ನಿವೃತ್ತಿ ಶ್ಲಾಘನೀಯ!
ಕ್ರಿಕೆಟ್ನ ವಿಶ್ವ ದಾಖಲೆಯ ವೀರ ಸಚಿನ್ ಮೇಲಿನ ಮೋಹ, ಸೆಳೆತ, ಪ್ರೀತಿ ಇರುವ ಕಾರಣ ಅವರಿನ್ನೂ ಆಡಬೇಕಿತ್ತು ಎನಿಸುತ್ತದೆ. ಆದರೆ, ಅವರ ಇತ್ತೀಚಿನ ಆಟಗಳ ವೈಖರಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅವರು ರನ್ ಗಳಿಸುವುದಕ್ಕಾಗಿ ಪರದಾಡಿದ್ದನ್ನು ಕಂಡಿದ್ದೇವೆ. ವಯಸ್ಸು ನಲವತ್ತಾದ ಮೇಲೆ ಕ್ರಿಕೆಟ್ ಆಡುವುದು ಅಷ್ಟು ಸುಲಭವಲ್ಲ. ಕಣ್ಣು, ಕಿವಿ, ಮತ್ತು ಚುರುಕುತನ ಮೊದಲಿನಂತೆ ಕೆಲಸ ಮಾಡುವುದಿಲ್ಲ. ಸರ್ ಬ್ರಾಡ್ಮನ್, ಗವಾಸ್ಕರ್ ಮತ್ತು ಇತರರ ದಾಖಲೆಗಳನ್ನು ಮುರಿದು ಸಾಗಿ ಬಂದದ್ದು ಇವರ ಮೈಲುಗಲ್ಲೇ ಸರಿ. ಹೊಸಬರಿಗೆ ಅವಕಾಶ ಮಾಡಿಕೊಡುವ ಸಲುವಾಗಿ ಇವರ ನಿವೃತ್ತಿ ಶ್ಲಾಘನೀಯ.
- ಜೆ.ಪುಟ್ಟಸ್ವಾಮಿ, ಮೈಸೂರು
ಸಚಿನ್ ನಿವೃತ್ತಿ
ಮಠಾಧೀಶರಾಗಲಿ, ವೈದ್ಯರಾಗಲಿ, ವಕೀಲರಾಗಲಿ, ಶಿಕ್ಷಕರಾಗಲಿ, ಪುರೋಹಿತರಾಗಲಿ, ಆಡಳಿತಾಧಿಕಾರಿಗಳಾಗಲಿ ಅವರೆಲ್ಲ ತಮ್ಮ ಸ್ಥಾನದಿಂದ ವೃತ್ತಿ ಅಥವಾ ಕಾಯಕವನ್ನು ಪ್ರವೃತ್ತಿಯನ್ನಾಗಿ ಮಾಡಿಕೊಂಡಲ್ಲಿ ನಿವೃತ್ತಿ ಅಥವಾ ಸ್ವಯಂ ನಿವೃತ್ತಿ ಹೊಂದುವ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ನಿವೃತ್ತಿಯಾಗಲೇಬೇಕು. ಭಗವದ್ಗೀತೆಯಲ್ಲಿ ಹೇಳುವಂತೆ 'ಕಾರ್ಯೇಶು ಕೌಶಲಂ' ಎನ್ನುವಂತೆ ತಾವು ಖ್ಯಾತಿ ಪ್ರಖ್ಯಾತಿಯನ್ನು ಹೊಂದಿ ವಿಶ್ವವನ್ನೇ ಬೆರಗುಗೊಳಿಸಿ ಬಾಯಲ್ಲಿ ಬೆರಳು ಇಟ್ಟುಕೊಂಡು ಮಂತ್ರ ಮುಗ್ಧರನ್ನಾಗಿಸಿದರೂ ನಿವೃತ್ತಿಯನ್ನು ಹೊಂದಲೇಬೇಕು. ಸಚಿನ್ ನಿವೃತ್ತಿ ಅತಿಶಯೋಕ್ತಿ ಏನಲ್ಲ ಎಂಬುದು ಸಾರ್ವತ್ರಿಕ ಸತ್ಯ.
- ಕೆ.ಎಂ.ಆನಂದರಾಮ, ಬೆಂಗಳೂರು
ಕೋಟಿಗೊಬ್ಬ
'ಕೋಟಿ ಕೊಟ್ಟರೂ ಮದ್ಯಪಾನ ಜಾಹೀರಾತಿನಲ್ಲಿ ನಟಿಸುವುದಿಲ್ಲ' ಎಂದು ಹೇಳಿದ ಸಚಿನ್ ನಮ್ಮೆಲ್ಲರಿಗೂ ಮಾದರಿ ವ್ಯಕ್ತಿಯೆಂದರೆ ತಪ್ಪಾಗದು. ಸಚಿನ್ಗೆ ಅಭಿಮಾನಿಗಳು ಅಸಂಖ್ಯಾಂತ. ಅವರಿಗೂ ಸಹ ಅಭಿಮಾನಿಗಳ ಮೇಲೆ ಅಷ್ಟೇ ಅಭಿಮಾನ, ಕಾಳಜಿ. ಇದು ಮೇಲಿನ ಅವರ ಮಾತುಗಳೇ ಸೂಚಿಸುತ್ತದೆ. ಭೂಮಿ ತೂಕದ ಮನುಷ್ಯ, ಮಗುವಿನಂತಹ ಮುಗ್ಧತೆ ಅವರಲ್ಲಿದೆ. ಗೆದ್ದೆನೆಂದು ಹಿಗ್ಗದೇ, ಸೋತೆನೆಂದು ಕುಗ್ಗದೇ ಸಮಾನ ಮನಸ್ಥಿತಿ ಕಾಯ್ದುಕೊಂಡಿದ್ದಾರೆ. ಈ ಸರಳ ವ್ಯಕ್ತಿಯ ಅದ್ಭುತ ಸಾಧನೆಗೆ 'ಭಾರತರತ್ನ' ದ ಮೆರುಗು ಒಪ್ಪುವಂತದ್ದೇ ಆಗಿದೆ.
- ಧನಲಕ್ಷ್ಮಿ ತಂಬಿಸ್ವಾಮಿ, ರಾಮನಗರ
'ಜಗುಲಿ'ಯಲ್ಲಿ ಈ ಸಲದ ವಿಷಯ 'ಖಾಸಗಿ ಬಸ್ ಪ್ರಯಾಣ ಸುರಕ್ಷಿತವೇ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com