ಚೌರಂಗೋತ್ಸವ ಇಂದಿನಿಂದ
ಬೆಂಗಳೂರಿನ ಸಿರಿವರ ಕಲ್ಚರಲ್ ಅಕಾಡೆಮಿ ಮತ್ತು ಧಾರವಾಡದ ರಂಗ ಪರಿಸರದ ಸಹಯೋಗದಲ್ಲಿ ಡಿ.ಎಸ್.ಚೌಗಲೆಯವರ ನಾಟಕಗಳ ಹಬ್ಬವನ್ನು 'ಚೌರಂಗೋತ್ಸವ' ಎಂದು ಆಚರಿಸುತ್ತಿದ್ದಾರೆ. ನ.16 ರಿಂದ 18 ರವರೆಗೆ ಬೆಳಗಾವಿಯ ಸದಾಶಿವನಗರದಲ್ಲಿನ ಪದ್ಮಶ್ರೀ ಚಿಂದೋಡಿ ಲೀಲಾ ರಂಗಮಂದಿರದಲ್ಲಿ ಹಮ್ಮಿಕೊಂಡಿದೆ. 16 ರಂದು ಬೆಂಗಳೂರಿನ ಜಂಗಮರಂಗ ತಂಡದಿಂದ ಪ್ರದೀಪ ತಿಪಟೂರು ನಿರ್ದೇಶನದಲ್ಲಿ 'ದಿಶಾಂತರ' ನಾಟಕ. 17 ರಂದು ಸಾಗರದ ಸ್ಪಂದನ ತಂಡದಿಂದ 'ಉಧ್ವಸ್ತ' ನಾಟಕ. 18 ರಂದು ನೀನಾಸಂ ಹೆಗ್ಗೋಡು ಅಭಿನಯಿಸುವ ನಾಟಕ 'ಗಾಂಧಿ ವಿರುದ್ಧ ಗಾಂಧಿ'. ಸಮಯ: ಸಂಜೆ 6.30ಕ್ಕೆ.