ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಸರ್ಕಾರಿ ಗೌರವ

Lingaraj Badiger
Updated On : 28 May 2013, 3:47 am

ಶ್ವಾನಗಳು ನಿವೃತ್ತಿ ಹೊಂದಿದರೆ ಅವುಗಳನ್ನು ಬೀದಿಗೆ ಬಿಡುವುದಿಲ್ಲ. ಬದಲಾಗಿ ಬೆಂಗಳೂರಿನ ಹೆಬ್ಬಾಳದ ಪಶುವೈದ್ಯಕೀಯ ಕಾಲೇಜು ಸಮೀಪದಲ್ಲಿರುವ ಕ್ಯೂಪಾ ಸಂಸ್ಥೆಗೆ ಕೊಡಲಾಗುತ್ತದೆ.
ಒಟ್ಟಾರೆ ನಿವೃತ್ತಿ ನಂತರ ರಾಜ್ಯದ ಎಲ್ಲಾ ಪೊಲೀಸ್ ಶ್ವಾನಗಳನ್ನು ಪ್ರಾಣಿದಯಾ ಸಂಘಕ್ಕೆ ಕೊಡಲಾಗುತ್ತದೆ. ಅಲ್ಲಿ ಅವುಗಳಿಗೆ ಆಶ್ರಯ ಕಲ್ಪಿಸಲಾಗುತ್ತದೆ. ಒಂದು ವೇಳೆ ನಿವೃತ್ತಿಗೂ ಮುನ್ನ ಶ್ವಾನಗಳು ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಕೊಡಿಸಿದರೂ ಗುಣಮುಖವಾಗದಿದ್ದಲ್ಲಿ ಅವುಗಳನ್ನು ದಯಾ ಸಂಘಕ್ಕೆ ಕೊಡಲಾಗುತ್ತದೆ.
ನಿವೃತ್ತಿಗೂ ಮುನ್ನ ನಿಧನ ಹೊಂದಿದರೆ ಅಂತಹ ಶ್ವಾನಗಳಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಅದಕ್ಕಾಗಿ ಶ್ವಾನದಳ ಇರುವ ಸ್ಥಳದಲ್ಲಿ ಪ್ರತ್ಯೇಕ ಸ್ಥಳ ಇರಿಸಲಾಗಿರುತ್ತದೆ. ಆ ಸ್ಥಳದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಅವುಗಳಿಗೆ ಯಾವುದೇ ರೀತಿಯ ನಿವೃತ್ತಿ ವೇತನ ಇರುವುದಿಲ್ಲ.
ಸಾರ್ವಜನಿಕರು ಆ ಶ್ವಾನಗಳನ್ನು ಖರೀದಿಸಿ ಮನೆಗೆ ತೆಗೆದುಕೊಂಡು ಹೋಗಬೇಕೆಂದು ಇಚ್ಚಿಸಿದಲ್ಲಿ ಅದಕ್ಕೆ ತನ್ನದೇ ಆದ ನಿಯಮಗಳಿದ್ದು, ಆ ನಿಯಮದಡಿ ಖರೀದಿಸಬೇಕಿದೆ. ಇದಕ್ಕೆ ಸರ್ಕಾರದ ಒಪ್ಪಿಗೆ ಅಗತ್ಯ ಇರುವುದಿಲ್ಲ. ಆದರೆ, ಪ್ರಾಣಿದಯಾ ಸಂಘದಿಂದ ಒಪ್ಪಿಗೆ ಪಡೆದರೆ ಹಾಗೂ ಅದರದ್ದೇ ಕೆಲವು ನಿಯಮ ಪಾಲಿಸಿದರೆ ಖರೀದಿಗೆ ಅವಕಾಶ ಸಿಗಬಹುದು.
ಒಂದು ವೇಳೆ ಸಾರ್ವಜನಿಕರಿಗೆ ನೀಡಿದರೆ ಶ್ವಾನಗಳನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂಬ ಉದ್ದೇಶದಿಂದ ಕೊಡುವುದಿಲ್ಲ. ಅಲ್ಲದೆ, ಇಲಾಖೆಯಲ್ಲಿ ಅವುಗಳಿಗೆ ತಮ್ಮದೇ ಆದ ರೀತಿಯಲ್ಲಿ ವ್ಯವಸ್ಥಿತ ಸೌಲಭ್ಯ ಇರುತ್ತದೆ. ಆದರೆ, ಮನೆಗಳಲ್ಲಿ ಹಾಗಾಗುವುದಿಲ್ಲ.
ಈ ಹಿಂದೆ ಪೊಲೀಸ್ ಶ್ವಾನಗಳು ನಿವೃತ್ತಿ ನಂತರ ಪ್ರಾಣಿದಯಾ ಸಂಘಕ್ಕೆ ನೀಡುವ ಮುನ್ನ ಆಯಾ ಶ್ವಾನದ ಹ್ಯಾಂಡ್ಲರ್ ಇಚ್ಚಿಸಿದಲ್ಲಿ ಅವರಿಗೆ ನೀಡಲಾಗುತ್ತಿತ್ತು. ಈಗ ಆ ಪದ್ಧತಿ ಬದಲಾಗಿದೆ.
-ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments