ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ದಂಡಕ್ಕೆ ಬ್ಲಾಕ್‌ಬೆರ್ರಿ

Vishwanath S
Updated On : 7 Oct 2013, 11:38 am

ವಾಹನ ಚಾಲನೆ ಮಾಡುವವರು ತಪ್ಪು ಮಾಡುವುದು ಸಹಜ. ಅಂದರೆ, ಸಿಗ್ನಲ್ ಜಂಪ್ ಮಾಡುವುದು, ಏಕಮುಖ ಸಂಚಾರ ಇರುವ ರಸ್ತೆಯಲ್ಲಿ ವಾಹನ ಚಾಲನೆ ಮಾಡುವುದು, ಸಿಗ್ನಲ್ ಜಂಪ್ ಮಾಡುವುದು, ಹೆಲ್ಮೆಟ್, ದ್ವಿಚಕ್ರ ವಾಹನದಲ್ಲಿ ಮೂವರು ಸಂಚರಿಸುವುದು, ಸೀಟ್ ಬೆಲ್ಟ್ ಧರಿಸದಿರುವುದು ಸೇರಿದಂತೆ ಸಾಕಷ್ಟು ನಿಯಮಗಳನ್ನು ಉಲ್ಲಂಘಿಸುತ್ತಾರೆ. ಆ ರೀತಿ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವುದು, ಹಾಗೂ ದಂಡ ವಿಧಿಸುವುದು ಸಂಚಾರ ಪೊಲೀಸರ ಕರ್ತವ್ಯ.
ಪೊಲೀಸರು ದಂಡ ಹಾಕಲು ಈ ಹಿಂದೆ ಇಲಾಖೆಯಿಂದ ನೀಡಿದ ರಸೀತಿಯನ್ನು ಬಳಸುತ್ತಿದ್ದರು. ರಸೀತಿಯನ್ನು ಆರೋಪಿಗೆ ನೀಡಿ ನಂತರ ದಂಡ ಪಾವತಿಸಿಕೊಳ್ಳುತ್ತಿದ್ದರು.
ನ್ಯಾಯಾಲಯದಲ್ಲಿ ದಂಡ ಸಲ್ಲಿಸುವ ಪ್ರಕರಣಗಳಲ್ಲಿ ವಾಹನ ಮಾಲೀಕನಿಗೆ ರಸೀತಿ ನೀಡಿ ಕಳುಹಿಸುತ್ತಿದ್ದರು. ಆದರೆ ಆ ರೀತಿ ರಸೀತಿ ನೀಡಿ ದಂಡ ಹಾಕುವುದು ಈಗ ಹಳೆಯ ಪದ್ಧತಿ.
ಪೊಲೀಸ್ ಇಲಾಖೆ ಈಗ ಮುಂದುವರೆದಿದ್ದು, ಅವರು ಬ್ಲಾಕ್ ಬೆರ್ರಿ ಬಳಸಿ ದಂಡಹಾಕುತ್ತಾರೆ. ಈ ಬ್ಲಾಕ್‌ಬೆರ್ರಿ ಪದ್ಧತಿಯಿಂದ ಪೊಲೀಸರ ಕರ್ತವ್ಯದಲ್ಲಿ ಪಾರದರ್ಶಕತೆ ಕಾಪಾಡುವುದು ಪ್ರಮುಖ ಉದ್ದೇಶ.
ನಿಯಮ ಉಲ್ಲಂಘನೆ ಮಾಡಿಲ್ಲದಿದ್ದರೂ ಪೊಲೀಸರು ಸುಮ್ಮನೆ ದಂಡ ಹಾಕಿ ರಸೀತಿ ನೀಡುತ್ತಾರೆ. ಇಲ್ಲವೇ ಹಣ ಕೇಳುತ್ತಾರೆ ಎಂಬ ಆರೋಪಗಳು ಕೇಳಿಬರುತ್ತಿದ್ದವು. ಹಾಗಾಗಿ ಸಂಚಾರ ಪೊಲೀಸರಿಗೆ ಈ ಬ್ಲಾಕ್‌ಬೆರ್ರಿ ನೀಡಲಾಯಿತು.
ಇದು ಮೊಬೈಲ್ ರೀತಿಯ ಒಂದು ಸಾಧನ. ಈ ಬ್ಲಾಕ್ ಬೆರ್ರಿಯನ್ನು ಸಂಚಾರ ಪೊಲೀಸರು ಮಾತ್ರ ಬಳಸುತ್ತಾರೆ.

-  ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement