ಅದ್ಭುತ ಆಟಗಾರ
ಪ್ರತಿಭೆ ಹಾಗೂ ಸಾಮರ್ಥ್ಯದ ಮೂಲಕ ಹಲವು ವರ್ಷಗಳ ಕಾಲ ಕ್ರಿಕೆಟ್ ಜಗತ್ತನ್ನು ಆಳಿ ಹಲವು ದಾಖಲೆಗಳಿಗೆ ಸರದಾರನಾದ ಸಚಿನ್ ವಿಶ್ವ ಕಂಡ ಅದ್ಭುತ ಆಟಗಾರ. ಕಳೆದ 24 ವರ್ಷಗಳಿಂದಲೂ ತನ್ನ ಕ್ರಿಕೆಟ್ ಬದುಕಿನಲ್ಲಿ ಎಂದಿಗೂ ಲಯ ಕಳೆದುಕೊಳ್ಳದೆ ತನ್ನದೇ ಆದ ಛಾಪು ಮೂಡಿಸಿ ವಿಶಿಷ್ಟ ಸಾಧನೆಗೈದವರು. 'ನನ್ನಲ್ಲಿ ಶಕ್ತಿ ಇರುವವರೆಗೂ ಕ್ರಿಕೆಟ್ ಆಡುವುದನ್ನು ಮುಂದುವರಿಸುತ್ತೇನೆ' ಎಂದಿದ್ದರು. ಕ್ರಿಕೆಟ್ನಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸಿ ವಿಶ್ವದೆಲ್ಲೆಡೆ ಅದ್ಭುತ ಆಟವನ್ನಾಡಿ ನಮ್ಮ ದೇಶದ ಕ್ರಿಕೆಟ್ನ್ನು ಉತ್ತುಂಗ ಶಿಖರಕ್ಕೇರಿಸಿದ ಅವರ ನಿವೃತ್ತಿಯ ಬದುಕು ನೆಮ್ಮದಿಯಾಗಿರಲಿ. ಸಚಿನ್ಗೆ ನನ್ನ ಶುಭಕಾಮನೆಗಳು.
- ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
ಒಂದೆರಡು ಕಪ್ಪು ಚುಕ್ಕೆ!
ವಿವಾದಕ್ಕೂ ಸಚಿನ್ಗೂ ಸಾಗರದಂತರ. ಆದರೂ ಅವರ ಇತ್ತೀಚಿನ ಹೇಳಿಕೆ, 'ನನ್ನ ನಿವೃತ್ತಿಯನ್ನು ಬೇರೆ ಯಾರೂ ನಿರ್ಧರಿಸುವುದು ಬೇಡ, ನಾನೇ ಅದನ್ನು ನಿರ್ಧರಿಸುತ್ತೇನೆ' ಮತ್ತು ಕ್ರಿಕೆಟ್ ನಿಯಂತ್ರಣ ಮಂಡಳಿಯ ಹೇಳಿಕೆ, 'ಅವರ ನಿವೃತ್ತಿಯ ಬಗೆಗೆ ನಾವು ಅವರೊಡನೆ ಮಾತನಾಡುತ್ತೇವೆ.' ಇವುಗಳು ಇವರ ವೃತ್ತಿ ಜೀವನದಲ್ಲಿಯ ಒಂದೆರಡು ಕಪ್ಪು ಚುಕ್ಕೆಗಳಂತೆ ಕಾಣುತ್ತವೆ! ಇಲ್ಲಿ ಹಿಂದಿನ ಸಾದನೆಗಿಂತ ಇಂದಿನ ಸಾಮರ್ಥ್ಯವೇ ಮುಖ್ಯ. ಇಲ್ಲಿ 'ನೀನು ಮಾತ್ರ, ನೀನಿಲ್ಲದಿದ್ದರೆ ಶೂನ್ಯ. ಎನ್ನುವ ವ್ಯಕ್ತಿ ಪೂಜೆ ಕ್ರಿಕೆಟ್ನ ಭವಿಷ್ಯದ ದೃಷ್ಟಿಯಿಂದ ಆರೋಗ್ಯಕರ ಬೆಳವಣಿಗೆಯಲ್ಲ.
-ಡಾ.ಅನಿಕೇತ್ ಶರ್ಮಾ, ಬೆಂಗಳೂರು
ಸಚಿನ್ ಇಲ್ಲದ ಕ್ರಿಕೆಟ್!
ಸಚಿನ್ ತೆಂಡೂಲ್ಕರ್, ಈ ಒಂದು ಹೆಸರಿನ ವ್ಯಕ್ತಿ ತನ್ನ ಮಾತೃಭೂಮಿಯಾದ ಭಾರತ ದೇಶವೇ ತನ್ನ ಬಗ್ಗೆ ಹೆಮ್ಮೆ ಪಡುವಂತೆ ಮಾಡಿದ ಮನಮೋಹಕ ಆಟಗಾರ. ಅದಕ್ಕೆ ಮುಕುಟದಂತಿರುವ ಕಳಂಕ ರಹಿತ ವ್ಯಕ್ತಿತ್ವದಿಂದಲೇ ಉತ್ತುಂಗಕ್ಕೇರಿದ ಈ ಸಚಿನ್ ಇಂದು ಭಾರತೀಯ ಕ್ರಿಕೆಟ್ರಂಗದ ದೇವರು! ಸಚಿನ್ ಸೆಂಚುರಿ ಹೊಡೆದರೆ, ಹೊಸ ದಾಖಲೆಗಳನ್ನು ಮಾಡಿದರೆ, ಎದುರಾಳಿ ತಂಡದ ಆಟಗಾರರ ಕೈಗಳು ಸಹ ತಮಗರಿವಿಲ್ಲದಂತೆಯೇ ಚಪ್ಪಾಳೆ ಸುರಿಸುತ್ತಿತ್ತು. ಇಂತಹ ಭಾರತೀಯ ಕ್ರಿಕೆಟ್ನ ಸೂರ್ಯ ಮುಳುಗಿದನಲ್ಲಾ ಎನ್ನುವ ಬೇಜಾರು ಮನಕಲುಕುತ್ತದೆ. ಹೋಗಿ ಬಾ ಸಚಿನ್, ಗುಡ್ ಲಕ್!
-ಬಿ.ಸೋಮಶೇಖರ್, ಸುರಪುರ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.