ಲಾವಂಚ
ಸುಗಂಧಿತ ತೈಲ ಸಸ್ಯಗಳಲ್ಲಿ ಲಾವಂಚ ಒಂದು ಪ್ರಮುಖ ಬೆಳೆ. ಇದರಲ್ಲಿ ಸುಗಂಧ ತೈಲವು ಬೇರಿನ ಭಾಗದಲ್ಲಿರುತ್ತದೆ. ಪೊದೆಯಂತೆ ಒತ್ತಾಗಿ ಬೆಳೆಯುವ ಈ ಬಹುವಾರ್ಷಿಕ ಬೆಳೆಗೆ 'ವೆಟಿವರ್ ಹುಲ್ಲು' ಎಂದು ಕರೆಯುತ್ತಾರೆ.
- ಇದರ ಬೇರುಗಳನ್ನು ಕುದಿಯುವ ನೀರಿನಲ್ಲಿ ಹಾಕಿ, ಭಟ್ಟಿ ಇಳಿಸಿ ತೈಲ ತೆಗೆಯುತ್ತಾರೆ. ಭಾರತದಲ್ಲಿ ಈ ಹುಲ್ಲಿಗೆ ಖಸ್ ಎಂದೂ ಕರೆಯುತ್ತಾರೆ. ಅಂದರೆ ಸುವಾಸಿತ ಬೇರು ಎಂದರ್ಥ. ನೀರಿನಲ್ಲಿ ನೆನೆಸಿ ತೆಗೆದ ಬೇರು ಸುವಾಸಿತತಂಪು ಹವೆ ನೀಡುತ್ತದೆ.
- ಹಿಂದಿನವರು ರೇಷ್ಮೆ ಸೀರೆ, ಮುಗುಟಗಳು ಹಾಳಾಗದಂತೆ, ಜಿರಳೆ-ತಿಗಣೆಗಳು ಕಪಾಟಿನ ಒಳಹೋಗದಂತೆ ಕಪಾಟು, ಟ್ರಂಕುಗಳಲ್ಲಿ ಲಾವಂಚದ ಬೇರುಗಳನ್ನು ಹಿಡಿಕಟ್ಟಿ ಹಾಕಿಡುತ್ತಿದ್ದರು.
- ಲಾವಂಚವು ಔಷಧೀಯ ಗುಣಗಳ ಆಗರವೂ ಹೌದು. ಇದರ ತೈಲದ ಲೇಪನ ಮೈಕೈ ನೋವು ಶಮನಗೊಳಿಸುತ್ತದೆ. ಬೇರನ್ನು ನೀರಿನಲ್ಲಿ ಕುದಿಸಿ, ಸೋಸಿ ಕುಡಿದರೆ ವಾತ, ಹೊಟ್ಟೆಶೂಲೆ, ಜಂತು ಹುಳುಗಳಿಂದ ಮುಕ್ತಿ.
- ಸಾಮಾನ್ಯವಾಗಿ ಕೆರೆ, ನದಿ ತೀರಗಳಲ್ಲಿ, ಹಣ್ಣ-ಕೊಳ್ಳಗಳ ಬುಡದಲ್ಲಿ ಸಹಜವಾಗಿ ಬೆಳೆವ ಲಾವಂಚದ ಬೇರುಗಳು 2ರಿಂದ 3 ಮೀಟರ್ಗಳಷ್ಟು ಆಳಕ್ಕೆ ಇಳಿಯುವುದರಿಂದ ಮಣ್ಣಿನ ಸವಕಳಿ ತಡೆಯುತ್ತವೆ.
- ಲಾವಂಚ ನೆಟ್ಟ 3 - 4 ತಿಂಗಳಲ್ಲೇ ಬೃಹತ್ ಪೊದೆಯಾಗಿ ಬೆಳೆಯುತ್ತದೆ. ರೈತ ಸಮುದಾಯ ತಮ್ಮ ನೆಲದ ಸಂರಕ್ಷಣೆಗೆ, ಅಂತರ್ಜಲ ಮರುಪೂರಣಕ್ಕೆ ಲಾವಂಚವನ್ನು ಬಳಸುತ್ತಾರೆ. ಕಲುಷಿತ ನೀರನ್ನು ಶುದ್ಧಗೊಳಿಸುವ ಗುಣ ಇದಕ್ಕಿದೆ.
- ಲಾವಂಚ ಬಹುವಾರ್ಷಿಕ ಬೆಳೆ. ಸಾಮಾನ್ಯವಾಗಿ ಎಲ್ಲ ವಿಧದ ಮಣ್ಣಿನಲ್ಲೂ ಬೆಳೆಯಬಹುದು. ಸುಮಾರು 2ರಿಂದ 3 ಅಡಿಗಳಷ್ಟು ಎತ್ತರವಾಗಿ ಬೆಳೆಯುವ ಈ ಹುಲ್ಲು ನಾಟಿ ಮಾಡಿದ 10 ತಿಂಗಳಿಗೆ ಕೊಯ್ಲಿಗೆ ಬರುತ್ತದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.