ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಬೆರಳಚ್ಚು ಘಟಕ

Lingaraj Badiger
Updated On : 31 May 2013, 4:20 am

ಅಪರಾಧಿ ಪತ್ತೆ ಮಾಡುವಲ್ಲಿ ಬೆರಳಚ್ಚು ಎಲ್ಲಾ ಸಾಕ್ಷಿಗಳಿಗಿಂತ ಬಹುಮುಖ್ಯ ಪಾತ್ರ ವಹಿಸುತ್ತದೆ.
ಅವಳಿ ಜವಳಿ ಮಕ್ಕಳ ಮುಖ ನೋಡಲು ಒಂದೇ ರೀತಿ ಅಥವಾ ಅವರ ರಕ್ತದ ಗುಂಪು ಒಂದೇ ಇರಬಹುದು, ಅವರ ಗುಣ ಒಂದೇ ರೀತಿ ಇರಬಹುದು. ಆದರೆ ಅವರ ಬೆರಳಚ್ಚೂ ಸಹ ಒಂದೇ ರೀತಿ ಇರುವುದಿಲ್ಲ.
ಹಾಗಾಗಿ ಬೆರಳಚ್ಚು ಆರೋಪಿಯನ್ನು ಪತ್ತೆ ಮಾಡುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ. ಬೇರೆಲ್ಲ ಸಾಕ್ಷಿಗಳಿಗಿಂತ ಘಟನೆ ನಡೆದ ಸ್ಥಳದಲ್ಲಿ ಸಿಗುವ ಬೆರಳಚ್ಚು, ಅಥವಾ ಯಾವುದೋ ಕೊಲೆ ಪ್ರಕರಣದಲ್ಲಿ ಚಾಕುವಿನ ಮೇಲೆ ಪತ್ತೆಯಾಗುವ, ಕಳ್ಳತನದಂಥ ಪ್ರಕರಣಗಳಲ್ಲಿ ಕಿಟಕಿ ಬಾಗಿಲು ಅಥವಾ ಆ ಸ್ಥಳದಲ್ಲಿನ ವಸ್ತುಗಳ ಮೇಲೆ ಇರುವ ಬೆರಳಚ್ಚುಗಳು ಪ್ರಕರಣದಲ್ಲಿ ಬಹುಮುಖ್ಯವಾಗಿವೆ.
ಹಾಗಾಗಿ ಪ್ರತಿ ಅಪರಾಧ ಪ್ರಕರಣ ನಡೆದ ಸ್ಥಳದಲ್ಲಿ ಪೊಲೀಸರು, ಶ್ವಾನದಳ, ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿಯಂತೆ ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸುತ್ತಾರೆ. ಅಲ್ಲಿನ ಸ್ಥಳ ಪರಿಶೀಲಿಸಿ ಬೆರಳಚ್ಚುಗಳ ಫೋಟೋ ತೆಗೆದುಕೊಂಡು ಹೋಗುತ್ತಾರೆ. ನಂತರ ಅದನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಕಳುಹಿಸಿಕೊಡುತ್ತಾರೆ. ನಂತರ ಪೊಲೀಸರು ಶಂಕಿತ ಆರೋಪಿಗಳ ಬೆರಳಚ್ಚು ಹಾಗೂ ಘಟನೆ ನಡೆದ ಸ್ಥಳದಲ್ಲಿ ಪತ್ತೆಯಾಗುವ ಬೆರಳಚ್ಚು ಹೋಲಿಸುತ್ತಾರೆ. ಇದರಿಂದ ಆರೋಪಿಗಳ ಪತ್ತೆ ಸುಲಭ.
ಬೆರಳಚ್ಚು ಪತ್ತೆ ಮಾಡಿ ಅದನ್ನು ಪೊಲೀಸರಿಗೆ ನೀಡಲು ನುರಿತ ತಜ್ಞರ ನೇಮಕ ಮಾಡಲಾಗಿರುತ್ತದೆ. ಅವರು ಮಾತ್ರ ಈ ಕರ್ತವ್ಯ ನಿಭಾಯಿಸಲು ಸಾಧ್ಯ.

-ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments