ಬೌಲರ್‌ಗಳಿಗೆ ಸಿಂಹಸ್ವಪ್ನ!
ತೆಂಡೂಲ್ಕರ್ ಕ್ರಿಕೆಟ್‌ನಿಂದ ನಿವೃತ್ತಿಯಾಗುತ್ತಿರುವುದು ಎಲ್ಲರಿಗೂ ಬೇಸರದ ಸುದ್ಧಿ. ಆಟಗಾರರು ಒಂದಲ್ಲ ಒಂದು ದಿನ ನಿವೃತ್ತಿಯಾಗುವುದು ಸಹಜ ಮತ್ತು ಅನಿವಾರ್ಯವೂ ಹೌದು. ಈ ವಾಮನಮೂರ್ತಿ ತ್ರಿವಿಕ್ರಮನ ಹಾಗೆ ಕ್ರಿಕೆಟ್‌ನ ಉದ್ದಗಲಕ್ಕೂ ಬೆಳೆದು ಮೆಟ್ಟಿ ನಿಂತು ದಾಖಲೆಗಳ ಸುರಿಮಳೆಯನ್ನೆ ಸುರಿಸಿ ನ ಭೂತೋ ನ ಭವಿಷ್ಯತಿಃ ಎಂಬಂತೆ ಚರಿತ್ರೆಯನ್ನೆ ನಿರ್ಮಾಣ ಮಾಡಿದ್ದಾರೆ. ಇಂತಹ ಉತ್ಕೃಷ್ಟ ಆಟಗಾರನನ್ನು ಕ್ರಿಕೆಟ್ ಜಗತ್ತ್ತಿಗೆ ನೀಡಿದ ಭಾರತವೇ ಧನ್ಯ. ವಿಶಿಷ್ಟವಾದ ಮೈಲುಗಲ್ಲುಗಳನ್ನು ನಿರ್ಮಿಸಿದ ಅಪರೂಪದ ಶಿಲ್ಪಿ. ಸಚಿನ್‌ಗೆ ಸಚಿನ್ನೇ ಸಾಟಿ. ಶತಮಾನದ ಶತಕಗಳ ಯುಗಪುರುಷನಿಗೆ ಹ್ಯಾಟ್ಸ್ ಆಫ್!
- ಕೆ.ವಿ.ಸೀತಾರಾಮ್, ಬಿಜೈ, ಮಂಗಳೂರು
ದುಃಖಕರ ಸಂಗತಿ!
ಭಾರತೀಯ ಕ್ರಿಕೆಟ್ ರಂಗದ ದಿಗ್ಗಜ ಸಚಿನ್ ತೆಂಡುಲ್ಕರ್ ಹೆಸರನ್ನು ಕೇಳಿದರೆ ಸಾಕು, ಎಷ್ಟೋ ತಂಡಗಳಿಗೆ ಹೆದರಿಕೆ ಆಗುತ್ತಿತ್ತ್ತು. ಅವರಿಗಾಗಿ ಬೌಲಿಂಗ್ ಮಾಡಲು ಉತ್ಸುಕರಾಗಿ ಕಾಯುತ್ತಿದ್ದರು. ಈಗ ಸಚಿನ್ ತಮ್ಮ ಕ್ರಿಕೆಟ್ ಜೀವನದ 24 ವರ್ಷ ಪೂರೈಸಿ, ವಿದಾಯ ಪ್ರಕಟಿಸಿರುವುದು ಅವರ ಅಭಿಮಾನಿಗಳಿಗೆ ದುಃಖಕರ ಸಂಗತಿ.
- ಕೆ.ಎನ್.ಅಕ್ರಂಪಾಷ, ಚಿಂತಾಮಣಿ
ನಿವೃತ್ತಿ ನಿರ್ಧಾರ ಒಳಿತು!
ಸಚಿನ್ ತೆಂಡುಲ್ಕರ್ ಭಾರತ ಕ್ರಿಕೆಟ್ ತಂಡದ ಶ್ರೇಷ್ಠ ಆಟಗಾರ. ತಮ್ಮ ಹದಿನಾರನೇ ವಯಸ್ಸಿನಲ್ಲಿಯೇ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಕ್ರೀಡಾಪಟು. ಸಚಿನ್ ಕ್ರಿಕೆಟಿನಿಂದ ನಿವೃತ್ತಿ ನಿರ್ಧಾರ ತೆಗೆದುಕೊಂಡಿರುವ ಸಮಯ ಒಳ್ಳೆಯದೇ ಆಗಿದೆ. ಏಕೆಂದರೆ ಸಚಿನ್ ತಮ್ಮ ಕ್ರಿಕೆಟ್‌ನ 24 ವರ್ಷಗಳ ಈ ಸುಧೀರ್ಘ ಅವಧಿಯಲ್ಲಿ ಮಾಡಿದ ಸಾಧನೆಯೇನು ಕಡಿಮೆ ಅಲ್ಲ. ಇವರ ಇತ್ತೀಚಿನ ಕ್ರಿಕೆಟ್ ಆಟದ ಸಾಧನೆ ಅಷ್ಟೇನು ಉತ್ತಮ ರೀತಿಯಲ್ಲಿ ಇರಲಿಲ್ಲ. ಈ ಸಮಯದಲ್ಲಿ ಅವರು ನಿವೃತ್ತಿ ಘೋಷಣೆ ಮಾಡದಿದ್ದರೆ ಅವರ ಹಿಂದಿನ ಸಾಧನೆಗಳು ಮರೆಯಾಗುತ್ತಿತ್ತೇನೋ? ಅಲ್ಲದೆ ಅಂತಾರ್ರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಕಾಯುತ್ತಿರುವ ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ದೃಷ್ಟಿಯಿಂದಲೂ ಇದು ಉತ್ತಮ ಬೆಳವಣಿಗೆಯೇ.
- ಎನ್.ಸುಧೀಂದ್ರ, ಬೆಂಗಳೂರು