ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಏನ ನುಡಿವುದು ವೀಣೆ?

Mainashree
Updated On : 18 Nov 2013, 6:43 am

ವಿರಹವು ಶೃಂಗಾರದ ಒಂದು ಅವಸ್ಥೆಯೇ. ಶೃಂಗಾರಕ್ಕೆ ಎರಡು ಅವಸ್ಥೆಗಳು- ಮಿಲನದ ಸಂದರ್ಭದಲ್ಲಿ ಸಂಭೋಗ ಶೃಂಗಾರ. ವಿರಹವೆಂದರೆ ವಿಪ್ರಲಂಭ ಶೃಂಗಾರ. ಹತ್ತಾರು ರೀತಿಗಳಲ್ಲಿ ಪ್ರಿಯ- ಪ್ರಿಯೆಯರು ತಮ್ಮ ಸಂಗಾತಿಗಳನ್ನು ಧ್ಯಾನಿಸಿ ಮನದಲ್ಲೇ ಅವರನ್ನು ಕಾಣುತ್ತಾ ಅವರೊಂದಿಗೆ ಸಮ್ಮಿಲನ ಹೊಂದುತ್ತಾ ಇರುವುದರಿಂದ , ಇದು ರತಿಗಿಂತ ಒಂದು ಪಟ್ಟು ಮಿಗಿಲಾದುದೂ ಹೌದು. ಇನ್ನು, ವಿರಹಕ್ಕೆ ಈಡಾದವರನ್ನು ನೋಡುವುದು ಶೋಚನೀಯ.

ಉತ್ಸಂಗೇ ವಾ ಮಲಿನವಸನೇ ಸೌಮ್ಯ ನಿಕ್ಷಿಪ್ಯ ವೀಣಾಂ
ಮದ್ಗೋತ್ರಾಂಕಂ ವಿರಚಿತಪದಂ ಗೇಯಮುದ್ಗಾತುಕಾಮಾ
ತಂತ್ರೀಮಾದ್ರಾಂ ನಯನಸಲಿಲೈಃ ಸಾರಯಿತ್ವಾ ಕಥಂಚಿದ್
ಭೂಯೋಭೂಯಃ ಸ್ವಯಮಪಿ ಕೃತಾಂ ಮೂರ್ಛನಾಂ ವಿಸ್ಮರಂತೀ


ಕಾಳಿದಾಸನ ಮರೆಯಲಾಗದ ಶೃಂಗಾರ ಚಿತ್ರಣಗಳಲ್ಲಿ ಇದೂ ಒಂದು. ಮೇಘದೂತದ ನಾಯಕಿ, ಯಕ್ಷನ ಮಡದಿಯ ಅವಸ್ಥೆ ಇದು: ಹಳೆಯ ಸೀರೆಯನ್ನು ಉಟ್ಟಿದ್ದಾಳೆ. ತೊಡೆಯಲ್ಲಿ ವೀಣೆಯನ್ನು ಇಟ್ಟುಕೊಂಡಿದ್ದಾಳೆ. ತನ್ನ ಪ್ರಿಯಕರನ ಹೆಸರು ಸೇರಿಸಿ ತಾನೇ ಹಾಡೊಂದನ್ನು ರಚಿಸಿದ್ದಾಳೆ. ಅದನ್ನು ವೀಣೆಯಲ್ಲಿ ನುಡಿಸುವ ಆಶೆ ಅವಳದು. ಆದರೆ ಪ್ರಿಯನ ನೆನಪಿನಿಂದಲೇ ಆಕೆಯ ಕಂಗಳಲ್ಲಿ ಅಶ್ರುಜಲ ಧಾರಾಕಾರವಾಗಿ ಸುರಿಯತೊಡಗಿದೆ. ಅವು ವೀಣೆಯ ತಂತಿಯ ಮೇಲೆ ಬೀಳುತ್ತಿವೆ. ಆ ಹನಿಗಳನ್ನು ತೊಡೆಯುವಾಗ, ವೀಣೆ ಏನೇನೋ ಸ್ವರಗಳನ್ನು ಯದ್ವಾತದ್ವಾ ಪಲುಕುತ್ತದೆ. ಅದನ್ನು ಕೇಳಿ ಆಕೆ ತಾನು ಕಟ್ಟಿದ್ದ ಹಾಡನ್ನೇ ಸಂಪೂರ್ಣ ಮರೆತುಬಿಡುತ್ತಾಳೆ!

- ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement