ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಬೆಳಗಾದುದು ಹೇಗೆ?

Mainashree
Updated On : 1 Oct 2013, 1:49 am

ನವವಿವಾಹಿತರ ಚೇಷ್ಟೆಗಳು ಒಂದೆರಡಲ್ಲ. ಕೆಲವೊಮ್ಮೆ ಎಲ್ಲವೂ 'ನೇರಾನೇರ'. ಇನ್ನು ಕೆಲವೊಮ್ಮೆ ಎಲ್ಲವೂ 'ಸುತ್ತುಬಳಸು'. ಮನೆಯಲ್ಲಿ ಹಿರಿಯರಿದ್ದರೆ ಸುತ್ತುಬಳಸು ಅನಿವಾರ್ಯ. ಯಾರೂ ಇಲ್ಲದಿದ್ದರೂ, ಪ್ರಣಯದ ಸುತ್ತುಬಳಸು ದಾರಿಯೇ ರೋಮಾಂಚಕ ದಾರಿ ಎಂಬುದು ಬಲ್ಲವರ ಅಂಬೋಣ. ಹೀಗೆ ಸುತ್ತುಬಳಸಿಯೇ ಬೆಳಗು ಮಾಡುವ ದಂಪತಿಯೂ ಇದ್ದಾರೆ.

ಗಾಢಾಲಿಂಗನಪೂರ್ವಮೇಕಮನಯಾ ದ್ಯೂತೇ ಜಿತಂ ಚುಂಬನಂ
ತತ್ಕಿಂಚಿತ್ ಪರಿರಭ್ಯ ದತ್ತಮಮುನಾ ಪ್ರತ್ಯರ್ಪಿತಂ ಚಾನಯಾ
ನೈತತ್ತಾದೃಗಿದಂ ನ ತಾದೃಶಮಿತಿ ಪ್ರತ್ಯರ್ಪಣಪ್ರಕ್ರಮೈಃ
ಯೂನೋಶ್ಚುಂಬನಮೇಕಮೇವ ಬಹುಧಾ ರಾತ್ರಿರ್ಗತಾ ತನ್ವಯೋಃ


ಬಿಗಿಯಾದ ಅಪ್ಪುಗೆ. ಅದಾದ ಮೇಲೆ ಸ್ವಲ್ಪ ಹಿಂದೆ ಸರಿದು ಪಗಡೆಯಾಟ. ಪಗಡೆಯಲ್ಲಿ ನಲ್ಲನಲ್ಲಿ ನಲ್ಲೆ ಸೋಲಿಸುತ್ತಾಳೆ. ಸೋತ ಪಣ ನೀಡಬೇಕಲ್ಲವೆ? ಚುಂಬನವೇ ಪಣ. ಪಣವನ್ನು ಬಿಡದೆ ವಸೂಲಿ ಮಾಡಿಕೊಳ್ಳುವಲ್ಲಿ ಹೆಂಗಳೆಯರು ಚಾಲಾಕು! ಮುಂದಿನ ಆಟದಲ್ಲಿ ನಲ್ಲೆ ಸೋಲುತ್ತಾಳೆ. ಆಗ ಪಣ ಹಿಂದಿರುಗಿಸಬೇಕಲ್ಲವೆ? ಆದರೆ ಯಾಕೋ ಬಿಗುಮಾನ. ಅದನ್ನೂ ನಲ್ಲನೇ ಕಿತ್ತುಕೊಳ್ಳಬೇಕು. ಚುಂಬಿಸುವುದರಲ್ಲಿ ಅಷ್ಟು ಒರಟುತನವೆ ಎಂದು ಆಕೆಯ ಆಕ್ಷೇಪ. ಹಾಗಾದರೆ ಸರಿಯಾಗಿ ಮುತ್ತಿಡುವುದು ಹೇಗೆ ನೀನೇ ತೋರಿಸು ಎಂಬ ಆಹ್ವಾನ ನಲ್ಲನಿಂದ. ಬಳಿಕ ಮುತ್ತಿನ ಕೃಷಿಯ ಸಂಪೂರ್ಣ ಪ್ರಾಯೋಗಿಕ ಪ್ರಾತ್ಯಕ್ಷಿಕೆ! ಇದರಲ್ಲೇ ಬೆಳಗಾಗಿ ಮೂಡಲಲ್ಲಿ ಸೂರ್ಯ ಆಗಮಿಸಿಯೇಬಿಡುತ್ತಾನೆ!
ಒಂದು ರಾತ್ರಿ ಹಾಗೇ ಸುಮ್ಮನೆ ಕಳೆದರೇನಾಯಿತು? ಅದು ಮುಂದಿನ ರಾತ್ರಿಗೆ ಪೀಠಿಕೆ ಅಷ್ಟೇ!

- ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement