ಆ ದಿನಗಳಲ್ಲಿ ಕಪ್ಪಿನ ಚಿಂತೆ
ಅವಿವಾಹಿತೆ. ನನಗೆ ಚರ್ಮದ ತೊಂದರೆ ಇದೆ. ಮುಟ್ಟಿನ ದಿನಗಳಲ್ಲಿ ಮೈಬಣ್ಣ ಕಪ್ಪಗಾಗುತ್ತದೆ. ನನ್ನ ಕೈಗಳು ಯಾವಾಗಲೂ ಕಪ್ಪಗಿರುತ್ತವೆ. ತುಂಬಾ ಭಯವಾಗುತ್ತಿದೆ.
- ನಂದಿನಿ, ಹೊಸಪೇಟೆ
ಹಾರ್ಮೋನುಗಳು ತ್ವಚೆ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತವೆ. ಗರ್ಭಿಣಿಯಾಗಿದ್ದಾಗ ಚರ್ಮ ಸ್ವಲ್ಪಮಟ್ಟಿಗೆ ಕಪ್ಪಾಗುವುದು ಕೂಡ ಹಾರ್ಮೋನುಗಳ ಏರಿಳಿತದಿಂದಲೇ. ಆದರೆ ನಿಮ್ಮ ಸಮಸ್ಯೆ ಸ್ವಲ್ಪ ಭಿನ್ನವಾದದ್ದು. ಋತುಸ್ರಾವದ ಅವಧಿಯಲ್ಲಿ ಮೈಬಣ್ಣ ಕಪ್ಪಾಗುವುದು ತೀರಾ ಅಂದರೆ ತೀರಾ ವಿರಳ. ಮುಂದಿನ ಸಲ ಮುಟ್ಟಿನ ಸಂದರ್ಭದಲ್ಲಿ ಈ ತೊಂದರೆ ಕಾಣಿಸಿಕೊಂಡರೆ ಆಗಲೇ ಅಂದರೆ ತೊಂದರೆ ಇದ್ದಾಗಲೇ ಹತ್ತಿರದ ಗೈನಕಾಲಜಿಸ್ಟ್ ಅವರನ್ನು ಭೇಟಿ ಮಾಡಿ.
-ಡಾ. ಸ್ಯಾಟಲೈಟ್
anekaby2@gmail.com