ಮೃಗಾಲಯಗಳ ಆರಂಭ
ಮೊಟ್ಟ ಮೊದಲ ಮೃಗಾಲಯವನ್ನು ಕ್ರಿ.ಪೂ. 1550ರಲ್ಲಿ ಚೀನಿ ದೊರೆ ಸ್ಥಾಪಿಸಿದ. ಆಗ ಇದರಲ್ಲಿ ಜಿಂಕೆಗಳು, ಮೀನುಗಳು ಮತ್ತು ಪಕ್ಷಿಗಳನ್ನು ಇಡಲಾಗಿತ್ತು. ಆದರೆ ಈ ಮೃಗಾಲಯಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತು. ಸಾರ್ವಜನಿಕರಿಗೆ ಪ್ರವೇಶವಿರುವ ಮೊದಲ ಮೃಗಾಲಯ 1793ರಲ್ಲಿ ಪ್ಯಾರಿಸ್ನಲ್ಲಿ ಆರಂಭವಾಯಿತು. ನಂತರ ಲಂಜನ್, ಬರ್ಲಿನ್ ಮುಂತಾದ ಸ್ಥಳಗಳಲ್ಲಿ ಮೃಗಾಲಯಗಳು ಸ್ಥಾಪನೆಯಾದವು. ಇಂದು ವಿಶ್ವದಲ್ಲಿ 500ಕ್ಕೂ ಹೆಚ್ಚು ದೊಡ್ಡ ಮೃಗಾಲಯಗಳಿವೆ. ಭಾರತದ ಅತಿ ದೊಡ್ಡ ಮೃಗಾಲಯ ಕೊಲ್ಕತ್ತಾದಲ್ಲಿದೆ. ವಿಶ್ವದ ಎಲ್ಲ ಭಾಗಗಳಿಗೆ ಸೇರಿದ ವಿಭಿನ್ನ ಪಕ್ಷಿಗಳು, ಪ್ರಾಣಿಗಳು ಇಲ್ಲಿವೆ.
- ಹರಳಹಳ್ಳಿ ಪುಟ್ಟರಾಜು
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.