ಡಿವಿಡಿ ಬಿಡುಗಡೆ ಸಮಾರಂಭ
ಜಯನಗರದ ಟೋಟಲ್ ಕನ್ನಡ ಸಂಸ್ಥೆ, ಮಕ್ಕಳ ರಾಜ್ಯ, ಪೂರ್ವಾಪರ ಚಲನಚಿತ್ರಗಳ ಡಿವಿಡಿ, ಗುರುಭ್ಯೋನಮಃ ಸಾಕ್ಷ್ಯಚಿತ್ರದ ಡಿವಿಡಿ ಹಾಗೂ ಸಿ॥ ಗೌರಮ್ಮ ಪುಸ್ತಕ ಬಿಡುಗಡೆ ಸಮಾರಂಭವನ್ನು ಶನಿವಾರ ನ.9 ರಂದು ಬೆಳಗ್ಗೆ 10.30ಕ್ಕೆ ಹಮ್ಮಿಕೊಂಡಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಡಿ.ಜಿ.ಪಿ. ಡಿ.ವಿ. ಗುರುಪ್ರಸಾದ್ ವಹಿಸಲಿದ್ದಾರೆ. ಕನ್ನಡ ಗೀತೆಗಳ ಕರೋಕಿ ಗಾಯನವನ್ನು ಡಾ.ಬಿ.ಆರ್. ಸುಹಾಸ್ ಮತ್ತು ರಾಘವೇಂದ್ರ ನಡೆಸಿಕೊಡಲಿದ್ದಾರೆ. ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು ಹೆಚ್ಚಿನ ಮಾಹಿತಿಗೆ ದೂ: 9986222402.