ವಿಶ್ವದ ಮೊಟ್ಟ ಮೊದಲ ರಾಷ್ಟ್ರಗೀತೆ
ಒಂಬತ್ತನೇ ಶತಮಾನದಲ್ಲಿ ಜಪಾನ್‌ನಲ್ಲಿ ಹಾಡಲಾದ 'ಕಿಂಗಾವ್' ವಿಶ್ವದ ಮೊಡ್ಡಮೊದಲ ರಾಷ್ಟ್ರಗೀತೆಯೆಂದು ನಂಬಲಾಗಿದೆ. 'ಗಾಡ್ ಸೇವ್ ದ ಕ್ವೀನ್' ಎಂಬ ಮೊದಲ ರಾಷ್ಟ್ರಗೀತೆಯನ್ನು ಬ್ರಿಟಿಷರು 1619ರಲ್ಲಿ ಹಾಡಿದರು. 1745ರ ಇದನ್ನು ಸಾರ್ವಜನಿಕವಾಗಿ ಹಾಡಲಾಯಿತು. ಭಾರತದ ರಾಷ್ಟ್ರಗೀತೆಯನ್ನು 1911 ಡಿಸೆಂಬರ್‌ನಲ್ಲಿ ಕೋಲ್ಕತಾದಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಮೊದಲ ಬಾರಿಗೆ ಹಾಡಲಾಯಿತು. 1950ರಲ್ಲಿ ಈ ಗೀತೆಯನ್ನು ಭಾರತದ ರಾಷ್ಟ್ರಗೀತೆಯಾಗಿ ಅಂಗೀಕರಿಸಲಾಯಿತು. ಇದೇ ರೀತಿ ವಿಶ್ವದ ಎಲ್ಲ ದೇಶಗಳೂ ತಮ್ಮದೇ ಆದ ರಾಷ್ಟ್ರಗೀತೆಗಳನ್ನು ಹೊಂದಿವೆ.
- ಹರಳಹಳ್ಳಿ ಪುಟ್ಟರಾಜು