ಅಧಿಕಾರಿಗಳ ವಾಕಿಗಳು
ಸಾಮಾನ್ಯವಾಗಿ ವಾಕಿ(ನಿಸ್ತಂತು)ಗಳು ಎಂದ ತಕ್ಷಣ ನೆನಪಿಗೆ ಬರುವುದು ಪೊಲೀಸರು ಬಳಸುವ ವಾಕಿಗಳು. ಆದರೆ, ಪ್ರತಿಯೊಬ್ಬ ಹಿರಿಯ ಪೊಲೀಸ್ ಅಧಿಕಾರಿಗಳಿಗೆ 'ವಾಕಿ'(ಪೊಲೀಸ್ ಸಿಬ್ಬಂದಿ) ಇರುತ್ತಾರೆ.
ಅದು ಪೊಲೀಸ್ ಪೇದೆ, ಮುಖ್ಯಪೇದೆ, ಎಎಸ್ಐ ಸಹ ಆಗಿರಬಹುದು. ರಾಜ್ಯ ಪೊಲೀಸ್ ಮಹಾನಿರ್ದೇಶಕ, ಪೊಲೀಸ್ ಆಯುಕ್ತ, ಪೊಲೀಸ್ ವರಿಷ್ಟಾಧಿಕಾರಿ(ಎಸ್ಪಿ, ಡಿಸಿಪಿ), ಸಹಾಯಕ ಪೊಲೀಸ್ ಆಯುಕ್ತ, ಪೊಲೀಸ್ ಇನ್ಸ್ಪೆಕ್ಟರ್ಗಳ ಬಳಿ ಇವರು ಕೆಲಸ ಮಾಡುತ್ತಾರೆ. ಅವರನ್ನು 'ವಾಕಿ' ಎನ್ನುತ್ತಾರೆ. ಪ್ರತಿ ಹಿರಿಯ ಅಧಿಕಾರಿಗೂ ಒಬ್ಬೊಬ್ಬ 'ವಾಕಿ' ಇರುತ್ತಾರೆ. ಅಧಿಕಾರಿಗಳು ಬಿಡುವಿಲ್ಲದ ಕೆಲಸದಲ್ಲಿ ತೊಡಗಿದ್ದಾಗ, ದೂರವಾಣಿ ಕರೆ ಸ್ವೀಕರಿಸಲು ಆಗದಿದ್ದಾಗ ಅವರ ಕರೆಗಳನ್ನು ಸ್ವೀಕರಿಸುವುದು, ಅದನ್ನು ಒಂದು ಪುಸ್ತಕದಲ್ಲಿ ಪಟ್ಟಿ ಮಾಡಿ ನಂತರ ಸಂಬಂಧಪಟ್ಟವರ ಗಮನಕ್ಕೆ ತರುವುದು ಈ 'ವಾಕಿ' ಕೆಲಸ.
ಕಿರಿಯ ಶ್ರೇಣಿಯ ಸಿಬ್ಬಂದಿ ಇದಕ್ಕೆ ನಿಯೋಜನೆಗೊಂಡಿರುತ್ತಾರೆ. ಪ್ರತಿಯೊಬ್ಬ ಅಧಿಕಾರಿಯ ಬಳಿ ಪಾಳಿ ಆಧಾರದ ಮೇಲೆ ಇಬ್ಬರು 'ವಾಕಿ'ಗಳು ಕೆಲಸ ನಿರ್ವಹಿಸುತ್ತಾರೆ.
- ಶಾಂತ ತಮ್ಮಯ್ಯ