ಪೆನ್ಸಿಲ್ ಇತಿಹಾಸ
ಪೆನ್ಸಿಲ್ ಪದ ಲ್ಯಾಟಿನ್ನ 'ಪೆನಿಸಿಲಸ್' ಪದದಿಂದ ಬಂದಿದೆ. ಮೊದಲು ಪೆನ್ಸಿಲ್ ಅನ್ನು ಚೂಪಾದ ಬ್ರಷ್ಗಾಗಿ ಬಳಸಲಾಗುತ್ತಿತ್ತು. 500 ವರ್ಷಗಳ ಹಿಂದೆ ಇಂಗ್ಲೆಂಡ್ನ ಗಣಿಗಳಲ್ಲಿ ಜನ ಗ್ರಾಫೈಟನ್ನು ಪತ್ತೆಹಚ್ಚಿದರು. ಗ್ರಾಫೈಟ್ ಬಳಸಿ ಪೆನ್ಸಿಲ್ 1760ರಲ್ಲಿ ತಯಾರಿಸಲಾಯಿತು. 1795ರಲ್ಲಿ ಎನ್.ಜೆ. ಕಾಂಡ್, ಗ್ರಾಫೈಟ್-ಜೇಡಿಮಣ್ಣು ಮಿಶ್ರಣದಿಂದ ತೆಳುವಾದ ಕಡ್ಡಿ ಮಾಡಿ, ಬೇಯಿಸಿ ಮಾಡಿದ ಪೆನ್ಸಿಲ್ಗಳು ಜನಪ್ರಿಯವಾದವು. ಇದೇ ಆಧಾರದ ಮೇಲೆ ಇಂದಿಗೂ ಪೆನ್ಸಿಲ್ ತಯಾರಿಸಲಾಗುತ್ತದೆ. ಸೀಸದ ಹೊರಕವಚವನ್ನು ಪೈನ್ ಮರದಿಂದ ಸಿದ್ಧಪಡಿಸಲಾಗುತ್ತದೆ.
- ಹರಳಹಳ್ಳಿ ಪುಟ್ಟರಾಜು