ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಭಾರತೀಯ ಮಹಿಳೆಯರು ಮತ್ತು ಸ್ವಾಮೀಜಿ!

Mainashree
Updated On : 18 Nov 2013, 6:43 am

ಸ್ವಾಮೀಜಿ ಒಂದು ದಿನ 'ಭಾರತೀಯ ಮಹಿಳೆಯರ ಆದರ್ಶಗಳು' ಕುರಿತು ಉಪನ್ಯಾಸ ನೀಡಿದರು. ಭಾರತೀಯ ನಾರಿತ್ವದ ಸ್ವರೂಪ, ತಾಯ್ತನದ ಆದರ್ಶವನ್ನು ವಿವರಿಸುತ್ತಾ, 'ನನ್ನ ಸನ್ಯಾಸ ಜೀವನಕ್ಕೆ ಸ್ಫೂರ್ತಿ ಸಿಕ್ಕಿದ್ದೇ ನನ್ನ ತಾಯಿಯಿಂದ. ನನ್ನ ಈ ಜೀವನಕ್ಕೆ ಹಾಗೂ ನಾನು ನಡೆಸಿಕೊಂಡು ಬರುತ್ತಿರುವ ಈ ಕಾರ್ಯಕ್ಕೆ ನನ್ನ ತಾಯಿಯ ಪರಮಪವಿತ್ರ ಚಾರಿತ್ರ್ಯ ನಿರಂತರ ಸ್ಫೂರ್ತಿ' ಎಂದು ತಮ್ಮ ತಾಯಿಯ ಉದಾತ್ತ ಗುಣಗಳನ್ನು ವರ್ಣಿಸಿದರು. ಇದರಿಂದ ಪ್ರಭಾವಿತರಾದ ಅಮೆರಿಕದ ಮಹಿಳೆಯರು ಕ್ರಿಸ್‌ಮಸ್ ಹಬ್ಬದ ಸಮಯದಲ್ಲಿ ಸ್ವಾಮೀಜಿಗೆ ತಿಳಿಯದಂತೆ ಭಾರತದಲ್ಲಿದ್ದ ಅವರ ತಾಯಿ ಭುವನೇಶ್ವರಿ ದೇವಿಗೆ ಒಂದು ಪತ್ರ ಜತೆಗೆ ಬಾಲಕ್ರಿಸ್ತನ ಸುಂದರ ಚಿತ್ರವನ್ನು ಕಳುಹಿಸಿಕೊಟ್ಟರು. ಆ ಪತ್ರದಲ್ಲಿ 'ಪ್ರಿಯ ತಾಯಿ, ನಿಮ್ಮ ಮಗನ ರೂಪದಲ್ಲಿ ನಿಮ್ಮ ಜೀವನ ಹಾಗೂ ಕೃತಿಗಳನ್ನು ಕೃತಜ್ಞತೆಯಿಂದ ಗುರುತಿಸಿದ್ದೇವೆ. ಭಗವಂತ ನಿಂದಲೇ ಬಂದಂತಹ ಭ್ರಾತೃತ್ವ ಮತ್ತು ಏಕತೆಗಳ ನೆನಪಿಗಾಗಿ ಈ ಕಿರುಕಾಣಿಕೆ ಸ್ವೀಕರಿಸಿ' ಎಂದು ಬರೆದಿದ್ದರು.
ಸ್ವಾಮೀಜಿ ಅಮೆರಿಕದಲ್ಲಿ ಭಾರತೀಯ ಸ್ತ್ರೀಯರ ಆದರ್ಶಗಳನ್ನು ಕುರಿತು ಉಪನ್ಯಾಸ ನೀಡುತ್ತಿದ್ದರು. ಸ್ತ್ರೀಯರ ವಿದ್ಯಾಭ್ಯಾಸಕ್ಕಾಗಿ ಭಾರತದಾದ್ಯಂತ ಸಂಸ್ಥೆಗಳನ್ನು ಕಟ್ಟಿ ತನ್ಮೂಲಕ ವಿದ್ಯಾವಂತ ಮಹಿಳೆಯರ ತಲೆಮಾರನ್ನೇ ಸೃಷ್ಟಿಸಬೇಕು ಎಂಬ ಅಭಿಲಾಷೆ ಅವರದ್ದಾಗಿತ್ತು. ಹೀಗೆ ಭವ್ಯ ಭಾರತದ ಪುನರುತ್ಥಾನದಲ್ಲಿ ಸ್ತ್ರೀಯರ ಪಾತ್ರವನ್ನು ಮನಗಂಡಿದ್ದ ಸ್ವಾಮೀಜಿ ಅವರ ಏಳ್ಗೆಗಾಗಿ ಬೃಹತ್ ಯೋಜನೆಯನ್ನು ರೂಪಿಸಿದ್ದು ಅವರ ಸ್ತ್ರೀ ಸಮಾನತೆಯ ನಿಲುವನ್ನು, ಸ್ತ್ರೀ ಸಬಲೀಕರಣದ ಮಹತ್ವವನ್ನು ಎತ್ತಿ ತೋರಿಸುತ್ತದೆ.

- ಆನಂದ ಎಸ್.ಎನ್.
anandsn193@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement