ಸಣ್ಸ್ಟೋರಿ
ಹಣ
ಬಾಲಕನೊಬ್ಬ ತನ್ನ ಅಪ್ಪನಿಗೆ, ಮೂರು ತಿಂಗಳಿಂದ ಶಾಲೆಯ ಟ್ಯೂಷನ್ ಹಣ ಕಟ್ಟಿಲ್ಲ, ಇವತ್ತು ಕಟ್ಟದಿದ್ದರೆ ನಾಳೆಯಿಂದ ಶಾಲೆಯ ಬಾಗಿಲಿಗೆ ಹೋಗುವಹಾಗಿಲ್ಲ ಅಂದ. ಅದೇ ಸಮಯಕ್ಕೆ ಅವನ ತಾಯಿ ರೇಷನ್ ಅಂಗಡಿ ಪುಸ್ತಕ ತೋರಿಸಿ, ಕಳೆದ ಎರಡು ತಿಂಗಳಿಂದ ಹಣ ಕೊಟ್ಟಿಲ್ಲ, ಮುಂದಿನ ತಿಂಗಳಿಂದ ರೇಷನ್ ಕೊಡಲ್ಲ ಅಂತ ಅಂಗಡಿಯವ ಹೇಳಿದ್ದಾನೆ ಅಂದಳು. ಅವಳ ಗಂಡ ಮಗನನ್ನು ಶಾಲೆ ಬಿಡಿಸಿ, ಅಂಗಡಿ ಕೆಲಸಕ್ಕೆ ಕಳುಹಿಸಿದ.
ಪ್ರಸಾದ
ನಾನು ಹೋಗುವ ಸಮಯಕ್ಕೆ ದೇವಸ್ಥಾನದಲ್ಲಿ ಪ್ರಸಾದ ಮುಗಿದಿತ್ತು. ಬೆಳಗುತ್ತಿದ್ದ ಮಂಗಳಾರತಿ ಕಣ್ಣಿಗೆ ಸೋಕಿಸಿ ಉದ್ದ ನಮಸ್ಕಾರ ಮಾಡಿ ಮೇಲೆ ಎದ್ದಾಗ, ದೇವರ ಬಲಗಡೆಯಿಂದ ಹೂ ಜಾರಿಬಿತ್ತು. ಅದನ್ನು ಅರ್ಚಕರಿಂದ ಕೇಳಿ ಪಡೆದು, ಮಡದಿಯ ಕೈಲಿಟ್ಟೆ. ಅವಳು ತುರುಬಿಗೆ ಹೂ ಸಿಕ್ಕಿಸಿಕೊಂಡಳು. ನನ್ನ ಕೈ ಮತ್ತೆ ಬರಿದಾಗಿತ್ತು.
ಕೂಲಿ
ಪೇಟೆಯಲ್ಲಿ ಕೂಲಿ ಮಾಡುವವ ಹರಿದು ತೇಪೆ ಹಾಕಿದ ಬಟ್ಟೆ ಹಾಕಿಕೊಂಡಿದ್ದ. ಒಮ್ಮೆ ಬಟ್ಟೆ ಅಂಗಡಿ ಗೋಡೌನ್ನಿಂದ ಸರಕು ಹೊತ್ತು ತರುವಾಗ ಸಣ್ಣ ಟವೆಲೊಂದು ನೆಲಕ್ಕೆ ಬಿದ್ದು ಕೊಳೆಯಾಯ್ತು. ಅಂಗಡಿಯ ಒಡೆಯ ಅದನ್ನು ಅವನಿಗೇ ಕೊಟ್ಟ. ಮೈಮೇಲೆ ಹೊಸ ಬಟ್ಟೆ ಇದ್ದರೆ ನನ್ನನ್ನು ಕೂಲಿಗೆ ಕರೆಯುವುದಿಲ್ಲ ಎಂದು ಅದರಲ್ಲೇ ಮೈ ಮುಚ್ಚಿಕೊಂಡ ಕೂಲಿ.
- ಶಿವನಾಪುರ ನರಸಿಂಹಮೂರ್ತಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.