ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಶ್ರೀಮಂತಿಕೆ ಹೃದಯದಲ್ಲಿರಲಿ!

Vishwanath S
Updated On : 4 Oct 2013, 6:33 am

ಸ್ವಾಮಿ ವಿವೇಕಾನಂದರು ಖೇತ್ರಿ ರಾಜ್ಯದ ಗ್ರಾಮಾಂತರ ಪ್ರದೇಶದಲ್ಲಿ ಉಳಿದಿದ್ದಾಗ ಹಳ್ಳಿಯ ಬಡಜನರ ಹೃದಯಶ್ರೀಮಂತಿಕೆಯನ್ನು ತೋರಿಸುವ ಘಟನೆಯೊಂದು ನಡೆಯಿತು.
ಸುತ್ತಮುತ್ತಲ ಹಳ್ಳಿಯ ಜನರು ಸ್ವಾಮೀಜಿಯವರನ್ನು ಕಾಣಲು ಬರಲಾರಂಭಿಸಿದರು. ಸಂಸಾರ, ಶಾಸ್ತ್ರ, ಆಚರಣೆ, ಅಧ್ಯಾತ್ಮ ಮುಂತಾದ ವಿಷಯಗಳ ಕುರಿತಾಗಿ ಕೇಳುತ್ತಿದ್ದರು. ಮೂರು ಹಗಲು-ಮೂರು ರಾತ್ರಿ ನಿರಂತರವಾಗಿ ಸ್ವಾಮೀಜಿ ಸ್ವಲ್ಪವೂ ಬೇಸರಿಸದೆ ಮಾತನಾಡುತ್ತಲೇ ಇದ್ದರು. ಅವರಿಗೆ ಊಟ, ನಿದ್ರೆಯ ಪರಿವೆಯೇ ಇರಲಿಲ್ಲ. ಮೂರನೆಯ ದಿನ ರಾತ್ರಿ ಜನರೆಲ್ಲ ಹೊರಟುಹೋದ ಮೇಲೆ, ಕಡುಬಡವನೂ, ಅಂತ್ಯಜನೂ ಆದ ಮನುಷ್ಯನೊಬ್ಬ, 'ಸ್ವಾಮೀಜಿ, ನಾನು ಮೂರು ದಿನಗಳಿಂದಲೂ ಗಮನಿಸುತ್ತಲೇ ಇದ್ದೇನೆ. ನೀವು ಏನೂ ಆಹಾರವನ್ನೇ ತೆಗೆದುಕೊಂಡಂತೆ ಕಾಣಲಿಲ್ಲ. ಇಲ್ಲಿಗೆ ಬಂದವರೆಲ್ಲ ಮಾತಾಡಿ ಹೊರಟುಬಿಟ್ಟರು. ನೀವು ಮಾತ್ರ ಉಪವಾಸವಿದ್ದೀರಿ. ನಿಮ್ಮನ್ನು ನೋಡಿನನಗೆ ತುಂಬಾ ಸಂಕಟವಾಗುತ್ತಿದೆ' ಎಂದ.
ಈತನ ಕಾಳಜಿಯನ್ನು ಕಂಡು ಸ್ವಾಮೀಜಿಯ ಹೃದಯ ತುಂಬಿಬಂದಿತು. 'ಹೌದು, ನಾನು ತುಂಬ ಹಸಿದಿದ್ದೇನೆ. ನೀನು ನನಗೇನಾದರೂ ತಿನ್ನಲು ತಂದುಕೊಡಲು ಸಾಧ್ಯವೇ?' ಎಂದು ಕೇಳಿದರು. ಆತ ಅಂಜುತ್ತಲೇ, 'ನಿಮಗೆ ತಿನ್ನಲು ಕೊಡಬೇಕೆಂಬ ಆಸೆ ನನಗೇನೋ ಇದೆ, ಆದರೆ ನಾನೊಬ್ಬ ಚಮ್ಮಾರ. ನನ್ನಂಥವರು ಮುಟ್ಟಿದ್ದನ್ನು ನೀವು ಹೇಗೆ ತಿನ್ನಲಾದೀತು?' ಎಂದ. ಆಗ ಸ್ವಾಮೀಜಿ. 'ನೋಡು, ನಾನೊಬ್ಬ ಸನ್ಯಾಸಿ. ಮಡಿಮೈಲಿಗೆಗಳನ್ನು ಮೀರಿ ನಿಂತವನು. ನೀನೇ ಏನಾದರೂ ತಿನ್ನಲು ತಂದುಕೊಡು. ಸಂತೋಷದಿಂದ ತೆಗೆದುಕೊಳ್ಳುತ್ತೇನೆ' ಎಂದರು.

- ಆನಂದ ಎಸ್.ಎನ್.
anandsn193@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement