ಮೀಸೆ ಸಂಪಿಗೆ
ಆ ಮನೆಯ ಅಂಗಳದಲ್ಲಿ ಭಿನ್ನ ಭಿನ್ನವಾದ ಹೂಗಳು ಅರಳಿದ್ದವು. ಅವುಗಳಲ್ಲಿ ಒಂದು ಬಗೆಯ ಹೂವು ತುಂಬಾ ಆಕರ್ಷಿಸಿತು. ಕಣ್ಣಲ್ಲಿ ಕಣ್ಣಿಟ್ಟು ಆ ಹೂವನ್ನೇ ದಿಟ್ಟಿಸಿ ನೋಡಿದೆ. ಆ ಹೂವಿನ ಪರಿಚಯ ನನಗಾಗಲೇ ಇಲ್ಲ. ಇದು ಯಾವ ಸೀಮೆಯ ಹೂವೋ ಎಂದು ಆ ಮನೆಯ ಮುಖಂಡರಲ್ಲಿ ಪ್ರಶ್ನಿಸಿದೆ. ನಮ್ಮ ಕಡೆ ಅದಕ್ಕೆ ಮೀಸೆ ಹೂ ಅಥವಾ ಮೀಸೆ ಸಂಪಿಗೆ ಅಂತ ಕರೆಯುತ್ತಾರೆ ಎಂದಾಗ ಆಶ್ಚರ್ಯವಾಗಿತ್ತು.
ಆ ವಿಶಿಷ್ಟ ಹೂವನ್ನು ಮತ್ತೆ ಮತ್ತೆ ನೋಡಿ ಕಣ್ತುಂಬಿಕೊಂಡೆ. ಮಲೆನಾಡಿನ ನೆಲದಲ್ಲಿ ಕಂಡು ಬರುವ ಈ ಮೀಸೆ ಹೂವು, ಸಾಮಾನ್ಯವಾಗಿ ಮಳೆಗಾಲದ ಸಮಯದಲ್ಲಿ ಹೇರಳವಾಗಿರುತ್ತದೆ. ಇದರಲ್ಲಿಯೂ ಮೂರ್ನಾಲ್ಕು ಬಣ್ಣದ ಹೂಗಳಿವೆ. ಗುಚ್ಛ ರೂಪದಲ್ಲಿ ಅರಳಿ ಕಂಗೊಳಿಸುವ ಈ ವಿಶಿಷ್ಟ ಹೂವಿನ ವೈಯಾರ, ಸೌಂದರ್ಯ ನೋಡಿಯೇ ಆಸ್ವಾದಿಸಬೇಕು. ಮಾರ್ಜಾಲದ ಮೀಸೆಯಂತೆ ತೆಳ್ಳಗಿನ ರೋಮ ಇರುವ ಕಾರಣಕ್ಕಾಗಿಯೇ ಮೀಸೆ ಹೂವು ಎಂಬ ಹೆಸರು ಬಂದಿರಬಹುದು. ವಿಶೇಷ ಆರೈಕೆಯಿಲ್ಲದೆ ಸುಲಭವಾಗಿ ಬೆಳೆಯುವ ಈ ಹೂವು ಮಲೆನಾಡಿನ ಕೈತೋಟದ ಸಂಗಾತಿ.
ಚಿತ್ರ-ಬರಹ: ಗಣಪತಿ ಹಾಸ್ಪುರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.