ಮಾತು ಮುಗಿಲಂತೆ; ಕಾರ್ಯ ಸಾಗರದಂತೆ!
ಸ್ವಾಮೀಜಿ ಧೀರತೆಯಿಂದ ಮುನ್ನುಗ್ಗುವುದನ್ನು ಕಂಡ ಅಮೆರಿಕದ ಜನರು ಅವರನ್ನು 'ಯೋಧಯೋಗಿ' ಎಂದು ಕರೆದರು. ಆದರೆ ಯೋಧ ವ್ಯಕ್ತಿತ್ವದ ಒಳಹೊಕ್ಕು...
ಸ್ವಾಮೀಜಿ ಧೀರತೆಯಿಂದ ಮುನ್ನುಗ್ಗುವುದನ್ನು ಕಂಡ ಅಮೆರಿಕದ ಜನರು ಅವರನ್ನು 'ಯೋಧಯೋಗಿ' ಎಂದು ಕರೆದರು. ಆದರೆ ಯೋಧ ವ್ಯಕ್ತಿತ್ವದ ಒಳಹೊಕ್ಕು ನೋಡಿದವರಿಗೆ ಅವರ ಪರಿಪೂರ್ಣ ಶರಣಾಗತಿಭಾವ ಕಾಣದಿರುತ್ತಿರಲಿಲ್ಲ.
ತಮ್ಮ ಉದ್ದೇಶಿತ ಯೋಜನೆಯು ಭಗವದಿಚ್ಛೆಗೆ ಅನುಗುಣವಾಗಿಲ್ಲವೆಂದು ಗೊತ್ತಾದ ತಕ್ಷಣವೇ ಅದನ್ನು ಕೈಬಿಡುತ್ತಿದ್ದರು ಸ್ವಾಮೀಜಿ. ಅವರ ಕಾರ್ಯವಿಧಾನವನ್ನು ತಿಳಿಯುವುದು ಅಷ್ಟು ಸುಲಭದ್ದಾಗಿರಲಿಲ್ಲ. ಸಾಗರದ ಒಂದು ದಡದಲ್ಲಿ ನಿಂತು ಅಭಿಪ್ರಾಯಿಸುವುದು ತಪ್ಪಾದೀತು! ಅವರ ಮಾತು ಮುಗಿಲಂತೆ; ಕಾರ್ಯ ಸಾಗರದಂತೆ, ಆಥ ಅಗಲಗಳು ಒಮ್ಮೆಗೇ ನಿಲುಕದು!
ಸಮಷ್ಟಿಯಿಂದ ವ್ಯಷ್ಟಿಯತ್ತ, ಸಾಮಾನ್ಯದಿಂದ ನಿರ್ದಿಷ್ಟತೆಯತ್ತ ಸಾಗುತ್ತಾ ಸ್ವಾಮೀಜಿ ಪರಿಪೂರ್ಣ ವ್ಯಕ್ತಿಗಳ ನಿರ್ಮಾಣಕ್ಕೆ ಯೋಚಿಸುತ್ತಿದ್ದರು. 'ಆಲೋಚಿಸುವುದು ಮತ್ತು ತನ್ನ ಭಾವನೆಗಳನ್ನು ಪ್ರಸಾರ ಮಾಡುವುದು ಈ ಎರಡೂ ಕಾರ್ಯಗಳಲ್ಲಿ ಒಬ್ಬನೇ ವ್ಯಕ್ತಿ ಎಂದೂ ಯಶಸ್ವಿಯಾಗಿಲ್ಲ. ಆಲೋಚಿಸಬೇಕಾದರೆ.. ಆಧ್ಯಾತ್ಮಿಕ ವಿಚಾರಗಳ ಬಗ್ಗೆ ಆಲೋಚಿಸಬೇಕಾದರೆ ಅವನು ಸ್ವತಂತ್ರವಾಗಿರಬೇಕು.' ಅಮೆರಿಕದಲ್ಲಿ ಮೊದಲಹಂತದ ವ್ಯಾಪಕ ಪ್ರಚಾರವನ್ನು ಮುಗಿಸಿದ ಬಳಿಕ ಸ್ವಾಮೀಜಿ ತಮ್ಮ ಮುಂದಿನ ಕಾರ್ಯೋದ್ದೇಶವನ್ನು ಹೀಗೆ ಯೋಜಿಸಿದಂತೆ ಕಂಡುಬರುತ್ತದೆ. ಆದರೂ ಸ್ವಾಮೀಜಿ ಅಮೆರಿಕದಲ್ಲಿದ್ದಾಗ ಆಲೋಚಿಸುವ ಹಾಗೂ ಪ್ರಸಾರಗೈಯುವ ಎರಡೂ ಕಾರ್ಯಗಳಲ್ಲಿ ಅವಿಶ್ರಾಂತವಾಗಿ ಕಾರ್ಯಪ್ರವೃತ್ತರಾಗಿದ್ದುದನ್ನು ಕಾಣುತ್ತೇವೆ. ಬಿಡುವಿಲ್ಲದ ಅವಿರತ ಕಾಯಕವೇ ಅವರ ದೈಹಿಕ ಮಾನಸಿಕ ಆಯುಷ್ಯವನ್ನು ಕುಂದಿಸಿತೇನೋ?
- ಆನಂದ ಎಸ್.ಎನ್.
anandsn193@gmail.com