ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ದ್ವಂದ್ವವನ್ನು ಹೊರಗಟ್ಟಿ

Mainashree
Updated On : 1 Oct 2013, 1:49 am

ಬಹಳಷ್ಟು ಬಾರಿ ದ್ವಂದ್ವಗಳಲ್ಲಿ ಬಿದ್ದು ತೊಳಲಾಡುತ್ತಿರುತ್ತೇವೆ. ಏನು ಮಾಡಿದರೂ ಮನಸ್ಸನ್ನು ಬ್ಯಾಲೆನ್ಸ್ ಮಾಡಲು ಆಗುವುದೇ ಇಲ್ಲ. ಹೇಗೆ ನೋಡಿದರೂ ಸಮಸ್ಥಿತಿಗೆ ಬರುವ ದಾರಿಯೇ ಕಾಣುತ್ತಿರುವುದಿಲ್ಲ. ವಿಷಯವೇ ಹಾಗಿರುತ್ತದೆ. ಅತ್ತಲೂ ಇಲ್ಲ, ಇತ್ತಲೂ ಇಲ್ಲ ಎಂಬಂಥ ಸ್ಥಿತಿ. ಸತ್ಯವನ್ನು ಒಪ್ಪಿಕೊಂಡು ಅದನ್ನೇ ಪ್ರತಿಪಾದಿಸುವ, ಬಹಿರಂಗಗೊಳಿಸುವ ಧೈರ್ಯ ಇರುವುದಿಲ್ಲ. ಹಾಗೆಂದು ಅಸತ್ಯವನ್ನು ಒಪ್ಪಿಕೊಂಡು ಸುಮ್ಮನಿದ್ದುಬಿಡಲೂ ಆಗುವುದಿಲ್ಲ. ಸಂಕಟ ಕಾಡುವುದೇ ಆಗ. ವಾಸ್ತವ ಅದಲ್ಲ ಎಂಬುದು ಗೊತ್ತಿದ್ದರೂ ಹೊರ ಜಗತ್ತಿಗೆ ಅದನ್ನು ಪ್ರದರ್ಶಿಸಲಾಗುವುದಿಲ್ಲ. ಈ ಸಮಾಜ, ವ್ಯವಸ್ಥೆ ಅಂಥದ್ದೊಂದು ಚೌಕಟ್ಟನ್ನು ವ್ಯಕ್ತಿಗಳಿಗೆ ವಿಧಿಸಿರುತ್ತದೆ. ವೈಯಕ್ತಿಕ ನೆಲೆಯಲ್ಲಿ ನೋಡಿದಾಗ ಎಷ್ಟೋ ಸಂಗತಿಗಳು ನಮ್ಮ ಮಟ್ಟಿಗೆ ಸರಿಯಂತಲೇ ತೋರುತ್ತಿರುತ್ತದೆ. ಆದರೆ ಸಮುದಾಯದ ಪ್ರಶ್ನೆ ಬಂದಾಗ ಎಲ್ಲರೂ ಅಂಥ ನಿರ್ಧಾರಗಳನ್ನು ಒಪ್ಪಿಕೊಳ್ಳಲು ಸಾಧ್ಯವಿರುವುದಿಲ್ಲ.
ಇಂಥ ಸಂದರ್ಭದಲ್ಲೇ ಮನದೊಳಗೆ ತಾಕಲಾಟ ಆರಂಭವಾಗುವುದು. ಆಗೆಲ್ಲ ಆದದ್ದಾಗಲಿ ಎಂದು ಬಿಟ್ಟು ಬಿಡಬೇಕು. ಅದಿಲ್ಲದಿದ್ದರೆ ಮನಸ್ಸೇ ಸತ್ತು ಹೋಗುವ ಅಪಾಯಗಳಿರುತ್ತವೆ. ಹಾಗಾದಾಗ ಮೂಡುವ ಗಾಯದ ಕಲೆಗಳು ಜೀವನದುದ್ದಕ್ಕೂ ಉಳಿದು ಬಿಡುತ್ತವೆ. ಹಾಗಾಗದಿರಲು ಇರುವ ಒಂದೇ ಮಾರ್ಗ, ಸತ್ಯವನ್ನು ನಮ್ಮೊಳಗೆ ಮುಚ್ಚಿಟ್ಟುಕೊಂಡು, ಸಮಾಜಕ್ಕೆ ವಿಮುಖವಾಗದೇ ನಡೆಯುವುದು. ಅವು ನಮ್ಮ ಪ್ರಯತ್ನವನ್ನು ಮೀರಿದ ಸನ್ನಿವೇಶಗಳು. ಆದ್ದರಿಂದ ಖಂಡಿತಾ ಆತ್ಮವಂಚನೆ ಎನ್ನಿಸಿಕೊಳ್ಳುವುದಿಲ್ಲ. ಏಕೆಂದರೆ ನಮ್ಮೊಳಗಿನ ಪ್ರಾಮಾಣಿಕ ಭಾವನೆಗಳಿಗೆ ಘಾಸಿಯಾಗದಂತೆ ತಡೆಯಲು ಅದು ಅನಿವಾರ್ಯ. ಹೊಯ್ದಾಟಗಳನ್ನು ಮೀರಿ, ಎದೆಯೊಳಗಣ ಭಾರವನ್ನು ಹೊರಚೆಲ್ಲಿ ಹುಂಬತನದಿಂದ ಮುನ್ನುಗ್ಗಿ ಹೊರಟಾಗ ಮಾತ್ರ ಬದುಕಿನಲ್ಲಿ ಕೊನೆ ಮುಟ್ಟಲು ಸಾಧ್ಯ. ಏನೇ ಆಗಲಿ, ಈ ಜೀವನವನ್ನು ಸಂಪೂರ್ಣವಾಗಿ ಅನುಭವಿಸುವುದಕ್ಕಿಂತ ಹೆಚ್ಚಿನದು ಬೇರೇನೂ ಇಲ್ಲ. ಅದು ಸರ್ವಸಮ್ಮತ ಮಾರ್ಗವಾಗಿರಲಿ.

-  ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement