ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಚರ್ಚಾಸ್ಪದ ವ್ಯಕ್ತಿಯಲ್ಲ

ನಿಜವಾಗಿಯೂ ಸಚಿನ್ ಭಾರತ ಕ್ರಿಕೆಟ್‌ನ ದೈತ್ಯ ಪ್ರತಿಭೆ. ಇವರ ಸಾಧನೆ ದೊಡ್ಡದು. ಹೆಸರು ಕೇಳಿದರೇ ಮೈ ರೋಮಾಂಚನಗೊಳ್ಳುತ್ತದೆ. ..

Rashmi Kasaragodu
Updated On : 12 Nov 2013, 3:15 am

ನಿಜವಾಗಿಯೂ ಸಚಿನ್ ಭಾರತ ಕ್ರಿಕೆಟ್‌ನ ದೈತ್ಯ ಪ್ರತಿಭೆ. ಇವರ ಸಾಧನೆ ದೊಡ್ಡದು. ಹೆಸರು ಕೇಳಿದರೇ ಮೈ ರೋಮಾಂಚನಗೊಳ್ಳುತ್ತದೆ. ಇವರ ಸಾಧನೆಗಳು ನಾ ಭೂತೋ ನಾ ಭವಿಷ್ಯತಿ. ನಿಜ ಹೇಳಬೇಕೆಂದರೆ ಸಚಿನ್ ನಿವೃತ್ತಿ ಚರ್ಚಾಸ್ಪದ ವಿಷಯವೇ ಅಲ್ಲ. ಇವರೂ ಕೂಡ ಎಲ್ಲ ಆಟಗಾರರಂತೆ ನಿವೃತ್ತಿ ಘೋಷಿಸಿದ್ದಾರೆ ಅಷ್ಟೆ. ತಮ್ಮ ಇಡೀ ವೃತ್ತಿ ಜೀವನದಲ್ಲಿ ವಿವಾದಗಳಿಗೆ ಸಿಲುಕಿದ್ದೇ ಇಲ್ಲ. ವೈಯಕ್ತಿಕ ಜೀವನದಲ್ಲಿ ಕೂಡ ಪರ್ಫೆಕ್ಟ್ ಮ್ಯಾನ್ ತಮ್ಮ ಆದರ್ಶ ಜೀವನದಿಂದ ಯುವಕರಿಗೆ ಮಾರ್ಗದರ್ಶಕರಾಗಿದ್ದಾರೆ. ಇಂತಹ ವ್ಯಕ್ತಿಗೆ ನಾವು ಒಳ್ಳೆಯ ರೀತಿಯಲ್ಲಿ ಬೀಳ್ಕೊಡಬೇಕು. ಅರ್ಥವಿಲ್ಲದ ಟೀಕೆಗಳಗೆ ಗುರಿ ಮಾಡಿ ನೋಯಿಸಬಾರದು.
= ಸಿರಿ, ಮೈಸೂರು

ಟಿ-ಟ್ವೆಂಟಿಯ ಮಾಂತ್ರಿಕ
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಎಲ್ಲಾ ರೀತಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದು ಒಂದು ರೀತಿಯ ಉತ್ತಮ ತೀರ್ಮಾನ. ಆದರೂ ಅತೀ ಚಿಕ್ಕ ವಯಸ್ಸಿನಲ್ಲಿ ಕ್ರಿಕೆಟ್ ರಂಗಕ್ಕೆ ಇಳಿದು ತಮ್ಮ ಆಟದ ಮೂಲಕ ದಾಖಲೆಗಳನ್ನೇ ಸೃಷ್ಟಿಸಿ ಕ್ರಿಕೆಟ್ ಪ್ರೇಮಿಗಳು ನಿಬ್ಬೆರಗಾಗುವಂತೆ ಮಾಡಿರುವುದು ಸತ್ಯ. ಟೆಸ್ಟ್‌ನಲ್ಲಿ ಹೇಗೆ ವಿಕೆಟ್ ಕಾಪಾಡಿಕೊಂಡು ರನ್ ಗಳಿಸಬೇಕು, ಏಕದಿನ ಪಂದ್ಯದಲ್ಲಿ ಹೇಗೆ ತಂಡವನ್ನು ಗೆಲುವಿನತ್ತ ಕೊಂಡೊಯ್ಯಬೇಕು ಎಂಬುದು ಬಲ್ಲವರಾಗಿದ್ದರು. ಇತ್ತೀಚೆಗೆ ಹಲವು ವೈಫಲ್ಯಗಳನ್ನು ಕಂಡರು. ಯುವ ಆಟಗಾರರಿಗೆ ಅವಕಾಶ ಮಾಡಿಕೊಡಲು ವಿದಾಯ ಹೇಳಿದ್ದು ಸಮಯೋಚಿತವಾಗಿದೆ.
= ಬಿ.ಕೆ.ಶ್ರೀಕಾಂತ್, ಬೆಟ್ಟದಪುರ

ಧ್ರುವತಾರೆ ಈ ಸಚಿನ್ನ
ಕ್ರಿಕೆಟ್ ಜಗತ್ತು ಕಂಡ ಅಪ್ರತಿಮ ಕ್ರೀಡಾಪಟು ತೀವ್ರತೆಯ ಅಪೂರ್ವ ಸಂಗಮ, ಪರಿಪೂರ್ಣ ಆಟಗಾರ, ಮಾಸ್ಟರ್ ಬ್ಲಾಸ್ಟರ್, ವಾಮನಮೂರ್ತಿ ಎಂದೆಲ್ಲ ಗುಣವಿಶೇಷಣಗಳನ್ನು ಹೊಂದಿರುವ ಈ ಸಚಿನ್‌ರ ವಿದಾಯ ಅರಗಿಸಿಕೊಳ್ಳಲಾರದ್ದಾಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಆಡುವ ಸಾಮರ್ಥ್ಯ ಅವರಿಗೆ ಇನ್ನೂ ಇತ್ತು. ಆದಗ್ಯೂ ಯುವ ಪೀಳಿಗೆಗೆ ತಮ್ಮ ಸ್ಥಾನವನ್ನು ತೆರುವು ಮಾಡಿಕೊಟ್ಟಿರುವುದು ಒಳ್ಳೆಯ ವಿಚಾರ. ರಾಹುಲ್ ದ್ರಾವಿಡ್, ಅನಿಲ್‌ಕುಂಬ್ಳೆ, ಸೌರವ್‌ಗಂಗೂಲಿ, ವೀರೇಂದ್ರ ಸೆಹವಾಗ್ ಅವರಂತಹ ಆಟಗಾರರೊಂದಿಗೆ ಇದ್ದು ಸಮಕಾಲೀನ ಹೀರೊ ಎನಿಸಿಕೊಂಡರು. ತೆಂಡೂಲ್ಕರ್‌ಗೆ ಹ್ಯಾಟ್ಯಾಫ್.
= ಶರಣಪ್ಪ ಬಸವರಾಜ ಹುಂಡಿ, ನವಲಗುಂದ


'ಜಗುಲಿ'ಯಲ್ಲಿ ಈ ಸಲದ ವಿಷಯ 'ಸಚಿನ್ ನಿವೃತ್ತಿ'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement