ಮನದಲ್ಲಿ ಯಾರು?
ಪ್ರಣಯವೆಂದರೆ ತುಸುಮಟ್ಟಿಗೆ ವಂಚನೆಯೂ ಹೌದು. ಮೊದಮೊದಲು ಈ ನಲ್ಲೆ/ನಲ್ಲನಂಥ ಚೆಲುವಿನವರು, ಸದ್ಗುಣವಂತರು ಈ ಲೋಕದಲ್ಲೇ ಬೇರ್ಯಾರೂ ಇರಲಿಕ್ಕಿಲ್ಲ ಎಂದು ಪರಸ್ಪರರಿಗೆ ಅನಿಸುತ್ತದೆ. ದಿನಗಳು ಕಳೆದಂತೆ, ಪರಸ್ಪರರಲ್ಲಿ ಇರುವ ನ್ಯೂನತೆಗಳು ಗೊತ್ತಾಗಲಾರಂಭಿಸುತ್ತವೆ. ನನ್ನ ಸಂಗಾತಿ ಹಾಗಿರಬೇಕಿತ್ತು, ಹೀಗಿರಬೇಕಿತ್ತು ಎಂದು ಮನಸ್ಸು ಬೇರ್ಯಾರನ್ನೋ ಹೋಲಿಸಿ ನೋಡಲಾರಂಭಿಸುತ್ತದೆ. ಈ ಸಂಕಟ ಕೃಷ್ಣ- ರಾಧೆ ಜೋಡಿಯನ್ನೂ ತಪ್ಪಿದ್ದಲ್ಲವಂತೆ.
ಆಶ್ಲೇಷಾದನು ಚುಂಬನಾದನು ನಖೋಲ್ಲೇಖನಾದನು ಸ್ವಾಂತಜ
ಪ್ರೋದ್ಬೋಧನಾದನು ಸಂಭ್ರಮಾದನು ರತಾರಂಭಾದನು ಪ್ರೀತಯೋಃ
ಅನ್ಯಾರ್ಥಂ ಗತಯೋರ್ಭ್ರವಾನ್ಮಿಲಿತಯೋಃ ಸಂಭಾಷಣೈರ್ಜಾನತೋ
ರ್ದಂಪತ್ಯೋರಿಹ ಕೋ ನ ಕೋ ನ ತಮಸಿ ವ್ರೀಡಾವಿಮಿಶ್ರೋ ರಸಃ
ಕಲಹ ಮಾಡಿ, ಮುನಿಸಿಕೊಂಡು ಪರಸ್ಪರ ದೂರವಾಗಿರುವ ರಾಧೆ ಮತ್ತು ಕೃಷ್ಣರನ್ನು ಒಂದು ಮಾಡಲು ಪಣ ತೊಟ್ಟಿರುವ ದೂತಿ, ರಾಜಿಸಂಧಾನವನ್ನು ಮಾಡುತ್ತಿದ್ದಾಳೆ. ಆಗಲೊಮ್ಮೆ ಕವಿ ಜಯದೇವ ಹೇಳುವುದು ಹೀಗೆ: ಪ್ರಣಯಕೇಳಿ ಪ್ರೀತಿಯಿಂದ ಆರಂಭವಾಗಿ, ಅಪ್ಪುಗೆಯಿಂದ ಪುಷ್ಟಗೊಂಡು, ಚುಂಬನದ ಮೂಲಕ ವರ್ಧಿಸಿ, ಉಗುರಿನ ಗೀರುಗಳಿಂದ ಉದ್ರೇಕಿತಗೊಂಡು, ರತಿಕೇಳಿಯ ಉತ್ತುಂಗದಲ್ಲಿ ಮೈಮರೆತಿದ್ದರೂ ಇವರು ಒಬ್ಬೊಬ್ಬರೂ ಬೇರ್ಯಾರನ್ನೋ ನೆನೆಯುತ್ತಿದ್ದರು! ಆ ಕತ್ತಲಲ್ಲಿ ಪರಸ್ಪರರ ಮೈಯೇ ಕಾಣಿಸದಿರುವಾಗ ಅವರ ಮನಸ್ಸು ಹೊರತೋರಲು ಸಾಧ್ಯವೆ? ಆದರೂ ಪ್ರಣಯರಸವನ್ನು ಸಾಕಷ್ಟು ಉತ್ಕಟವಾಗಿಯೇ ಸವಿದಿದ್ದರು ಎಂಬುದು ದಿಟ!
- ಹರಿಹರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.