ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

'ದಿನಕ್ಕೊಂದು ನಾಟಕ'

Vishwanath S
Updated On : 7 Oct 2013, 11:37 am

ನಾಟಕಾಸಕ್ತರಿಗೆ, ನಾಟಕ ಪ್ರಿಯರಿಗೆ ರಂಗಶಂಕರ 'ದಿನಕ್ಕೊಂದು ನಾಟಕ' ಉತ್ಸವವನ್ನು ಹಮ್ಮಿಕೊಂಡಿದೆ. ಅಕ್ಟೋಬರ್ 1ರಿಂದ 31ರವರೆಗೂ ಪ್ರತಿದಿನ ಒಂದು ನಾಟಕ ಪ್ರದರ್ಶನಗೊಳ್ಳಲಿದೆ.
ದಿನಾಂಕ 11-10-13, ಶುಕ್ರವಾರದಂದು ಡಾ. ಯು.ಆರ್ ಅನಂತಮೂರ್ತಿಯವರ ಕೃತಿ 'ಬರ' ಪ್ರದರ್ಶನಗೊಳ್ಳಲಿದೆ. 90 ನಿಮಿಷಗಳ ಈ ಕನ್ನಡ ನಾಟಕವನ್ನು ನಿರ್ದೇಶಿಸಿದವರು ಕೆ.ಆರ್. ಗಣೇಶ್ ಮತ್ತು ಶಶಿಧರ ಭಾರಿಗಾಟ್. ಬೆಂಗಳೂರಿನ ಸಂಚಯ ತಂಡ ಪ್ರದರ್ಶಿಸಲಿದೆ. ಅಕ್ಟೋಬರ್ 10, 11ರಂದು ಪ್ರದರ್ಶನಗೊಳ್ಳುವ ಎರಡೂ ನಾಟಕಗಳನ್ನು ಸಂಚಯ ತಂಡ ಪ್ರದರ್ಶಿಸಲಿದೆ. ಸಂಚಯ ತಂಡ ಕಳೆದ 25 ವರ್ಷಗಳಿಂದ ನಾಟಕ ಪ್ರದರ್ಶಿಸುತ್ತಿದ್ದು, ಈ ವರ್ಷ ತಂಡ ಬೆಳ್ಳಹಬ್ಬ ಆಚರಿಸಿಕೊಳ್ಳುತ್ತಿದೆ.
ದಿನಾಂಕ 12-10-13ರಂದು ಪ್ರದರ್ಶನಗೊಳ್ಳಲಿರುವ ಕನ್ನಡ ನಾಟಕ 'ವ್ಯಾನಿಟಿ ಬ್ಯಾಗ್‌'. ಲೇಖಕಿ ವೈದೇಹಿ ಯವರ ಈ ಕೃತಿಯನ್ನು ಮಂಗಲಾ ಎನ್. ಅವರ ನಿರ್ದೇಶನ. 75 ನಿಮಿಷಗಳ ಈ ನಾಟಕವನ್ನು 'ಸಂಚಾರಿ ಥಿಯೇಟರ್ ಕಲ್ಚರಲ್ ಚಾರಿಟೇಬಲ್ ಟ್ರಸ್ಟ್‌' ಬೆಂಗಳೂರು, ತಂಡ ಪ್ರದರ್ಶಿಸಲಿದೆ. ಪ್ರತಿ ದಿನ ಪ್ರದರ್ಶನದ ಸಮಯ ಮಧ್ಯಾಹ್ನ 3.30ರಿಂದ 7.30ವರೆಗೆ. ಹೆಚ್ಚಿನ ವಿವರಗಳಿಗೆ 080-26494655/56 ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement