ಮಂಜುಗಡ್ಡೆಯೂ ಸುಡುತ್ತದೆ!
ನಾವು ಯಾವುದೇ ಬಿಸಿ ವಸ್ತುಗಳನ್ನು ಮುಟ್ಟಿದ ಕೂಡಲೇ ಬೆರಳ ನರಾಗ್ರಗಳು ಪ್ರತಿಕ್ರಿಯಿಸುತ್ತವೆ. ಬೆರಳಿಗೆ ಯಾವುದೋ ಅಪಾಯ ಸಂಭವಿಸುತ್ತಿರುವುದಾಗಿ ಸಂದೇಶ ನೀಡುತ್ತದೆ. ಇದಕ್ಕೆ ಪ್ರತಿಯಾಗಿ ಮೆದುಳು ಬೆರಳಿನ ಮಾಂಸಖಂಡಕ್ಕೆ ತಕ್ಷಣವೇ ಬಿಸಿಯಿಂದ ಪಾರಾಗಲು ಆದೇಶ ನೀಡುತ್ತದೆ.
ಮಂಜುಗಡ್ಡೆಯೊಳಗೆ ದೀರ್ಘ ಸಮಯ ನಮ್ಮ ಬೆರಳಿಟ್ಟುಕೊಂಡಿದ್ದರೆ ಬೆರಳು ಸುಡುವ ಅನುಭವವಾಗುತ್ತದೆ. ಇದಕ್ಕೆ ಕಾರಣ ಮಂಜುಗಡ್ಡೆಯು ಬೆರಳಿನಲ್ಲಿರುವ ಉಷ್ಣವನ್ನು ಹೀರಿಕೊಳ್ಳುತ್ತದೆ. ಇದರಿಂದಾಗಿ, ಸುಟ್ಟ ಗಾಯದಿಂದ ಅಥವಾ ಸುಡುವಾಗ ಉಂಟಾಗುವ ಉರಿ, ನೋವು ಅನುಭವಕ್ಕೆ ಬರುತ್ತದೆ. ತಕ್ಷಣವೇ ಉಂಟಾಗುವ ಉಷ್ಣದ ನಷ್ಟದಿಂದಾಗಿ, ಬೆರಳಿನಲ್ಲಿ ಬೆಂಕಿ ತಗುಲಿದಂಥ ನೋವು ಉಂಟಾಗುತ್ತದೆ. ಮಂಜುಗಡ್ಡೆಯು ಘನ ಇಂಗಾಲದ ಡೈಆಕ್ಸೈಡ್ ಆಗಿರುವುದರಿಂದಾಗಿ ಬೆಂಕಿಯಷ್ಟೇ ಸುಡುತ್ತದೆ!
- ಅರಳಕುಪ್ಪೆ ಶ್ರೀನಿವಾಸ