣ್ಣು ಕುದುರೆಗಳನ್ನು 'ಮೆರಿನ್‌' ಎನ್ನುತ್ತಾರೆ. ಜನವರಿಯಿಂದ ಜೂನ್‌ವರೆಗೆ ಸಂತಾನೋತ್ಪತ್ತಿ. ತಳಿ ಅಭಿವೃದ್ಧಿ ವೇಳೆ ಗಂಡು ಮತ್ತು ಹೆಣ್ಣು ಕುದುರೆಗಳನ್ನು ಪರೀಕ್ಷೆಗೆ ಪಳಪಡಿಸಲಾಗುತ್ತದೆ. ನಿತ್ಯ ಬಾಣಂತಿ ಕುದುರೆಗಳನ್ನ ಪರೀಕ್ಷಿಸಲಾಗುತ್ತದೆ. ಚಿಕಿತ್ಸೆ ನೀಡಲು ವಿಶೇಷ ಪಶು ವೈದ್ಯಕೀಯ ಸೌಲಭ್ಯ, ಸುಸಜ್ಜಿತ ವೈದ್ಯ ತಂಡವಿದೆ.
ಈ ಫಾರಂನ ಜೀವಾಳ ಸ್ಟ್ಯಾಲಿನ್‌ಗಳು. ಇಲ್ಲಿ 5 ಸ್ಟ್ಯಾಲಿನ್‌ಗಳಿವೆ. ಇವು ರೇಸ್‌ಪ್ರಿಯರ ಕಣ್ಮಣಿಗಳು. ಪ್ರಸ್ತುತ 4 ಸ್ಟ್ಯಾಲಿನ್‌ಗಳನ್ನು ಸಂತಾನೋತ್ಪತ್ತಿಗೆ ಬಳಸಿಕೊಳ್ಳಲಾಗುತ್ತಿದೆ. ಅವುಗಳೆಂದರೆ, ಬ್ರಿಟನ್‌ನ ಬ್ರೇವ್ ಆಕ್ಟ್, ಅಮೆರಿಕದ ಆಡ್ಮಿರಲ್ ಆಫ್ ದಿ ಫ್ಲೀಟ್ ಮತ್ತು ತೆಜಾನೋ, ಐರ್ಲೆಂಡ್‌ನ ಬರ್ಡನ್ ಆಫ್ ಪ್ರೂಫ್. ಮತ್ತೊಂದು ಆಡ್ಲರ್, ಇದೇ ಫಾರಂನ ಇಂಡಿಯನ್ ಸ್ಟ್ಯಾಲಿನ್. ಆಡ್ಲರ್‌ಗೆ ವಯಸ್ಸಾಗಿರೋದ್ರಿಂದ ಟೇಸಿಂಗ್‌ಗಾಗಿ ಬಳಸಿಕೊಳ್ಳಲಾಗುತ್ತಿದೆ. ಈ ಕುದುರೆಗಳು ಗಂಟೆಗೆ ಸರಾಸರಿ 60 ಕಿ.ಮೀ. ವೇಗದಲ್ಲಿ ಓಡುತ್ತವೆ. ಹುಟ್ಟಿದಾಗ 50 ಕೆ.ಜಿ ತೂಗುವ ಕುದುರೆಗಳು ರೇಸ್‌ನಲ್ಲಿ ಭಾಗವಹಿಸುವ ವೇಳೆಗೆ 500 ಕೆ.ಜಿ ತೂಗುತ್ತವೆ.  ಅಗತ್ಯ ತರಬೇತಿ ನೀಡಲು ರೇಲ್ಡೀಫೀಲ್ಡ್ ಮತ್ತು ವಾಕರ್‌ಗಳನ್ನು ನಿರ್ಮಿಸಲಾಗಿದೆ. ಪ್ರತಿನಿತ್ಯ ಬೆಳಿಗ್ಗೆ- ಸಂಜೆ ವಾಕರ್, ರೇಡ್ ಫೀಲ್ಡ್‌ನಲ್ಲಿ 2 ವರ್ಷದೊಳಗಿನ ಕುದುರೆಗಳಿಗೆ ಓಡುವ ಸ್ಪೀಡ್ ಕಲಿಸಿ, 2 ವರ್ಷದ ನಂತರ ನಾನಾ ಕಡೆ ರೇಸ್‌ಗೆ ಕಳಿಸಲಾಗುತ್ತೆ. ಕುದುರೆಗಳಿಗೆ ಪೌಷ್ಟಿಕ ಆಹಾರವನ್ನು ವಿದೇಶಗಳಿಂದ ತಂದು ವೈದ್ಯರ ಸಲಹೆ ಮೇರೆಗೆ ಕೊಡಲಾಗುತ್ತೆ. ದಿನದ 24 ಗಂಟೆ ಕುಡಿಯಲು ಶುದ್ಧ ನೀರನ್ನು ಒದಗಿಸುತ್ತಾರೆ.
ಕುದುರೆ ಮಾತ್ರವಲ್ಲದೆ ನಾನಾ ರೀತಿಯ ಪಕ್ಷಿಗಳೂ ಫಾರಂನಲ್ಲಿ ಆಶ್ರಯ ಪಡೆಯುತ್ತಿವೆ. ಈ ಫಾರಂನ ಒಟ್ಟು ವಿಸ್ತೀರ್ಣ 443 ಎಕರೆ. 240 ಕೆಲಸಗಾರರಿದ್ದು, ಎಲ್ಲರೂ ಸ್ಥಳಿಯರೇ. ಇದನ್ನು ನಡೆಸಲು ವಾರ್ಷಿಕ ಸುಮಾರು 60 ಕೋಟಿ ಖರ್ಚಿದೆ. ತಿಂಗಳಿಗೆ ಒಂದು ಕುದುರೆಗೆ 20ರಿಂದ 28 ಸಾವಿರ. ಇಂಥ ಅಪರೂಪದ ಫಾರಂ ಸಮಸ್ಯೆ ಎದುರಿಸುವಂತಾಗಿತ್ತು. ಇತ್ತೀಚೆಗೆ ಫಾರಂ ಮೂಲಕ ಹಾಸನ-ನೆಲಮಂಗಲ ರೈಲು ಮಾರ್ಗ ಹಾದುಹೋಗುವ ನಕ್ಷೆ ರೂಪಿಸಲಾಗಿತ್ತು. ಪರ್ಯಾಯ ರೈಲು ಮಾರ್ಗ ಸೂಚಿಸಿ ಸರ್ಕಾರ ಈ ಸಮಸ್ಯೆಯನ್ನು ಈಗ ಬಗೆಹರಿಸಿದೆ.
ವಿಶ್ವ ರೇಸಿಂಗ್‌ನಲ್ಲಿ ಛಾಪು ಮೂಡಿಸಿದ್ದ ಕಿಂಬರ್ಲಿ ಕುದುರೆ ತವರು ಇದೇ ಫಾರಂ. ಕಿಂಬರ್ಲಿಯ ಮರಿಗಳು ದೇಶದೊಳಗಿನ ರೇಸ್‌ಗಳಲ್ಲಿ ದೊಡ್ಡ ಸಾಧನೆ ಮಾಡಿವೆ. ವಿದೇಶಿ ರೇಸ್‌ಗಳಲ್ಲೂ ಹೆಸರು ಮಾಡಿವೆ. ಅಮೆರಿಕಾದ ರೇಸ್‌ನಲ್ಲಿ ಗೆದ್ದ ಮೊದಲ ಭಾರತೀಯ ಕುದುರೆ ಆಡ್ಲರ್ ಕೂಡ ಇಲ್ಲಿಯದೇ. ಇದು ಈವರೆಗೆ ಭಾಗವಹಿಸಿರುವ 9 ರೇಸ್‌ಗಳಲ್ಲೂ ಚಾಂಪಿಯನ್ ಆಗಿ ದೇಶದ ಗಮನ ಸೆಳೆದಿದೆ.

- ಅರುಣ ಎಂ.ಜಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜಿನಾಮೆ ಕೊಡದ ದೀದಿಗೆ ಶಾಕ್; ವೀಟೋ ಅಧಿಕಾರ ಬಳಸಿ ಮಂತ್ರಿಮಂಡಲವನ್ನೇ ವಿಸರ್ಜಿಸಿದ ರಾಜ್ಯಪಾಲ ಆರ್‌.ಎನ್ ರವಿ!

West Bengal: ಸುವೇಂದು ಅಧಿಕಾರಿ ಪಿಎ ಹತ್ಯೆ; ಕೊಲೆಗೆ ಬಳಸಲಾಗಿದ್ದ ಬೈಕ್ ವಶಕ್ಕೆ, ಪೊಲೀಸ್ ತನಿಖೆ ಚುರುಕು

IPL 2026: Mitchell Marsh ಸ್ಫೋಟಕ ಶತಕ, RCB ವಿರುದ್ಧ ಬೃಹತ್ ಮೊತ್ತದತ್ತ LSG! ಪಂದ್ಯಕ್ಕೆ ಮಳೆ ಅಡ್ಡಿ

ಮಹಾರಾಷ್ಟ್ರ ಡಿಸಿಎಂ Eknath Shinde ಇದ್ದ ಹೆಲಿಕಾಪ್ಟರ್ ದಾರಿ ತಪ್ಪಿ ಅವಘಡ; ಪೈಲಟ್ ಸಮಯ ಪ್ರಜ್ಞೆ, ಸುರಕ್ಷಿತ ಲ್ಯಾಂಡಿಂಗ್; Video!

ಕ್ರಿಕೆಟಿಗ ಸೂರ್ಯ ಕುಮಾರ್ ಯಾದವ್-ದೇವಿಶಾ ಶೆಟ್ಟಿ ಜೋಡಿಗೆ ಹೆಣ್ಣು ಮಗು ಜನನ

SCROLL FOR NEXT