ಭಾರತೀಯರು ನಾವು
ಎಂತಹ ರೋಮಾಂಚಕ ಕ್ಷಣವದು 24 ವರ್ಷಗಳ ಕಾಲ ತಮ್ಮೆಲ್ಲರ ಮನರಂಜಿಸಿದ ಸಚಿನ್ ರನ್ನು ಕ್ರೀಡಾಭಿಮಾನಿಗಳು ಅಭಿನಂದಿಸುವಾಗ ಆ ಕ್ರಿಕೆಟ್ ದೇವರು ತನ್ನ ಹಿತೈಷಿಗಳೆಲ್ಲರಿಗೂ ಆನಂದಬಾಷ್ಪದೊಂದಿಗೆ ಕೃತಜ್ಞತೆ ಅರ್ಪಿಸಿ, ತನ್ನನ್ನು ಇಷ್ಟು ದಿನಗಳವರೆಗೆ ಯಶಸ್ವಿಯಾಗಿ ಮುನ್ನಡೆಸಿದ ಭೂತಾಯಿಗೆ ನಮಸ್ಕರಿಸಿದರು. ಇಂತಹ ಭಾವನಾತ್ಮಕ ಸಂಬಂಧಗಳನ್ನು ಭಾರತೀಯರಲ್ಲಿ ಮಾತ್ರ ನೋಡಲು ಸಾಧ್ಯ.
-ಸಿ.ಎಂ. ನಾಗಾರ್ಜುನ್, ಚನ್ನಪಟ್ಟಣ
ಸಾಧಕನಿಗೆ ನಮನ
ಭಾರತರತ್ನ, ಕ್ರಿಕೆಟ್ ದಿಗ್ಗಜ, ಲಿಟಲ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ನಿವೃತ್ತಿ ಕ್ರಿಕೆಟ್ ಲೋಕಕ್ಕೆ ಬೇಸರ ತಂದಿದ್ದರೂ, ಯುವ ಕ್ರೀಡಾಪಟುಗಳಿಗೆ ಅವಕಾಶ ದೊರೆತಿದೆ. ಭಾರತದ ಅಗಮ್ಯ ಚೇತನ, ವಿಶ್ವದಲ್ಲೇ ಯಾರೂ ಮಾಡಲಾರದ ಸಾಧನೆ ಮೆರೆದ ಸಚಿನ್ ಅವರಿಗೆ ನನ್ನದೊಂದು ದೊಡ್ಡ ಸಲಾಂ. ತಮ್ಮ 24 ವರ್ಷಗಳ ಕ್ರಿಕೆಟ್ ಪಯಣವನ್ನು ಮುಕ್ತಾಯಗೊಳಿಸಿದ 'ವಾಮನಮೂರ್ತಿ'ಗೆ ಹೃದಯಪೂರ್ವಕ ಧನ್ಯವಾದಗಳು.
-ಸಂಜೀವ.ಪಿ, ಬೀಳಗಿ
ವಿವಾದ ರಹಿತವ್ಯಕ್ತಿ
ಸಚಿನ್ ಕ್ರಿಕೆಟ್ ಜಗತ್ತಿನ ಧ್ರುವತಾರೆ. ತಮ್ಮ ವೃತ್ತಿ ಬದುಕಿನಲ್ಲಿ ಎಂದೆಂದಿಗೂ ವಿವಾದಗಳನ್ನು ಸೃಷ್ಟಸಿಕೊಂಡವರಲ್ಲ. ಕ್ರೀಸ್ಗೆ ಇಳಿದು ಎದುರಾಳಿಗಳ ಮೈಯಲ್ಲಿ ಬೆವರಿಳಿಸಿ ಯಾವುದಾದರೊಂದು ಇತಿಹಾಸ ನಿರ್ಮಿಸದೆ ಬರುತ್ತಿರಲಿಲ್ಲ್ಲ. ಇವರ ಆಟ ವೀಕ್ಷಿಸುವಾಗ ಕ್ರಿಕೆಟ್ ಪ್ರೇಮಿಗಳು ಮೈಯಲ್ಲಾ ಕಣ್ಣಾಗಿ ನೋಡ ಬೇಕಾಗುತ್ತಿತ್ತು. ಇವರ ನಿವೃತ್ತಿ ಅಗತ್ಯವೂ, ಅನಿವಾರ್ಯವೂ ಹೌದು. ಹಣ್ಣೆಲೆ ಚಿಗುರಿ ಹಸಿರೆಲೆಗೆ ದಾರಿ ಮಾಡಿ ಕೊಡುವುದು ಪ್ರಕೃತಿಯ ನಿಯಮ. ಇದನ್ನು ಎಲ್ಲರೂ ಪಾಲಿಸಬೇಕಲ್ಲವೇ?
-ವೀರೇಶ್.ಕೆ.ಟಿ., ಮಾಡ್ಲಾಕನಹಳ್ಳಿ
ಅಪರೂಪದ ವ್ಯಕ್ತಿತ್ವ!
ಕ್ರಿಕೆಟ್ ಸಂಕುಲದ ತಿಲಕದಂತಿರುವ ಸಚಿನ್ ಮೈದಾನದಲ್ಲಿ ಕ್ರಿಕೆಟ್ ಆಡೋದನ್ನ ನಿಲ್ಲಿಸಿದ್ದಾರೆ ಹೊರತು ಮನಸ್ಸಿನಿಂದಲ್ಲ! ಕ್ರಿಕೆಟ್ ಲೋಕದ ದೇವರೆಂದು ಪ್ರಖ್ಯಾತರಾಗಿದ್ದು ಹಣ, ಗೌರವ ಮತ್ತು ವಿನಯ ಒಬ್ಬ ವ್ಯಕ್ತಿಯಲ್ಲಿ ಇರಲು ಸಾಧ್ಯವಿಲ್ಲ ಎಂಬ ಮಾತಿಗೆ ಸಚಿನ್ ಅಪವಾದ. ಸಚಿನ್ ನಿನಗಿದೋ ಅಭಿನಂದನೆಗಳು.
-ವೀರು ಸರಸಂಬಾ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.