ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಸಚಿನ್ ಇಲ್ಲದ ಕ್ರಿಕೆಟ್ ಊಹಿಸಲಾಗದು!

Lingaraj Badiger
Updated On : 1 Nov 2013, 4:35 am

ಕ್ರಿಕೆಟ್‌ನಿಂದ ಸಚಿನ್ ನಿವೃತ್ತಿ! ಇದು ಜಗತ್ತಿನ ಕ್ರಿಕೆಟ್ ಅಭಿಮಾನಿಗಳಿಗೆ ತಮ್ಮ ಮನೆ ಮಗುವನ್ನು ಜಾತ್ರೆಯಲ್ಲಿ ಕಳೆದುಕೊಂಡ ಅನುಭವ. ಹುಡುಗಿ ಕಾರಣ ಹೇಳದೆ ಹೃದಯಕ್ಕೆ ಕಿಚ್ಚು ಹತ್ತಿದ ಅನುಭವ. ಒಟ್ಟಿನಲ್ಲಿ ಸಚಿನ್ ನಿವೃತ್ತಿಯಾದರೆ ಮುಗೀತು! ಕ್ರಿಕೆಟ್ ಛಾಪ್ಟರ್ ಕ್ಲೋಸ್! ಕ್ರಿಕೆಟ್ ಬಿಡಿ, ನಮಗದು ಬೇಡವೆ ಬೇಡ ಎಂಬ ಏಕಮುಖ ಅಭಿಪ್ರಾಯ. ಇವರಿಗೆ ಸಚಿನ್ ಅಂದರೆ ಕ್ರಿಕೆಟ್, ಕ್ರಿಕೆಟ್ ಅಂದರೆ ಸಚಿನ್! ಆತ ಕ್ರಿಕೆಟ್ ದೇವರು, ಸಚಿನ್ ಇಲ್ಲದ ಕ್ರಿಕೆಟ್ ಅದೊಂದು ಗುಜರಿ ಅಂಗಡಿಯೇ ಸರಿ. ಆದರೆ ಎಲ್ಲದಕ್ಕೂ ಕೊನೆಯಿದೆ. ಕೆಲವು ಸತ್ಯಗಳನ್ನು ಅದೆಷ್ಟೇ ಕಹಿಯಾದರೂ ನಾವು ಒಪ್ಪಿಕೊಳ್ಳಲೇಬೇಕು.
-ಮಂಜುನಾಥ ಎಸ್. ಕಟ್ಟಿಮನಿ, ವಿಜಾಪುರ   

ಇಂಥ ಪ್ರತಿಭೆ ಸಿಗದು!
ಸಚಿನ್ ಕ್ರಿಕೆಟ್ ಲೋಕದ ಅದ್ವೀತಿಯ ಆಟಗಾರ. ಎಳೆಯ ವಯಸ್ಸಿನಿಂದ ನಿವೃತ್ತಿ ಅಂಚಿನವರೆಗೆ ಆಡಿರುವ ಆ ಆಟಗಳ ಮಧುರ ಕ್ಷಣಗಳನ್ನು ಮರೆಯುವುದುಂಟೆ? ಸಚಿನ್ ಈಗ ನಿವೃತ್ತಿಯ ಮಾತನ್ನಾಡಿದ್ದಾರೆ. ನೌಕರರು ನಿವೃತ್ತಿಯಾಗುವಂತೆ ಆಟಗಾರರೂ ಸಹ! ಹಿರಿಯರ ನಿವೃತ್ತಿ ಯುವಕರಿಗೆ ಅವಕಾಶ. ಆದರೆ ಸಚಿನ್‌ನಂಥ ದಾಖಲೆ ಮುರಿಯುವ ಪ್ರತಿಭೆ ಸಿಗುವುದು ಕಷ್ಟ. ತಾಳ್ಮೆ, ಸಹನೆ, ದೇಶಭಕ್ತಿ, ಛಲಗಳಲ್ಲದೆ ಅವರಿಂದ ಕಲಿಯುವುದು ತುಂಬಾ ಇದೆ. ಈ ಪ್ರತಿಭೆಯನ್ನು ಮುಂದೆ ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ನೇಮಿಸಿಕೊಂಡರೆ ಆ ದೇವರೇ ನಮ್ಮ ತಂಡವನ್ನು ನಡೆಸುವಂತಾಗುತ್ತದೆ.
-ಸಿ.ಅನಿಲ್‌ಕುಮಾರ್, ಸಿರಿಗೆರೆ

ಹುಲ್ಲು ಹಾಸಿಲ್ಲದ ವಿಂಬಲ್ಡನ್!
ವಿಶ್ವ ಕಂಡ ಶ್ರೇಷ್ಠ ಕ್ರೀಡಾಪಟು ನಮ್ಮ ಸಚಿನ್. ಈ ವಾಮನಮೂರ್ತಿ ಅಗಾಧ ದೈತ್ಯ ಪ್ರತಿಭೆ. ದೇಶಪ್ರೇಮದ ಸಂಕೇತ, ಯುವಕರ ಸ್ಫೂರ್ತಿ. ಇನ್ನೂ ಎಷ್ಟು ಹೇಳಿದರೂ ಸಾಲದು ಅವರ ಕುರಿತು. ನನ್ನ ಪ್ರಕಾರ ಸಚಿನ್ ಇಲ್ಲದ ಭಾರತ ಕ್ರಿಕೆಟ್ ತಂಡ ಹಸಿರು ಹುಲ್ಲು ಹಾಸಿಲ್ಲದ ವಿಂಬಲ್ಡನ್.
-ಮಧುಸೂದನ್ ದೊಡ್ಡರಸಿನಕೆರೆ, ಮಲೇಷ್ಯ

'ಜಗುಲಿ'ಯಲ್ಲಿ ಈ ಸಲದ ವಿಷಯ 'ಸಚಿನ್ ನಿವೃತ್ತಿ'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement