ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಕುಸುಮ ವಿವೇಕ

Vishwanath S
Updated On : 2 Oct 2013, 2:02 am

ಮಠಗಳೆಂದರೆ ದೇವಪೂಜೆ, ಸ್ವಾಮಿಗಳ ಪಾದಪೂಜೆ ನೆನಪಾಗುತ್ತದೆ. ಆದರೆ ಇಲ್ಲೊಂದು ಮಠದಲ್ಲಿ ಪ್ರಕೃತಿಪೂಜೆ ನಡೆಯುತ್ತಿದೆ. ಅದು ಬೇರ್ಯಾವುದೂ ಅಲ್ಲ, ಮೈಸೂರಿನ ಶ್ರೀರಾಮಕೃಷ್ಣ ಆಶ್ರಮ ಶಾಖಾ ಮಠ.
ಮೈಸೂರಿನ ಮಠದಲ್ಲಿ ಕಾಪಾಡಿಕೊಂಡಿರುವ ಹಸಿರು ವಾತಾವರಣ ಎಂಥವರನ್ನೂ ಸೆಳೆಯುವ ಚುಂಬಕ ಶಕ್ತಿಹೊಂದಿದೆ. ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜಿ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಆಧ್ಯಾತ್ಮಿಕ ಕೇಂದ್ರ ಕೇವಲ ಸ್ವಾಮಿ ವಿವೇಕಾನಂದರ ವಿಚಾರಗಳನ್ನು ಬಿತ್ತುವುದರಲ್ಲಿ ತಲ್ಲೀನವಾಗದೆ, ಪುಷ್ಪಕೃಷಿಯ ಮೂಲಕ ಮನಸ್ಸಿಗೆ ನೆಮ್ಮದಿ ನೀಡುವ ಸುಂದರ ವಾತಾವರಣವನ್ನೂ ನಿರ್ಮಿಸುತ್ತಿದೆ.

ವರ್ಷಪೂರ್ತಿ ಪುಷ್ಪಸಂತೆ
ಮುಂಜಾನೆ ಹೊತ್ತಲ್ಲಿ ಸೂರ್ಯನ ಕಿರಣಗಳೊಂದಿಗೆ ಚೆಲ್ಲಾಟವಾಡುತ್ತ ಕಿರುನಗೆ ಬೀರುವ ಹೂವುಗಳು ಮನಸ್ಸಿಗೆ ಪ್ರಫುಲ್ಲತೆ ಉಂಟುಮಾಡುತ್ತದೆ. ಇಂತಹ ಪುಷ್ಪಗಿಡಗಳನ್ನು ಸ್ವಾಮಿ ವಿವೇಕಾನಂದರ ಸನ್ನಿಧಿಯಲ್ಲಿ ಬೆಳೆಸಿ ಸದಾ ಹಚ್ಚಹಸುರಾಗಿ ಕಾಪಿಟ್ಟಿರುವುದು ಈ ಆಶ್ರಮದ ವಿಶೇಷ.
ಈ ಆಶ್ರಮದಲ್ಲಿ ವರ್ಷಪೂರ್ತಿ ಪುಷ್ಪಗಳ ಸಂತೆ ನಡೆಯುತ್ತಲೇ ಇರುತ್ತದೆ. 40 ವಿವಿಧ ಜಾತಿಯ ಡಾಲಿಯಾ (ಬೆಟ್ಟದ ತಾವರೆ), ಕ್ಯಾಕ್ಟಸ್ ಡಾಲಿಯಾ, ಪಂಪಂ, ಜೀನ್ಯಾ, ಆಸ್ಪರಸ್, ಸೇವಂತಿಗೆ, ಬಾಲ್ಯಂ, ಜರ್ಬರಾ, ಜಪಾನ್ ಸನ್‌ಫ್ಲವರ್, ಸಿಲೋಶಿಯಾ,
ಆಶ್ರಮಕ್ಕೆ ಭೇಟಿ ನೀಡುವ ಭಕ್ತರನ್ನು ಮುದಗೊಳಿಸಬೇಕು ಎಂಬ ಉದ್ದೇಶದಿಂದ ಈ ರೀತಿಯ ವಾತಾವರಣ ನಿರ್ಮಿಸಲಾಗಿದೆ. ಇದರಲ್ಲಿ ಆಶ್ರಮದ ಮಾಲಿ ಲೋಕನಾಥ್ ಸಿಂಗ್ ಶ್ರಮ ಮೆಚ್ಚುವಂತದ್ದು. ಸ್ವಾಮಿ ವಿವೇಕಾನಂದರು ಅಧ್ಯಾತ್ಮದ ಬಗ್ಗೆ ಆಸಕ್ತಿ, ಪ್ರಕೃತಿ ಬಗೆಗೆ ಕಾಳಜಿ ಇಟ್ಟುಕೊಂಡಿದ್ದರು.
ಕಾಕ್‌ಸ್ಕೂಮ್, ವರ್ಜೀನಿಯಾ, ಯೂನಿಂಗ್ ಗ್ಲೌರಿ (ಸಂಜೆ ಸಮಯ ಅರಳುವ ಒಂದು ಜಾತಿಯ ಹೂವು) ಸೊಗಸಾಗಿ ಬೆಳದಿವೆ. ದಾಸವಾಳದ 35 ಜಾತಿಯಿವೆ. ಫ್ಲೋರಿಬಂಡಾ, ರುಡ್‌ಬೇಕಿಯಾ (ಸರಿಸುಮಾರು 40 ದಿನ ಬಾಡದೆ ಇರುವ ಹೂ), ಆಂಟಿಯಂ (ಸ್ನ್ಯಾಪ್ ಡ್ರ್ಯಾಗನ್), ಚೆಂಡು ಹೂವು ಇತ್ಯಾದಿ.   
ಸುಮಾರು 15 ವರ್ಷಗಳಿಂದ ಆಶ್ರಮದ ನರ್ಸರಿಯನ್ನು ಕೆ. ಲೋಕನಾಥ್ ಸಿಂಗ್ ನಿರ್ವಹಿಸುತ್ತಿದ್ದಾರೆ. ಸ್ವಾಮಿ ವಿವೇಕಾನಂದರ ದೇವಸ್ಥಾನದಲ್ಲಿ ಪ್ರತಿದಿನ ಪೂಜೆಗೆ ಹೂವನ್ನು ತೋಟದಿಂದ ಪೂರೈಸುತ್ತಾರೆ. ಇಲ್ಲಿಯವರೆಗೂ ಹೂವಿಗೆ ಬರವಿಲ್ಲ. ಅಷ್ಟರ ಮಟ್ಟಿಗೆ ಸಾವಿರಾರು ಹೂವಿನ ಗಿಡಗಳು ಬೆಳೆದು ಮೈದಳೆದು ನಿಂತಿವೆ. ದಿನನಿತ್ಯ ಎರೆಹುಳು ಗೊಬ್ಬರ ಹಾಕಿ, ನೀರು ಎರೆದು ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಇವರ ಕಾರ್ಯ ವೈಖರಿಯನ್ನು ಸ್ವಾಮಿ ಮುಕ್ತಿದಾನಂದಜಿ ಮುಕ್ತಕಂಠದಿಂದ ಶ್ಲಾಘಿಸುತ್ತಾರೆ.

ಮೈಸೂರಿನ ಆಶ್ರಮದ ಬಗ್ಗೆ
ಮೈಸೂರು ನಗರಕ್ಕೆ ಸ್ವಾಮಿ ವಿವೇಕಾನಂದರು 1892ರಲ್ಲಿ ಭೇಟಿ ಕೊಟ್ಟಿದ್ದರು. ಆಗ ಅವರು ಅಂದಿನ ಮೈಸೂರಿನ ಮಹಾರಾಜರ ಅತಿಥಿಯಾಗಿದ್ದರು. ಮೈಸೂರಿನ ಶ್ರೀರಾಮಕೃಷ್ಣ ಆಶ್ರಮವು 1925ರಲ್ಲಿ ಸ್ಥಾಪಿತವಾಯಿತು. ಜಗದ್ವಿಖ್ಯಾತ ರಾಮಕೃಷ್ಣ ಮಠ ಮತ್ತು ಮಿಷನ್ನಿನ ಶಾಖೆಯಾದ ಈ ಆಶ್ರಮವು ಜೀವಿಗಳಲ್ಲಿ ಭಗವತ್ಸೇವೆಯ ಆದರ್ಶದ ಪ್ರಕಾರ ಸೇವೆಯಲ್ಲಿ ನಿರತವಾಗಿದೆ. ದೈನಂದಿನ ಪೂಜೆ, ಪ್ರಾರ್ಥನೆ ಮತ್ತು ವಾರದಲ್ಲಿ ಮೂರು ದಿನ ಪ್ರವಚನ, ಆಧ್ಯಾತ್ಮಿಕ ಶಿಬಿರಗಳನ್ನು ನಡೆಸುತ್ತದೆ.
-ಸ್ವಾಮಿ ಮುಕ್ತಿದಾನಂದಜಿ,
ಅಧ್ಯಕ್ಷರು, ಶ್ರೀರಾಮಕೃಷ್ಣ ಆಶ್ರಮ

- ಜೆ. ಮಹದೇವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments