ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಆಚಾರಕ್ಕಿಂತ ವಿಚಾರ ವಿವೇಕ ಅರಿಯಿರಿ!

Vishwanath S
Updated On : 8 Nov 2013, 6:08 am

ಅಮೆರಿಕನ್ನರು ಸ್ವಾಮೀಜಿಯನ್ನು ಒಬ್ಬ ಸನ್ಯಾಸಿಯಾಗಿ, ಸರ್ವಸಂಗ ಪರಿತ್ಯಾಗಿಯಾದ ಯೋಗಿಯಾಗಿ ಮಾತ್ರ ಕಾಣಲಿಲ್ಲ; ಕ್ರೈಸ್ತ ಧರ್ಮದ ಆಚರಣೆಗಳನ್ನು ಮೇಲ್ವಿಚಾರಿಸುವ ಪಾದ್ರಿಗಳಂತೆಯೂ ಕಾಣಲಿಲ್ಲ; ತಮ್ಮ ಧರ್ಮವೇ ಶ್ರೇಷ್ಠ ಎಂದು ಬೋಧಿಸುವ ಪೋಪ್ ಮಾದರಿಯ ಧರ್ಮಬೋಧಕರಂತೆಯೂ ಭಾವಿಸಲಿಲ್ಲ; ಅವರನ್ನು ಒಬ್ಬ ರಾಷ್ಟ್ರಪ್ರೇಮಿಯಾಗಿ, ಮಾನವತಾವಾದಿಯಾಗಿ, ಶ್ರೇಷ್ಠ ತತ್ತ್ವಜ್ಞಾನಿಯಾಗಿ ಹಾಗೂ ರಾಗದ್ವೇಷಗಳಿಗೆ ಒಳಗಾಗದ ಸ್ಥಿತಪ್ರಜ್ಞನಾಗಿ ಕಂಡರು. ಅಮೆರಿಕನ್ನರು ತಲೆಬಾಗಿದ್ದು ಸ್ವಾಮೀಜಿಯ ಉಜ್ವಲ ದೇಶಪ್ರೇಮವನ್ನು ಕಂಡು; ಅವರು ಮೆಚ್ಚಿ ಸ್ವೀಕರಿಸಿದ್ದು ಸ್ವಾಮೀಜಿಯ ವಿಶಾಲ ವಿಶ್ವಮಾನವಗುಣ ತತ್ತ್ವಗಳನ್ನು!
ಸ್ವಾಮಿ ವಿವೇಕಾನಂದರು ಅಮೆರಿಕದಲ್ಲಿ ಮನಪೂರ್ವಕವಾಗಿ ಮೆಚ್ಚಿಕೊಂಡದ್ದು ಅಲ್ಲಿಯ ಸಂಘಟನೆಯ ಅಂಶವನ್ನು.ನವಭಾರತ ನಿರ್ಮಾಣದ ಕನಸು ಹೊತ್ತ ಸ್ವಾಮೀಜಿ, ಸ್ವೇಚ್ಛೆಯಾಗಿ ಹರಿಯುವ ನದಿನೀರನ್ನು ಅಣೆಕಟ್ಟು ಕಟ್ಟಿ ಸಂಗ್ರಹಿಸಿ, ಕಾಲುವೆಗಳ ಮೂಲಕ ಹರಿಸಿ ಹಸಿರು ಲೋಕವನ್ನು ಸೃಷ್ಟಿಸುವ ಯೋಜನೆ ರೂಪಿಸುತ್ತಿದ್ದರು. ಭಾರತಕ್ಕೆ ವಾಪಸಾದ ಸ್ವಾಮೀಜಿ ನಾಲ್ಕು ವರ್ಷಗಳ ನಂತರ ದಕ್ಷಿಣೇಶ್ವರದಲ್ಲಿ ಶ್ರೀರಾಮಕೃಷ್ಣ ಮಠ, ಶ್ರೀರಾಮಕೃಷ್ಣ ಮಿಷನ್ ಸ್ಥಾಪಿಸುವ ಮೂಲಕ ಸಾಕಾರರೂಪ ನೀಡಿದರು. ದೇಶದ ಅನೇಕ ನಗರಗಳಲ್ಲಿ ಇದರ ಶಾಖೆಗಳು ನಿರ್ಮಾಣಗೊಂಡವು. 'ಬ್ರಹ್ಮವಾದಿನಿ', 'ಪ್ರಬುದ್ಧಭಾರತ' ಪತ್ರಿಕೆಗಳು ಈ ನಿಟ್ಟಿನಲ್ಲಿ ಮಹತ್ತರವಾಗಿ ಕಾರ್ಯನಿರ್ವಹಿಸಿದವು.

- ಆನಂದ ಎಸ್.ಎನ್.
anandsn193@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement