ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಮಾನವೀಯ ಮೌಲ್ಯಗಳ ಸರದಾರ!

Lingaraj Badiger
Updated On : 22 Nov 2013, 6:28 am

ವಿಶ್ವ ಕ್ರಿಕೆಟ್‌ನ ದೇವರು, ಭಾರತದ ಹೆಮ್ಮೆಯ ಹಾಗೂ ನಮ್ಮೆಲ್ಲರ ನೆಚ್ಚಿನ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್‌ಗೂ ವಿದಾಯದ ಘೋಷಿಸಿದಾಗ ಅಭಿಮಾನಿಗಳ ಹೃದಯ ಬಡಿತ ಒಮ್ಮೆ ನಿಂತು ಹೋಯಿತು. ಶತಕಗಳ ಶತಕ ವೀರ, ದಾಖಲೆಗಳ ಸರದಾರ, ಇಷ್ಟಾದರೂ ಕೂಡ ಅವರು ಮೈದಾನದಲ್ಲಿ ಯುವಕರಿಗೆ ಮಾರ್ಗದರ್ಶಕರಾಗಿ, ಒಬ್ಬ ಶಿಸ್ತುಬದ್ದ ಕ್ರಿಕೆಟಿಗರಾಗಿ ಕ್ರೀಡಾ ಸ್ಫೂರ್ತಿ ಮೆರೆದ ಮಹಾನ್ ಆಟಗಾರ. ಸಚಿನ್ ತನ್ನ ದಾಖಲೆಗಳೊಂದಿಗೆ ಭಾರತದ ಹೆಸರನ್ನು ವಿಶ್ವಕ್ಕೆ ಪರಿಚಯಿಸದವರು ಅನಿಶ್ಚಿತೆಯಿಂದ ಕೂಡಿದ ಕ್ರಿಕೆಟ್ ಅವಧಿಯಲ್ಲಿ ಸುದೀರ್ಘ 24 ವರ್ಷಗಳ ಕಾಲ ಆಡಿರುವುದೇ ಒಂದು ಸಾಧನೆ. ಅವರ ನಿವೃತ್ತಿಯ ಜೀವನ ಸುಖವಾಗಿರಲಿ ಎಂದು ಹಾರೈಸುವೆ.
-ಆರ್.ಎಸ್. ಶ್ರೀಕಾಂತಕುಮಾರ್

ಶತಕಗಳ ಸರದಾರ
ಸಚಿನ್ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಕ್ರಿಕೆಟ್‌ನ ದೇವರು ಎಂದು ಬಿಂಬಿಸಲು ಅವರ ಶಿಸ್ತು, ಸಂಯಮವೇ ಕಾರಣ. ಒಬ್ಬ ಸಾಧಾರಣ, ಸರಳ, ಸಜ್ಜನಿಕೆಯ ವ್ಯಕ್ತಿತ್ವದ ಸಚಿನ್ ಸಹೃದಯರಿಗೆ ಹಾಗೂ ಭಾರತಕ್ಕೆ ಸ'ಚಿನ್ನ'ವೇ ಸರಿ. ಚಿನ್ನದ ಮೌಲ್ಯ ಎಂದಿಗೂ ಕುಗ್ಗುವುದಿಲ್ಲ. ಹಾಗೆಯೇ ಸಚಿನ್ ಕೂಡ. ಪ್ರತಿಯೊಬ್ಬರಿಗೂ ವಿಶ್ರಾಂತಿ ಎಂಬುದು ಮುಖ್ಯವಾಗಿರುತ್ತದೆ. ಸಚಿನ್ ಎಂದೆಂದಿಗೂ ಉದಯೋನ್ಮುಖ ಪ್ರತಿಭೆಗಳಿಗೆ ಜೀವಂತ ಉದಾಹರಣೆ. ತನ್ನ ಸೋಲು, ನಿರಾಶೆಗಳ ನಡುವೆ ಗುರಿ ಸಾಧಿಸಲು ಮುಖ್ಯ ಕಾರಣ ಅವರಲ್ಲಿನ ಆತ್ಮವಿಶ್ವಾಸ. ಅವಿರತ ಪ್ರಯತ್ನ ಹಠ ಬಿಡದೆ ಸಾಧನೆ ಮಾಡಿದ್ದರ ಫಲ ಅವರು ಮಿನುಗುತಾರೆಯಾಗಿರುವುದು.
-ಗೂಳೂರು ಕವಿತ ಕೆ.ಆರ್, ತುಮಕೂರು

ನಿವೃತ್ತಿ ಪಡೆದ ದೇವರು
ಸಚಿನ್ ಕ್ರಿಕೆಟ್ ಇತಿಹಾಸದ ದಂತಕತೆ.  ಕ್ರಿಕೆಟ್‌ನ ದೇವರು, ಮಾಸ್ಟರ್ ಬ್ಲಾಸ್ಟರ್, ವಿವೇಚನಾ ಮೂರ್ತಿ ಎಂದೆಲ್ಲ ಕರೆಸಿಕೊಂಡಿದ್ದಾರೆ. ಕ್ರಿಕೆಟ್ ಇತಿಹಾಸ ಕಂಡ ಭಾರತದ ಹೆಮ್ಮೆಯ ಕುವರ. ಕ್ರಿಕೆಟ್‌ಗೆ ಎಷ್ಟೋ ಜನ ಬಂದು ಹೋದರು ಆದರೆ, ಸಚಿನ್ ಸಾಧಿಸಿದ್ದು ಅಗಾಧ, ಕ್ರಿಕೆಟ್‌ನ ಎಲ್ಲಾ ದಾಖಲೆಗಳ ಸರದಾರ. 24 ವರ್ಷಗಳ ಕಾಲ ಭಾರತೀಯ ತಂಡದಲ್ಲಿ ಆಡಿದ ವಿಶ್ವದ ಹೆಮ್ಮೆಯ ಆಟಗಾರ. ಗಾಸಿಪ್‌ಗಳಿಗೆ ಹೆದರದೇ ತನ್ನ ದಿಟ್ಟ ಆಟದಿಂದಲೇ ಉತ್ತರಿಸಿದಾತ. ಅವರ ನಿವೃತ್ತಿ ಎಲ್ಲರಿಗೂ ಬೇಸರದ ಸಂಗತಿ. ಆದರೆ , ಯುವಕರಿಗೆ ಅವಕಾಶ ನೀಡಬೇಕಾದರೆ ಹಿರಿಯರು ತಮ್ಮ ಜಾಗ ಖಾಲಿ ಮಾಡಲೇಬೇಕು. ಮುಂದೆ ಅವರು ಭಾರತ ತಂಡದ ಕೋಜ್ ಆಗಿ ಕಿರಿಯ ಆಟಗಾರರಿಗೆ ಮಾರ್ಗಗರ್ಶಕರಾಗಲಿ.
-ಆನಂದ.ಕೆ.ಎಸ್, ಮೈಸೂರು

'ಜಗುಲಿ'ಯಲ್ಲಿ ಈ ಸಲದ ವಿಷಯ 'ಖಾಸಗಿ ಬಸ್ ಪ್ರಯಾಣ ಸುರಕ್ಷಿತವೇ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್:  anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement