ಉಣ್ಣೆ ದೊರೆಯುವುದು ಹೇಗೆ?
ಚಳಿಗಾಲದಲ್ಲಿ ಬೆಚ್ಚನೆ ಬಟ್ಟೆಗಳನ್ನು ಧರಿಸುತ್ತೇವೆ. ಇವು ಉಣ್ಣೆ ಬಟ್ಟೆಗಳು. ಉಣ್ಣೆಯನ್ನು ಕುರಿಯಿಂದ ಪಡೆಯುತ್ತೇವೆ. ನಮಗೆ ತಲೆಯಲ್ಲಿ ಕೂದಲು ಬೆಳೆಯುವ ಹಾಗೆ ಕುರಿಯ ಮೈಮೇಲೆ ತುಪ್ಪಳ(ಕೂದಲು) ಬೆಳೆಯುತ್ತದೆ. ಈ ಕೂದಲನ್ನು ವರ್ಷಕ್ಕೊಂದು ಬಾರಿ ಕತ್ತರಿಸಲಾಗುತ್ತದೆ. ಬೇಸಿಗೆ ಪ್ರಾರಂಭವಾಗುವ ಸಮಯದಲ್ಲಿ ಕುರಿಗೆ ಈ ತುಪ್ಪಳದ ಅವಶ್ಯಕತೆ ಇರುವುದಿಲ್ಲ. ಅಂತಹ ಸಮಯದಲ್ಲೇ ತುಪ್ಪಳ ತೆಗೆಯಬೇಕು. ತೆಗೆದ ತುಪ್ಪಳವನ್ನು ದಾರಗಳಾಗಿ ಹೊಸೆದು ನೂಲು ತೆಗೆಯಲಾಗುತ್ತದೆ. ಉಣ್ಣೆಯ ಈ ನೂಲನ್ನು ನೇಯ್ದು ಅಥವಾ ಹೆಣೆದು ಬಟ್ಟೆ ತಯಾರಿಸಲಾಗುತ್ತದೆ. ಇದರಿಂದ ಶಾಲು, ಸ್ವೆಟರ್, ಕಂಬಳಿ ತಯಾರಿಸಲಾಗುತ್ತದೆ. ಸ್ಪೇನ್ ಮತ್ತು ಆಫ್ರಿಕಾದಲ್ಲಿ ಮೆರಿನೊ ಜಾತಿಯ ಕುರಿಗಳಿವೆ. ಇವು ತುಂಬ ಹೆಚ್ಚು ತುಪ್ಪಳ ಹೊಂದಿರುತ್ತವೆ. ಅಲ್ಲದೇ ಇದು ತುಂಬಾ ಶಾಖದಿಂದ ಕೂಡಿರುತ್ತದೆ.
- ಹರಳಹಳ್ಳಿ ಪುಟ್ಟರಾಜು