ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಇವರು ನಿಜವಾದ ಹೃದಯ ಶ್ರೀಮಂತರು!

Vishwanath S
Updated On : 7 Oct 2013, 1:20 am

ಸ್ವಾಮಿ ವಿವೇಕಾನಂದರು ಮೂರು ಹಗಲು-ಮೂರು ರಾತ್ರಿ ನಿರಂತರವಾಗಿ ಸ್ವಲ್ಪವೂ ಬೇಸರಿಸದೆ ಜನರೊಂದಿಗೆ ಮಾತನಾಡುತ್ತಲೇ ಇದ್ದರು. ಅವರಿಗೆ ಊಟ, ನಿದ್ರೆಯ ಪರಿವೆಯೇ ಇರಲಿಲ್ಲ. ಮೂರನೆಯ ದಿನ ವಿಪರೀತ ಹಸಿವು ಕಾಡಲಾರಂಭಿಸಿತು. ಏನಾದರೂ ತಿನ್ನಲು ತಂದುಕೊಡೆಂದು ಚಮ್ಮಾರನಲ್ಲಿ ಕೇಳಿ ಕೊಂಡಾಗ ಆತ ನಿಗೆ ವಿಪರೀತ ದಿಗಿಲಾಯಿತು. 'ಸ್ವಾಮೀಜಿ, ಅದು ಖಂಡಿತ ಸಾಧ್ಯವಿಲ್ಲ. ನಾನೇನೋ ನಿಮಗೆ ತಿನ್ನಲು ತಂದುಕೊಡಬಲ್ಲೆ. ಆದರೆ ನಾಳೆ ಈ ವಿಷಯ ಮಹಾರಾಜರಿಗೆ ತಿಳಿದರೆ ನನಗೆ ಗ್ರಹಚಾರ ವಕ್ಕರಿಸುತ್ತದೆ!' ಎಂದ.
ಸ್ವಾಮೀಜಿ 'ನೀನೇನೂ ಹೆದರಬೇಡ. ನಿನಗೇನೂ ತೊಂದರೆಯಾಗದಂತೆ ನಾನು ನೋಡಿಕೊಳ್ಳುತ್ತೇನೆ. ಏನಾದರೂ ತರುತ್ತೀಯೋ ಇಲ್ಲವೋ ಹೇಳು. ನಾನಂತೂ ತುಂಬ ಹಸಿದಿದ್ದೇನೆ' ಎಂದು ಪ್ರೀತಿಪೂರ್ವಕವಾಗಿ ಒತ್ತಾಯಪಡಿಸಿದರು. ಚಮ್ಮಾರನಿಗೆ ಸ್ವಾಮೀಜಿಗಳ ಮೇಲೆ ಮರುಕ ವುಂಟಾಗಿ ಚಪಾತಿಗಳನ್ನು ಮಾಡಿ ತಂದುಕೊಟ್ಟ. ಅವುಗಳನ್ನು ತಿನ್ನುತ್ತಾ ಸ್ವಾಮೀಜಿಯ ಹೃದಯ ಕರಗಿ ಕೃತಜ್ಞತೆಯಿಂದ ಕಣ್ಣೀರು ಹರಿಸಿದರು. ಭಾರತದಲ್ಲಿ ಇಂತಹ ಲಕ್ಷಾಂತರ ವಿಶಾಲ ಹೃದಯಿಗಳು ಬಡಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದಾರೆ. ಆದರೆ ನಾವು ಅವರನ್ನು ಅಸ್ಪೃಶ್ಯರೆಂದು ಕರೆದು ಅನಿಷ್ಟಗಳಂತೆ ದೂರವಿಟ್ಟಿದ್ದೇವೆ ಎಂದು ಸ್ವಾಮೀಜಿ ಮರುಗಿದರು.
ಹೌದು, ಇಂದು ಹೃದಯಶ್ರೀಮಂತರು ಬಡಗುಡಿಸಲುಗಳಲ್ಲಿ ನೆಲೆಸಿದ್ದರೆ, ಶ್ರೀಮಂತರು ಹೃದಯಾಲಯಗಳಲ್ಲಿ ದಾಖಲಾಗಿದ್ದಾರೆ: ಎಂತಹ ವಿಪರ್ಯಾಸವಲ್ಲವೆ?

- ಆನಂದ ಎಸ್.ಎನ್.
anandsn193@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement