ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಗಣಿತ ದೀಕ್ಷೆ

ಗಣಿತ ಎನ್ನುವ ಗುಮ್ಮನಿಗೆ ಹೆದರುವ ಮಕ್ಕಳೇ ಹೆಚ್ಚು. ಆದರೆ ಪ್ರಾಯೋಗಿಕವಾಗಿ ಕಲಿಸಿದಾಗ ಗಣಿತ ಕಬ್ಬಿಣದ ಕಡಲೆಯಲ್ಲ....

Rashmi Kasaragodu
Updated On : 13 Nov 2013, 7:13 am

ಗಣಿತ ಎನ್ನುವ ಗುಮ್ಮನಿಗೆ ಹೆದರುವ ಮಕ್ಕಳೇ ಹೆಚ್ಚು. ಆದರೆ ಪ್ರಾಯೋಗಿಕವಾಗಿ ಕಲಿಸಿದಾಗ ಗಣಿತ ಕಬ್ಬಿಣದ ಕಡಲೆಯಲ್ಲ. ಅಂಥವರಿಗೆ ಗಣಿತದ ಗೆಳೆತನ, ಗಣಿತದ ಹುಚ್ಚು ಹಚ್ಚುವ ತಂತ್ರ ರೂಪಿಸಿದ್ದಾರೆ ವಿ.ಬಿ. ದೀಕ್ಷಿತ್ ಮಾಸ್ತ ರು.
ಈಗ ಗಣಿತ ಸೂತ್ರಗಳನ್ನು ಬಾಯಿಪಾಠ ಮಾಡಬೇಕಿಲ್ಲ, ಗಣಿತವನ್ನು ಪದೇಪದೆ ಬಿಡಿಸುವ ತಾಪತ್ರಯವಿಲ್ಲ, ಒಂದು ಸಾರಿ ಈ ಮಾಡೆಲ್ ಬಳಸಿ ಗಣಿತದ ಸಮಸ್ಯೆಯನ್ನು ಅರ್ಥಮಾಡಿಕೊಂಡರೆ ಸಾಕು. ತಲೆಯಲ್ಲಿ ಅಚ್ಚೊತ್ತಿದಂತಿರುತ್ತದೆ ಎನ್ನುತ್ತಾರೆ ದೀಕ್ಷಿತ್ ಮಾಸ್ತರು (9448630547).
ಮೂಲತಃ ಹಾನಗಲ್ನವರಾದ ವಿ.ಬಿ. ದೀಕ್ಷಿತ್ 40 ವರ್ಷ ಹೈಸ್ಕೂಲ್ ಮೇಷ್ಟ್ರಾಗಿ ಸೇವೆ ಸಲ್ಲಿಸಿ ನಿವೃತ್ತ. ಗಣಿತ ಹಾಗೂ ವಿಜ್ಞಾನ ಮೇಷ್ಟ್ರಾಗಿದ್ದ ಇವರಿಗೆ ಮೊದಲಿನಿಂದಲೂ ಹೊಸತನ್ನು ಮಾಡುವುದರಲ್ಲಿ ಉತ್ಸಾಹ. ಗಣಿತ ಹಾಗೂ ವಿಜ್ಞಾನಗಳಲ್ಲೂ ಮಾಡೆಲ್ಗಳನ್ನು ತಯಾರಿಸಿ ಆ ಮೂಲಕವೇ ಕಲಿಸುತ್ತಿದ್ದರು. 1980ರಲ್ಲೇ ಗಣಿತದ ಮಾಡೆಲ್ ಮೂಲಕವೇ ಮಕ್ಕಳಿಗೆ ಪಾಠ ಮಾಡುತ್ತಿದ್ದರು.
'ನಾನು ಮಾಡೆಲ್ ತಯಾರಿಸುವುದಕ್ಕೂ ಮುಂಚೆ ಮಕ್ಕಳಿಗೆ ಎಲ್ಲ ಸೂತ್ರಗಳನ್ನೂ ಬಾಯಿಪಾಠ ಮಾಡಿಸುವ ಪರಿಪಾಠವಿತ್ತು. ಆದರೆ ತ್ರಿಭುಜದ ಮೂರು ಕೋನಗಳ ಮೊತ್ತ 180 ಎನ್ನುವುದು ಈ ಮಾಡೆಲ್ ಜೋಡಿಸಿದರೆ ಮಕ್ಕಳಿಗೆ ತಾನಾಗೇ ಗೊತ್ತಾಗುತ್ತದೆ. ಅಷ್ಟೇ ಅಲ್ಲ ಜೋಡಿಸುವ ಕೆಲಸ ಮಕ್ಕಳಿಗೆ ಖುಷಿ ಕೊಡುತ್ತದೆ. ಹಾಗಾಗಿ ಗಣಿತದಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ' ಎನ್ನುತ್ತಾರೆ ವಿ.ಬಿ. ದೀಕ್ಷಿತ್.
ದೀಕ್ಷಿತ್ ಗಣಿತದ ಎಲ್ಲ ಪ್ರಕಾರಗಳಿಗೂ ಮಾಡೆಲ್ ತಯಾರಿಸಿದ್ದಾರೆ. ಗಣಗಳು, ಗಣಗಳ ಕ್ರಿಯೆಗಳು, ಪೂರ್ಣಾಂಕಗಳು, ಭಿನ್ನರಾಶಿಗಳು, ಸಮಾನಾಂತರ ರೇಖೆಗಳು, ಸಮಾನಾಂತರ ತ್ರಿಭುಜಗಳು- ಪರ್ಯಾಯ ಕೋನಗಳು, ಅನುರೂಪ ಕೋನಗಳು, ಲಘುಕೋನಗಳ ಪ್ರಕಾರಗಳು- ಲಘುಕೋನ, ಲಂಬಕೋನ, ಸಮಕೋನಗಳು, ಪೂರಕ ಕೋನಗಳು, ತ್ರಿಪದೋಕ್ತಿಗಳು, ಅಪವರ್ತನಗಳು, ಸಮೀಕರಣ, ಬೀಜಗಣಿತದ(a+b)2 (a-b)2, x+a x+b ಲೆಕ್ಕಗಳನ್ನೂ ಮಾಡೆಲ್ ಸಹಾಯದಿಂದಲೇ ಬಿಡಿಸಬಹುದು.
ಇಷ್ಟೇ ಅಲ್ಲ ಪ್ರಮೇಯ ಸಾಬೀತುಮಾಡುವ ಮಾಡೆಲ್ಗಳೂ ಇವರ ಬಳಿ ಇವೆ. ಪೈಥಾಗೋರಸ್ನ ಪ್ರಮೇಯ ಮಕ್ಕಳಿಗೆ ಮನವರಿಕೆ ಮಾಡಿಕೊಡುವುದು ಕಷ್ಟದ ಕೆಲಸ. ಆದರೆ ದೀಕ್ಷಿತ್ ಮಾಸ್ತರರ ಮಾಡೆಲ್ ತುಂಬಾ ಸರಳವಾಗಿ ಮಕ್ಕಳಿಗೆ ತಿಳಿಸುತ್ತದೆ. 90 ರೀತಿಯ ಸೈನ್ಸ್ ಮಾಡೆಲ್ ಕೂಡ ಮಾಡಿದ್ದಾರೆ.
1995ರಲ್ಲಿ ಸಿಲೆಬಸ್ ಬದಲಾಯಿತು. ಭೌತಶಾಸ್ತ್ರ ಪಠ್ಯದಲ್ಲಿ ಪ್ರಯೋಗಗಳೇ ಇರಲಿಲ್ಲ. ಇದನ್ನು ಅಂದಿನ ಶಿಕ್ಷಣ ಸಚಿವರ ಗಮನಕ್ಕೆ ತಂದಾಗ, 'ನೀವೇ ಏನಾರ ಮಾಡ್ರೀ..' ಎಂದರು. ಆಗ ರೆಕ್ಸಿನ್ನಿಂದ ವಾಲ್ಚಾರ್ಟ್ ಮಾಡಿ, ಮುಂಬೈಗೆ ಹೋಗಿ ಪ್ರಿಂಟ್ ಮಾಡಿಸಿ ತರುತ್ತಿದ್ದರು. ಹೀಗೆ ಮೊದಲಿನಿಂದಲೂ ಏನಾರ ಮಾಡುತ್ತಲೇ ಇರುತ್ತಿದ್ದ ವಿ.ಬಿ. ದೀಕ್ಷಿತ್ ಈಗ ಬೆಂಗಳೂರಿನ ಶ್ರೀನಿವಾಸನಗರದಲ್ಲಿ ತಮ್ಮದೇ 'ಉ್ಝಔಖಿಆ' ಕಂಪನಿ ಪ್ರಾರಂಭಿಸಿದ್ದಾರೆ. ಇಲ್ಲಿ ಆಕ್ರಿಲಿಕ್ ಪ್ಲಾಸ್ಟಿಕ್ನಿಂದ ಗಣಿತದ ಮಾಡೆಲ್ಗಳನ್ನು ತಯಾರಿಸುತ್ತಿದ್ದಾರೆ.
ಡಿಲ್ಟಾ ಇದುವರೆಗೆ ಹೈಸ್ಕೂಲ್ಗೆ 43 ಮಾದರಿ ಹಾಗೂ ಪ್ರಾಥಮಿಕ ಶಾಲೆಗೆ 23 ಮಾದರಿ ಹೊರತಂದಿದೆ. ಎಲ್ಲ ಮಾಡೆಲ್ಗಳು ಡಿಎಸ್ಇಆರ್ಟಿಯಿಂದ ಅನುಮೋದನೆ ಪಡೆದಿದೆ. ಹಾನಗಲ್, ಹಿರೇಕೆರೂರ್ ತಾಲೂಕಿನ ಬಹುತೇಕ ಶಾಲೆಗಳ ಮಕ್ಕಳೂ ಇವರ ಮಾಡೆಲ್ ಮೂಲಕವೇ ಕಲಿಯುತ್ತಿದ್ದಾರೆ. ಈ ಮಾಡೆಲ್ಗಳ ಸಹಾಯದಿಂದ ಮಕ್ಕಳಿಗೆ ಕಲಿಸುವುದರಿಂದ ಗಣಿತ ಹಾಗೂ ವಿಜ್ಞಾನ ವಿಷಯದಲ್ಲಿ ಹಿಂದಿದ್ದ ಮಕ್ಕಳಲ್ಲೂ ಉತ್ತಮ ಪ್ರಗತಿ ಕಂಡುಬಂದಿದೆ ಎಂಬುದು ಪ್ರಯೋಗಿಸಿ ನೋಡಿದ ಅಧ್ಯಾಪಕರ ಮಾತು.ಟಿ

ಮೂರು ಭಾಷೆಗಳಲ್ಲಿ ಸ್ಲೇಟ್!
ಕಲ್ಲಿನ ಪಾಟಿಗಳು ಕಣ್ಮರೆಯಾದ ಈ ದಿನಗಳಲ್ಲಿ ಅವುಗಳ ಕೊರತೆ ತುಂಬಿಕೊಡುತ್ತಿವೆ ಡಿಲ್ಟಾ ಸ್ಲೇಟುಗಳು. ಈ ಸ್ಲೇಟ್ಗಳನ್ನು ನೋಡುವುದೇ ಹಬ್ಬ. ಕನ್ನಡ, ಹಿಂದಿ, ಇಂಗ್ಲಿಷ್ ಅಕ್ಷರಗಳ ಬಣ್ಣಬಣ್ಣದ ಸ್ಲೇಟ್ಗಳು. ಈ ಸ್ಲೇಟ್ನಲ್ಲಿ ಅಕ್ಷರದ ಆಕಾರದಲ್ಲಿ ತಗ್ಗು ಇದೆ. ಪೆನ್ಸಿಲ್ ಇಲ್ಲವೇ ಚೂಪಾದ ಬಳಪ ಬಳಸಿ ತೀಡಬಹುದು. ಕ್ರಮಬದ್ಧ ಅಭ್ಯಾಸದಿಂದ ಮಗು ಬಹುಬೇಗ ಮುದ್ದಾದ ಅಕ್ಷರ ಬರೆಯುವಂತಾಗುತ್ತದೆ. ಅಕ್ಷರ ದುಂಡಗಾಗಲು ಮುಂದೆ ಕಾಪಿ ಬರೆಯುವ ಅಗತ್ಯ ಬರುವುದಿಲ್ಲ.

- ಶಶಿರೇಖಾ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments