ಸಾಕ್ಷಿ
ಲಾಯರ್: ನೋಡಪ್ಪಾ, ನಿನಗೆ 'ಮೃತ ನಾರಾಯಣಪ್ಪ'ನವರು
ಎಷ್ಟು ವರ್ಷಗಳಿಂದ ಪರಿಚಯ?
ನಾಗ: ನನಗೆ ಬುದ್ಧಿ ಬಂದಾಗಿನಿಂದಲೂ ಪರಿಚಯ ಸಾರ್!
ಲಾಯರ್: ಹಾಗಾದ್ರೆ... ನಿನಗೆ ಬುದ್ಧಿ ಬಂದದ್ದು ಯಾವಾಗ?
ನಾಗ: ಅವರ ಪರಿಚಯ ಆದಾಗಿನಿಂದ ಸಾರ್...!
===
ಆರೋಪಿ: ಸ್ವಾಮೀ... ನನ್ನನ್ನು ಬಿಟ್ಟುಬಿಡಿ. ನಾನು ಯಾವ ತಪ್ಪೂ ಮಾಡಿಲ್ಲ. ಅಂಗಡಿಯಿಂದ ಸಾಮಾನು ತರ್ತಿದ್ದೆ. ಈ ಪೊಲೀಸರು ನನ್ನನ್ನು ಅರೆಸ್ಟ್ ಮಾಡಿ ಕೇಸ್ ಹಾಕಿದ್ದಾರೆ. ನಾನು ನಿರಪರಾಧಿ. ನನ್ನನ್ನು ಬಿಟ್ಟುಬಿಡಿ... ಪ್ಲೀಸ್!
ಜಡ್ಜ್: ನೋಡಪ್ಪಾ.. ನೀನು ಅಂಗಡಿಯಿಂದ ಸಾಮಾನು ತಂದಿದ್ದು ತಪ್ಪಲ್ಲ. ಆದರೆ ಅಂಗಡಿಯವನು ಬಾಗಿಲು ತೆಗೆಯೋತನಕ ನೀನು ಕಾಯಬೇಕಿತ್ತು. ಅಲ್ವಾ?
- ಪಿ.ಜೆ. ರಾಘವೇಂದ್ರ, ಮೈಸೂರು
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.