ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ವೈನ್ ಗ್ಲಾಸ್ ಮೂಲಕ ಬದುಕು ಎಷ್ಟು ಸುಂದರ!

`ಕಾಫಿ ಮತ್ತು ವೈನ್ ನಡುವಿನ ಕಾಲಾವಧಿ ಯನ್ನು ಜೀವನ ಅಂತಾರೆ. ಅದ್ಯಾವ ವೈನ್..

Rashmi Kasaragodu
Updated On : 15 Nov 2013, 5:50 am

`ಕಾಫಿ ಮತ್ತು ವೈನ್ ನಡುವಿನ ಕಾಲಾವಧಿಯನ್ನು ಜೀವನ ಅಂತಾರೆ. ಅದ್ಯಾವ ವೈನ್ ಪ್ರಿಯ ಈ ಮಾತನ್ನು ಹೇಳಿದ್ದಾನೋ ಗೊತ್ತಿಲ್ಲ. ಕೆಲವರಂತೂ ಜೀವನ ಅಂದ್ರೆ ಅದೇ ಅಂತ ಭಾವಿಸಿದ್ದಾರೆ. ಅವರು ವೈನ್ ಸೇವನೆಯನ್ನು ಕುಡಿತ, ಮದ್ಯಪಾನ ಸೇವನೆ ಎಂಬುದನ್ನು ಒಪ್ಪಲು ಸಿದ್ಧರಿಲ್ಲ. W‌in‌in‌g and d‌in‌in‌g ಅಂದ್ರೆ ಕುಡಿತ ಹಾಗೂ ಭೋಜನ ಎಂದೇ ಹಲವರು ಭಾವಿಸಿದ್ದಾರೆ. ಒಂದು ವೇಳೆ ಅದೇ ಆಗಿದ್ದರೆ ಶಬ್ಧಾಲಂಕಾರಪೂರಿತವಾಗಿ d‌r‌in‌k‌in‌g and d‌in‌in‌g​ ಎಂದು ಕರೆಯುತ್ತಿದ್ದರು. ವೈನ್ಸೇವನೆ ಅಂದ್ರೆ ಅದೊಂದು ಜೀವನಪದ್ಧತಿ, ಜೀವನಕಲೆ, ಜೀವನಶೈಲಿ. ಅನೇಕ ಮಂದಿ ಅದನ್ನು ತಪ್ಪಾಗಿ ಮದ್ಯಸೇವನೆ ಎಂದು ಭಾವಿಸಿದ್ದಾರೆ. ವೈನ್ನಲ್ಲಿ ಆಲ್ಕೋಹಾಲ್ ಇದ್ದಿರಬಹುದು. ಅದನ್ನು ಸೇವಿಸಿದ ಬಳಿಕ ಲಘುವಾಗಿ ಕಿಕ್ ಹೊಡೆಯಬಹುದು. ಆದರೆ, ಅದನ್ನು ಮದ್ಯಸೇವನೆ ಎಂದು ತಪ್ಪಾಗಿ ಭಾವಿಸಬೇಡಿ.'
ನಾವು ಕೇಪ್ ಟೌನ್ ನಿಂದ ರಸ್ತೆ ಮಾರ್ಗದಲ್ಲಿ ಒಂದು ಗಂಟೆ ದೂರದಲ್ಲಿರುವ ಒಂದು ಸಾವಿರದ ಎಂಟುನೂರು ಎಕರೆ ಪ್ರದೇಶದಲ್ಲಿ ಹರಡಿರುವ `ವಜರ್ೆಲೆಜೆನ್' ಎಂಬ ವೈನ್ಯಾಡರ್್ನ ಕ್ಯಾಂಧರ್ ಎಂಬ ರೆಸ್ಟೋರೆಂಟ್ನಲ್ಲಿ ಕುಳಿತು ಅಲ್ಲಿನ ವೈನ್ ಹೀರುತ್ತಿರುವಾಗ, ಅದರ ವೈಶಿಷ್ಟ್ಯ, ಸಂಸ್ಕೃತಿ ಬಗ್ಗೆ ಅಲ್ಲಿನ ಮ್ಯಾನೇಜರ್ ರಸವತ್ತಾಗಿ ಬಣ್ಣಿಸುತ್ತಿದ್ದ.
A ‌c‌o‌uple ‌of ‌gla​s​s​es ‌of w‌ine,​​ ‌can ea​s‌​ily be ‌c‌o‌unted as two p‌o‌rt‌i‌ons ‌of f‌r‌u‌it ea‌c‌h day ಅಷ್ಟೇ ಎಂದು ವೈನ್ ರಾಯಭಾರಿಯಂತೆ ಹೇಳುತ್ತಿದ್ದ. `ದೇವರು ಉತ್ತಮ ಸಂಗತಿಗಳನ್ನು ಮೆಚ್ಚುತ್ತಾನೆ ಎಂಬುದಕ್ಕೆ ಸಾಕ್ಷಿ ವೈನ್' ಎಂದು ಬಣ್ಣಿಸುತ್ತಾ D‌ont w‌ine,​​ j‌ust d‌r‌in‌k  ಎಂದು ಹೇಳಿದ. ಕಂಪನಿಯ ಕೆಂಪು ವೈನ್ ನಾಲಗೆಯ ರುಚಿಗ್ರಂಥಿಗಳೊಂದಿಗೆ ಹಿತವಾದ ಸಂವಾದ ಆರಂಭಿಸಿತ್ತು.
ಆ ಮ್ಯಾನೇಜರ್ನನ್ನು ಸುಮ್ಮನೆ ಕಾಲೆಳೆಯಲೆಂಬಂತೆ, ನೆಪೋಲಿಯನ್ ಬೋನಾಪಾಟರ್ೆ ಹೇಳಿದ್ದಾನೆ. In v‌i‌ct‌o‌ry,​​ y‌o‌u des​e‌r​ve ‌c‌ham​p​a‌gne.​ In def​e​at y‌o‌u need w‌ine.​. ಅಂದರೆ ವೈನ್ ಬೇಸರದ, ದುಃಖದ ಮೂಡಿನಲ್ಲಿ ಸೇವಿಸುವ ಡ್ರಿಂಕಾ? ಎಂದು ಕೇಳಿದೆ. ಅದಕ್ಕೆ ಆತ ತಕ್ಷಣ `ಹಾಗೇನಿಲ್ಲ, ಅದು ನೆಪೋಲಿಯನ್ನ ಅನುಭವವಿರಬಹುದು. ಅದರೆ ನೀವು ಮಾಟರ್ಿನ್ ಲೂಥರ್ ಹೇಳಿದ ಮಾತು ಗಳನ್ನು ಕೇಳಿದ್ದೀರಾ?Bee‌r ‌is made by men,​​ w‌ine by ‌God' ಎಂದ. `ಬರ್ನಾರ್ಡ್ ಷಾ ಹೇಳಿದ ಮಾತನ್ನು ಕೇಳಿದ್ದೀರಾ?' ಎಂದು ಪ್ರಶ್ನಿಸಿದ. ನಾನು ಇಲ್ಲವೆಂಬಂತೆ ತಲೆಯಾಡಿಸಿದೆ. ಅದಕ್ಕೆ ಆತ ಹೇಳಿದ್ದು `‌My ‌only ‌re‌g‌ret ‌in l‌ife ‌is t‌hat I d‌idn't d‌r‌in‌k en‌o‌u‌g‌h w‌ine. ಇವನ ಮುಂದೆ ವೈನ್ ಬಗ್ಗೆ ಮಾತಾಡಿ ನನ್ನ ಅಜ್ಞಾನ ಪ್ರದರ್ಶಿಸುತ್ತಿದ್ದೇನೆ ಎಂದು ನನಗನಿಸಿತು. ಕಾರಣ ಆತ ವೈನ್ ತಯಾರಿಕೆಯ ಪರಿಸರದಲ್ಲಿ ಉಸಿರಾಡುತ್ತಿರುವವ. ಆತನಿಗೆ ವೈನೇ ಬದುಕು. ಆತನ ಮೈ, ಮನಗಳಲ್ಲಿ ಅದೇ ತುಂಬಿಕೊಂಡಿದೆ. ಅದಕ್ಕಿಂತ ಹೆಚ್ಚಾಗಿ ವೈನ್ ಬಗ್ಗೆ ಆತ pa​s​s‌i‌on​a​te ​ಆಗಿ ತಿಳಿದುಕೊಂಡಿದ್ದಾನೆ. `ಬೇರೆಲ್ಲವುಗಳಿಗಿಂತ ವೈನ್ ಗ್ಲಾಸ್ ಮೂಲಕ ಬದುಕನ್ನು ನೋಡಿದರೆ, ಅದು ಅತ್ಯಂತ ಸುಂದರ ಎಂದೆನಿಸುತ್ತದೆ' ಎಂಬ ಅನಾಮಿಕನೊಬ್ಬನ ಹೇಳಿಕೆ ನೆನಪಾಗಿ, ನನ್ನ ಮುಂದಿಟ್ಟ ವೈನ್ಗ್ಲಾಸನ್ನು ನೋಡಿದೆ. ಅದು ಆ ಕ್ಷಣದ ಸತ್ಯ ಎಂದೆನಿಸಿತು.
ಯಾರಾದರೂ ಗಾಲ್ಫ್ ಹಾಗೂ ವೈನ್ ಪರವಾಗಿ ಮಾತಾಡುತ್ತಿದ್ದರೆ, ಮಧ್ಯೆ ಬಾಯಿ ಹಾಕಬಾರದು. ಇಲ್ಲವೇ ಅವೆರಡನ್ನೂ ವಿರೋಧಿಸಿ ಮಾತಾಡಲೇಬಾರದು. ನೀವೇನೇ ಹೇಳಿದರೂ ಅವರು ಕೇಳುವುದಿಲ್ಲ. ಇನ್ನು ನಿಮ್ಮ ಅಭಿಪ್ರಾಯವನ್ನು ಒಪ್ಪುವ ಮಾತು ದೂರವೇ ಉಳಿಯಿತು. ಅಷ್ಟೇ ಅಲ್ಲ ಅವರಿಗೆ ಸಮಯ ಸರಿದಿದ್ದೇ ಗೊತ್ತಾಗುವುದಿಲ್ಲ. ಹಾಗಂತ ಇವೆರಡೂ ಸಾಮಾನ್ಯರಿಗೆ ಅರ್ಥವಾಗೊಲ್ಲ.  ಆದರೂ ಬಿಡುವುದಿಲ್ಲ. ತಾವೇ ಮಹಾ ಬುದ್ಧಿವಂತರೆಂಬಂತೆ ಮಾತಾ ಡುತ್ತಾರೆ. ಬೇಸರವಿಲ್ಲ, ಇವರ ಮಾತುಗಳನ್ನು ಕೇಳಲು ತುಂಬಾ ಖುಷಿಯಾಗುತ್ತದೆ. ನಾವು ವಾಸ್ತವ ಜಗತ್ತಿಗೆ ಎಷ್ಟು ಹತ್ತಿರವಾಗಿದ್ದೇವೆಂದು ನಮ್ಮ ಬಗ್ಗೆ ಹೆಮ್ಮೆಯಾಗುತ್ತದೆ! T‌he C‌omm‌on​s​en​se B‌o‌o‌k ‌of W‌ine   ಎಂಬ ಪುಸ್ತಕವಿದೆ. ಲಿಯಾನ್ ಆಡಮ್ಸ್ ಎಂಬಾತ ಬರೆದಿದ್ದು. ಆತ ವೈನ್ ಬಗ್ಗೆ ಹೇಳೋದೇನೆಂದರೆAny‌one w‌h‌o t‌r‌ies t‌o ma‌ke y‌o‌u be​l‌i​e​ve t‌hat ‌he ‌kn‌ows all ab‌o‌ut w‌ines ‌is ‌obv‌i‌o‌u​s​ly a fa‌ke.​. ಈ ಮಾತನ್ನು ಮ್ಯಾನೇಜರ್ಗೆ ಹೇಳಲು ಧೈರ್ಯ ಸಾಕಾಗಲಿಲ್ಲ. ಅದಕ್ಕಿಂತ ಹೆಚ್ಚಾಗಿ ಅದು ಸೌಜನ್ಯವೂ ಅಲ್ಲ ಎಂದೆನಿಸಿತು. ಅಷ್ಟಕ್ಕೂ ಆತ ಖಂಡಿತವಾಗಿಯೂ ಜಿಚಿಞಜ ಆಗಿರಲಿಲ್ಲ. ವೈನ್ಗಳ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದ. ಗುಂಡು ಹಾಕಿದವರು ತಮ್ಮ ಆ ಕ್ಷಣ ಮರೆಯುತ್ತಾರಂತೆ. ಇನ್ನು ವೈನ್ ಕುಡಿದವರೆಲ್ಲ, ವೈನ್ ಬಗ್ಗೆ ಮಾತನಾಡುವವರು ಜಗತ್ತನ್ನೇ ಮರೆಯುತ್ತಾರಂತೆ. ಈ ಸಾಲಿಗೆ ಗಾಲ್ಫ್ ನ್ನು ಸೇರಿಸಬಹುದು. ಇನ್ನು ಎರಡರ ಬಗ್ಗೆ ಮಾತಾಡುವವರ ಮಧ್ಯೆ ಸಿಲುಕಿದರೆ ನೀವು ಹಿಚುಕಿ ಬಿಸಾಕಿದ ಲಿಂಬು!
ಅದಿರಲಿ, ಕೇಪ್ಟೌನ್ನ ವಜರ್ೆಲೆಜೆನ್ ವೈನ್ಯಾಡರ್್ನಲ್ಲಿ ಒಂದು ಸುತ್ತು ಹಾಕಿ ಬಂದಾಗ ಅದರ ಸೌಂದರ್ಯ, ರಮಣೀಯ ವೈಭವ, ಪರಿಸರ, ಕಾಪಿಟ್ಟುಕೊಂಡ ಬಗೆ, ವಿಸ್ತಾರ, ಹಸುರು, ತಂಪು, ಪ್ರಶಾಂತ ವಾತಾವರಣ ಕಂಡು ವೈನ್ ಸೇವಿಸದೆಯೇ ತಲೆಸುತ್ತು ಬಂದಿದ್ದು ನಿಜ. ಇಂಥದೊಂದು `ವೈನಾದ ಲೋಕ' ಕಂಡು ಕ್ಷಣಕಾಲ ಮೈಮರೆತಿದ್ದು ಹೌದು. ವಜರ್ೆಲೆಜೆನ್ ಅಂದ್ರೆ s‌it‌u​a​ted fa‌r aw​ay​ ಎಂದರ್ಥ. ಹೆಸರಿಗೆ ತಕ್ಕುದಾದಕ್ಕಿಂತ ಹೆಚ್ಚಿಗೆ ಚೆನ್ನಾಗಿರುವ ಈ ಪ್ರದೇಶ ನಿಸರ್ಗ ಸೌಂದರ್ಯದ ಎಲ್ಲ ಬಿಡಿಭಾಗಗಳನ್ನು ಹೊದ್ದು ಅವತರಿಸಿದಂತಿದೆ. ಸುಮಾರು ಮುನ್ನೂರೈವತ್ತು ವರ್ಷಗಳ ಹಳೆಯದಾದ ಈ ವೈನ್ಯಾಡರ್ಿನಲ್ಲಿ ಅಪರೂಪದ ಸಸ್ಯ ಸಂಕುಲಗಳಿವೆ. ಇಪ್ಪತ್ತು ಮಂದಿ ತೆಕ್ಕೆ ಹಾಕಿದರೂ ಅಪ್ಪಿಕೊಳ್ಳಲಾಗದ ಮುನ್ನೂರು ವರ್ಷ ಹಳೆಯ ಐದಾರು ಕಪರ್ೂರದ ಮರಗಳಿವೆ. ಹಸುರಿನ ವಿವಿಧ shadeಗಳನ್ನು ಹೊದ್ದು ಮಲಗಿರುವ ಇಲ್ಲಿನ ಪ್ರಕೃತಿಯನ್ನು ನೋಡುತ್ತಿದ್ದರೆ ಹಿನ್ನೆಲೆ ಸಂಗೀತದಂತೆ ನವಿಲಿನ ಕೂಗಿನ ಕಲರವ. ಹುಳಿದ್ರಾಕ್ಷಿಯ ವಾಸನೆ. ಪಕ್ಕದಲ್ಲಿ ಜುಳುಜುಳು ಎಂದು ಸದ್ದೂ ಮಾಡದೇ ಹರಿಯುವ ಝರಿ... ನಾನೆಲ್ಲಿರುವೆ ಎಂಬುದನ್ನು ಕ್ಷಣಕಾಲ ಮರೆಸುವ ಅನುಭೂತಿಯನ್ನುಂಟು ಮಾಡುತ್ತದೆ.
ದಕ್ಷಿಣ ಆಫ್ರಿಕಾ ಮಹಿಮೆ ಅಂತಾರಾಷ್ಟ್ರೀಯ ಮಟ್ಟದ್ದು ಎಂದು ವಜರ್ೆಲೆಜೆನ್ ವೈನ್ಯಾಡರ್್ಗೆ ಭೇಟಿ ಕೊಟ್ಟಾಗಲೇ ಗೊತ್ತಿತ್ತು. ಯುರೋಪ್ ಹಾಗೂ ಆಸ್ಟ್ರೇಲಿಯಾದ ವೈನ್ಗಳಂತೆ ಇಲ್ಲಿನವುಗಳಿಗೂ ಭಾರೀ ಬೇಡಿಕೆ. ಡಚ್ರು ಹಾಗೂ ಬ್ರಿಟಿಷ್ರ ಪ್ರಭಾವದಿಂದ ಹದಿನೇಳನೆ ಶತಮಾನದ ಮಧ್ಯದಲ್ಲಿ ವೈನ್ ತಯಾರಿಕೆ ಆರಂಭವಾದರೂ ದಕ್ಷಿಣ ಆಫ್ರಿಕಾದ ವೈನ್ಗಳು ಜಗತ್ತಿನ ಇತರ ಪ್ರತಿಷ್ಠಿತ ಬ್ರ್ಯಾಂಡ್ಗಳ ಜತೆಗೆ ಪೈಪೋಟಿಗೆ ಇಳಿದಿರುವುದು ಇಪ್ಪತ್ತು ವರ್ಷಗಳ ಈಚೆಗೆ. ಈ ಎರಡು ದಶಕಗಳಲ್ಲಿಯೇ ಬರೀ ಕೇಪ್ಟೌನ್ನ ವೈನ್ಯಾಡರ್ಿನಿಂದಲೇ ಅವೆಷ್ಟೋ ಅಸಂಖ್ಯ ಬಾಟಲಿ ಮದ್ಯಗಳು ಹರಿದು ಹೋಗಿವೆ. ಕೇಪ್ ಪ್ರದೇಶದಲ್ಲಿರುವ ವೈನ್ ತಯಾರಿಕಾ ಕೇಂದ್ರಗಳಿಂದ 2010ರೊಂದರಲ್ಲೇ 378 ದಶಲಕ್ಷ ಲೀಟರ್ ವೈನ್ ಬೇರೆ ದೇಶಗಳಿಗೆ ರಫ್ತಾಗಿದೆಯೆಂದರೆ ಅಂದಾಜು ಹಾಕಿ. ಸುಮಾರು ಎರಡು ಲಕ್ಷಕ್ಕೂ ಅಧಿಕ ಭೂಪ್ರದೇಶದಲ್ಲಿ ವೈನ್ಯಾಡರ್್ ಹರಡಿಕೊಂಡಿದೆ. ವೈನ್ನ್ನು ರಫ್ತು ಮಾಡುವ ದೇಶಗಳ ಪೈಕಿ ದಕ್ಷಿಣ ಆಫ್ರಿಕಾಕ್ಕೆ ವಿಶ್ವದಲ್ಲಿ ಒಂಬತ್ತನೇ ಸ್ಥಾನ. ಜಾಗತಿಕ ಮಟ್ಟದ ವೈನ್ ಮೇಳದಲ್ಲಿ ಕಳೆದ ಎಂಟು ವರ್ಷಗಳಿಂದ ದಕ್ಷಿಣ ಆಫ್ರಿಕಾದ ವೈನ್ ಸತತ ಮೊದಲ ಐದರಲ್ಲಿ ಒಂದು ಸ್ಥಾನವನ್ನು (ಟಾಪ್ ಫೈವ್) ಗಳಿಸುತ್ತಾ ಬಂದಿರುವುದು ಗಮನಾರ್ಹ. ವೈನ್ ಸೇವನೆಯನ್ನು ದೇಶದೆಲ್ಲೆಡೆ ಮುಗುಮ್ಮಾಗಿ ಉತ್ತೇಜಿಸುವಂತಾಗುತ್ತದೆ. ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ಮೊದಲು ವೈನ್ ಕುಡಿಯುವುದು ಸಂಪ್ರದಾಯದಷ್ಟು ಸಹಜ. ಹೋಟೆಲ್ಗಳಲ್ಲಿ ಮಾತ್ರ ಅಲ್ಲ, ಕಾಡಿನಲ್ಲಿ ವನ್ಯಪ್ರಾಣಿಗಳ ವೀಕ್ಷಣೆಗೆ ಹೋಗುವಾಗಲೂ ಟೀ, ಕಾಫಿ ಜತೆ ವೈನ್ಗೂ ಒಂದು ಸ್ಥಾನಮಾನವಿದೆ.
ಇತ್ತೀಚಿನ ವರ್ಷಗಳಲ್ಲಿ ಬಹಳ ಜನಪ್ರಿಯವಾಗಿರುವುದು ವೈನ್ ಪ್ರವಾಸೋದ್ಯಮ (ವೈನ್ ಟೂರಿಸಂ) ವೈನ್ ಯಾಡರ್್ನ್ನು ಪ್ರವಾಸಿಗರಿಗೆ ಸಂಪೂರ್ಣ ತೆರೆದಿಡುವ ಪ್ರಯತ್ನವಿದು. ಪ್ರವಾಸಿಗರನ್ನು ವೈನ್ಯಾಡರ್್ಗೆ ಕರೆದುಕೊಂಡು ಬಂದು, ಅವರನ್ನು ಅಲ್ಲಿಯೇ ಉಳಿಸಿ, ದ್ರಾಕ್ಷಿ ತೋಟ, ಸಂಸ್ಕರಣ ಕೇಂದ್ರ, ವೈನ್ ತಯಾರಿಕಾ ಕೇಂದ್ರಗಳಲ್ಲೆಲ್ಲ ಸುತ್ತಾಡಿಸಿ, ವೈನ್ ತಯಾರಿಸುವ ವಿಧಾನಗಳ ಬಗ್ಗೆ ಉಪನ್ಯಾಸ ನೀಡಿ, ಹತ್ತಾರು ವಿವಿಧ ಬಗೆಯ ವೈನ್ಗಳ ಬಾಯಿರುಚಿ ತೋರಿಸುವುದು ವೈನ್ ಟೂರಿಸಂನ ಪ್ರಮುಖ ಆಕರ್ಷಣೆ.
ಒಂದು ವಾರದ ಈ ಪ್ಯಾಕೇಜ್ನಲ್ಲಿ ವೈನ್ಗೆ ಸಂಬಂಧಿಸಿದ ಎಲ್ಲ ಮಾಹಿತಿ ನೀಡಲಾಗುವುದು. ಇನ್ನು ವೈನ್ಪ್ರಿಯರಾದರೆ ಒಂದು ವಾರ ಇಷ್ಟು ಬೇಗ ಮುಗಿದುಹೋಯಿತಾ ಅಂದುಕೊಳ್ಳುತ್ತೀರಿ. ನೀವು ವೈನ್ಪ್ರಿಯರಲ್ಲದಿದ್ದರೂ ಇದನ್ನು ಇಷ್ಟಪಡುತ್ತೀರಿ. ಒಂದು ದಿನದ ಭೇಟಿಯಲ್ಲೂ ವೈನ್ಗೆ ಸಂಬಂಧಿಸಿದಂತೆ ನಿಮ್ಮಲ್ಲೊಂದು ಅಭಿರುಚಿ ಮೂಡಿಸುವ ಪುಟ್ಟ ಬದಲಾವಣೆಯಾಗುವುದು ನಿಕ್ಕಂಟು. ಅಷ್ಟರ ಮಟ್ಟಿಗೆ ವೈನ್ಗೈಡ್ ಅದರ ಬಗ್ಗೆ ನಿಮ್ಮನ್ನು c‌o‌r‌r‌upt ಮಾಡುತ್ತಾನೆ. ಅಲ್ಲಿಂದ ವಾಪಸ್ ಬರುವಾಗ ಹತ್ತಾರು ವಿವಿಧ ವೈನ್ಗಳನ್ನು ಟೇಸ್ಟ್ ಮಾಡಿ ಅದರ ಬಗ್ಗೆ ನನಗೂ ಗೊತ್ತು ಎಂಬಷ್ಟು ತೊದಲಲಾರಂಭಿಸದಿದ್ದರೆ ಕೇಳಿ. ಕೆಲವು ವೈನ್ಯಾಡರ್್ಗಳಿಗೆ ತಾಗಿಕೊಂಡೇ ವನ್ಯಧಾಮವೂ ಇದೆ. ಅಂಥ ಕಡೆಗಳಲ್ಲಿ ಸಫಾರಿ ವೀಕ್ಷಣೆ ಮತ್ತೊಂದು ಆಕರ್ಷಣೆ.

----
ಇಲ್ಲಿನ ಎಲ್ಲ ವೈನ್ಯಾಡರ್್ಗಳು ಪ್ರಕೃತಿಯ ಸೊಬಗಿನಲ್ಲಿ ಎಂದು ಆಗ ತಾನೆ ಎದ್ದಂತೆ ಕಾಣುವುದರಿಂದ ಅಲ್ಲಿನ ಭೇಟಿ ಸ್ಮರಣೀಯ.
ವಾಜರ್ೆಲೆಜೆನ್ ವೈನ್ಯಾಡರ್್ನಿಂದ ಮರಳಿ ಬರುವಾಗ ನನಗೆ ನೆನಪಾಗಿದ್ದು ಖ್ಯಾತ ಪಶರ್ಿಯನ್ ಕವಿ, ಸೂಫಿ ಸಂತ ಜಲಾಲುದ್ದೀನ್ ಮೊಹಮ್ಮದ್ ರುಮಿ ಹೇಳಿದ ಮಾತು E‌it‌he‌r ‌g‌ive me m‌o‌re w‌ine ‌o‌r le​a​ve me al‌one!​​

(ಪ್ರದಕ್ಷಿಣೆ ಮುಂದುವರಿಯುವುದು)

- ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement